March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅಳದಂಗಡಿಯಲ್ಲಿ ಆಮಂತ್ರಣ ದಶಮಾನೋತ್ಸವಕ್ಕೆ ಚಾಲನೆ

ಅಳದಂಗಡಿ: ಆಮಂತ್ರಣ ಸೇವಾ ಪ್ರತಿಷ್ಠಾನ ಅಳದಂಗಡಿ ಇದರ ದಶಮಾನೋತ್ಸವ ಸಾಂಸ್ಕೃತಿಕ, ಸಾಹಿತ್ಯಿಕ, ಜಾನಪದ, ಹಾಡು, ಯಕ್ಷಗಾನ, ನೃತ್ಯ, ಚಿತ್ರ ಸೇರಿದ ದ.ಕ ಜಾನಪದ ಜಾತ್ರೆ ಅಳದಂಗಡಿ ಅರಮನೆ ನಗರಿಯಲ್ಲಿ ಜ.17 ರಂದು ವಿದ್ಯುಕ್ತವಾಗಿ ಆರಂಭಗೊಂಡಿತು.

ಸಂಸದ ಕ್ಯಾ| ಬ್ರಿಜೇಶ್ ಚೌಟ ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿ ಸಾಹಿತ್ಯ, ಸಂಸ್ಕೃತಿ, ಕಲೆಯನ್ನು ಉಳಿಸಿ ಬೆಳೆಸುವ ಹಾಗೂ ಮಕ್ಕಳ ಕನಸು ಮತ್ತು ಭಾವನೆಗೆ ಪ್ರೇರಣೆ ನೀಡುವ ಆಮಂತ್ರಣದ ಇಂದಿನ ಕಾರ್ಯಕ್ರಮ ದೇವರು ಮೆಚ್ಚುವ ಕೆಲಸ, ರಾಷ್ಟ್ರ ನಿರ್ಮಾಣದ ದೊಡ್ಡ ಕಾಯ೯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಧ್ಯಕ್ಷತೆಯನ್ನು ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಶಿವಪ್ರಸಾದ್ ಅಜಿಲ ವಹಿಸಿದ್ದರು. ವೇದಿಕೆಯಲ್ಲಿ ಮಕ್ಕಳ ಸಾಹಿತಿ ಪ.ರಾ.ಶಾಸ್ತ್ರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ ಕೋಟ್ಯಾನ್, ಸದಾನಂದ ಪೂಜಾರಿ ಉಂಗಿಲಬೈಲು, ಹಿರಿಯರಾದ ಭುಜಬಲಿ, ನಿತ್ಯಾನಂದ ನಾವರ, ಸುಧೀರ್ ಆರ್.ಸುವಣ೯, ದ.ಕ ಜಿಲ್ಲಾ ಜಾನಪದ ಸಾಹಿತ್ಯ ಸಂಸ್ಥೆ ಅಧ್ಯಕ್ಷ ಪ್ರವೀಣ್ ಕೊಡಿಯಾಲ್ ಬೈಲ್, ಅಳದಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸರಸ್ವತಿ, ಯೋಜನೆ ಮೇಲ್ವಿಚಾರಕಿ ಯಶೋದಾ, ಎಕ್ಸಾಲೆಂಟ್ ಕಾಲೇಜಿನ ಉಪನ್ಯಾಸಕ ವಾದಿರಾಜ ಕಲ್ಲೂರಾಯ, ಟ್ರಸ್ಟ್ರಿಗಳಾದ ಅರುಣ್ ಅವ೯ ಹಾಗೂ ಸದಾನಂದ ಬಿ. ಕುದ್ಯಾಡಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅನಿತಾ ಶೆಟ್ಟಿ ಮೂಡಬಿದ್ರೆ ಇವರ ಕವನ ಸಂಕಲನ ‘ಕೆಂಪು ಬೊಟ್ಟಿನ ಹುಡುಗಿ ‘ ಹಾಗೂ ಶಾಲಿನಿ ಕೆಮ್ಮಣ್ಣು ಇವರ ಕವನ ಸಂಕಲನ ‘ಅಮೃತಾಧಾರೆ’ ಕೃತಿಯನ್ನು ಸಂಸದರು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಪೋಟೋ ಸ್ಪರ್ಧೆಯ ವಿಜೇತರಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ‘ಅರುವ ಶ್ರೀ ಮತ್ತು ಸತ್ಯ ಶ್ರೀ’ ಪ್ರಶಸ್ತಿಯನ್ನು ಗಣ್ಯರು ವಿತರಿಸಿದರು.


ಆಮಂತ್ರಣ ಸೇವಾ ಪ್ರತಿಷ್ಠಾನದ ಅಧ್ಯಕ್ಷ ವಿಜಯ ಕುಮಾರ್ ಜೈನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Related posts

ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನಲ್ಲಿ ಜಾಗೃತಿ ಸಪ್ತಾಹ ಕಾರ್ಯಕ್ರಮ

Suddi Udaya

ಗುರುವಾಯನಕೆರೆ ಸುಧೇಕಾರ್ ನಿವಾಸಿ ಭೂಮಾಪಕ ರಾಮಚಂದ್ರ ಕುಲಾಲ್ ಹೃದಯಾಘಾತದಿಂದ ನಿಧನ

Suddi Udaya

ಜೈನ ಬಸದಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಚಕರುಗಳಿಗೆ ಮಾಸಿಕ ಗೌರವ ಧನ ನೀಡಲು ಅನುದಾನ ಬಿಡುಗಡೆ

Suddi Udaya

ವಿಜ್ಞಾನ ಮಾದರಿ ತಯಾರಿ ಸ್ಪರ್ಧೆ: ವಾಣಿ ಆಂ. ಮಾ. ಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಸುಹಾಸ್ ಶೆಟ್ಟಿ ಕೊಲೆ ಪ್ರಕರಣ , ಮುಂಡಾಜೆಯಲ್ಲಿ ಟಯರ್ ಹೊತ್ತಿಸಿ ಆಕ್ರೋಶ

Suddi Udaya

ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠೆಯ ಪ್ರಯುಕ್ತ ಬಳಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ರಾಮ ತಾರಕ ಮಂತ್ರ ಜಪಯಜ್ಞ ಹಾಗೂ ದೀಪೋತ್ಸವ

Suddi Udaya
error: Content is protected !!