March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಏಷಿಯನ್ ನೆಟ್ ಬಾಲ್ ಚಾಂಪಿಯನ್ಶಿಪ್’ ಕ್ರೀಡಾಕೂಟ: ಭಾರತ ತಂಡದ ಪ್ರಾಥಮಿಕ ತರಬೇತಿ ಶಿಬಿರಕ್ಕೆ ಎಸ್.ಡಿ.ಎಂ ಕಾಲೇಜಿನ ಚಿಂತನ್ ಬಿ ಸಿ, ಪುನೀತ್ ಆಯ್ಕೆ

ಉಜಿರೆ : ಫೆಬ್ರವರಿ 05 ರಿಂದ 12ರವರೆಗೆ ದೆಹಲಿಯಲ್ಲಿ ನಡೆಯಲಿರುವ ಪುರುಷರ ಏಷಿಯನ್ ನೆಟ್ ಬಾಲ್ ಚಾಂಪಿಯನ್ಶಿಪ್ ಕ್ರೀಡಾಕೂಟಕ್ಕೆ ಭಾರತ ತಂಡದ ಪ್ರಾಥಮಿಕ ತರಬೇತಿ ಶಿಬಿರಕ್ಕೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನ ಸ್ನಾತಕೋತ್ತರ ಪದವಿ ಕೇಂದ್ರದ ವಿದ್ಯಾರ್ಥಿಗಳಾದ ಚಿಂತನ್ ಬಿ ಸಿ ಮತ್ತು ಪುನೀತ್ ಕುಮಾರ್ ಆಯ್ಕೆಗೊಂಡಿದ್ದಾರೆ.

ಮಡಿಕೇರಿಯ ಗೋಣಿಕೊಪ್ಪಲು ಮೂಲದ ಚೆನ್ನಪ್ಪ ಮತ್ತು ನಳಿನಾಕ್ಷಿ ದಂಪತಿಗಳ ಪುತ್ರನಾದ ಪುನೀತ್ ಹಾಗು ಮೂಡುಬಿದಿರೆ ಎಡಪದವಿನ ಜನಾರ್ದನ ಗೌಡ ಮತ್ತು ವಿಜಯ ದಂಪತಿಗಳ ಪುನೀತ್ ಕುಮಾರ್ ಈ ಹಿಂದೆ ತುಮಕೂರಿನ ಸಿದ್ಧಾರ್ಥ್ ಇನ್ಸ್ಟಿಟ್ಯೂಟ್ ನಲ್ಲಿ ನಡೆದ ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ಪುರುಷರ ನೆಟ್ ಬಾಲ್ ಪಂದ್ಯಾಟದಲ್ಲಿ ಭಾಗವಹಿಸಿ ಚಿನ್ನದ ಪದಕವನ್ನು ಗೆದ್ದಿರುತ್ತಾರೆ. ಜೊತೆಗೆ ರಾಜಸ್ಥಾನದ ಜೈಪುರದಲ್ಲಿ ನಡೆದ ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ಪುರುಷರ ನೆಟ್ ಬಾಲ್ ಪಂದ್ಯಾಟದಲ್ಲಿ ಭಾಗವಹಿಸಿರುತ್ತಾರೆ.

ಕಾಲೇಜಿನ ಇದೇ ವಿದ್ಯಾರ್ಥಿಗಳು ಇತ್ತೀಚೆಗೆ ತೆಲಂಗಾಣ ರಾಜ್ಯದ ಹೈದರಾಬಾದ್ ನಲ್ಲಿ ನಡೆದ 43ನೇ ಸೀನಿಯರ್ ನ್ಯಾಷನಲ್ ನೆಟ್ ಬಾಲ್ ಪಂದ್ಯಾವಳಿ ಯಲ್ಲಿ ಸಕ್ರೀಯವಾಗಿ ಪಾಲ್ಗೊಂಡು, ತಮಿಳುನಾಡಿನಲ್ಲಿ ನಡೆದ ಸೀನಿಯರ್ ಸೌತ್ ನ್ಯಾಷನಲ್ ನೆಟ್ ಬಾಲ್ ಪಂದ್ಯಾಕೂಟದಲ್ಲೂ ಭಾಗವಹಿಸಿರುತ್ತಾರೆ.

ಏಷಿಯನ್ ನೆಟ್ ಬಾಲ್ ಚಾಂಪಿಯನ್ಶಿಪ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಭಾರತ ತಂಡದ ಅಂತಿಮ ಆಯ್ಕೆ ಪ್ರಕ್ರಿಯೆ ಫೆಬ್ರವರಿಯ ಮೊದಲ ವಾರದಲ್ಲಿ ನಡೆಯಲಿದ್ದು, ರಾಷ್ಟ್ರ ಮಟ್ಟದದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕ್ರೀಡಾ ಪಟುಗಳಿಗೆ ಉಜಿರೆಯ ಎಸ್.ಡಿ.ಎಂ ಕ್ರೀಡಾ ಸಂಘದ ದೈಹಿಕ ಶಿಕ್ಷಣ ಉಪನ್ಯಾಸಕ ಸುದೀನ್ ಪೂಜಾರಿ ತರಬೇತಿಯನ್ನು
ನೀಡಿರುತ್ತಾರೆ.

Related posts

ಮಹಾ ಕುಂಭಮೇಳದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಪುಣ್ಯಸ್ನಾನ

Suddi Udaya

ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಕಡಮ್ಮಾಜೆ ಫಾರ್ಮ್ಸ್ ನ ದೇವಿಪ್ರಸಾದ್ ಕೆ. ಗೌಡರಿಗೆ ಕನ್ನಡಿಗ-2026 ಪ್ರಶಸ್ತಿ

Suddi Udaya

ಹೊಸ ವರ್ಷದ ನೆಪದಲ್ಲಿ ವಂಚನೆ ಸಾಧ್ಯತೆ ‘ಎಪಿಕೆ ಫೈಲ್’ ತೆರೆಯದಂತೆ ಸೂಚನೆ

Suddi Udaya

ಮುಂಡಾಜೆ : ಶಾಂತಿವನ – ಗಾಂಧಿಕಟ್ಟೆಯಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ಪೋಷಕರ ಸಭೆ

Suddi Udaya

ಹದಗೆಟ್ಟ ರಸ್ತೆ: ಸಮಾಜಸೇವಕ ಕಲಾಯಿ ಗಣೇಶ್ ಗೌಡ ಹಾಗೂ ಊರವರ ಸಹಕಾರದೊಂದಿಗೆ ರಸ್ತೆ ದುರಸ್ತಿ

Suddi Udaya
error: Content is protected !!