ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಧರ್ಮಸ್ಥಳ ಉಚಿತ ಟೈಲರಿಂಗ್ ತರಬೇತಿ ಶಿಬಿರದ ಸಮಾರೋಪ ಸಮಾರಂಭ

ಧರ್ಮಸ್ಥಳ : ಗ್ರಾಮ ಪಂಚಾಯತ್ ಧರ್ಮಸ್ಥಳ ಮಾನ್ವಿಶ್ರೀ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟ, ಕನ್ಯಾಡಿ ಸೇವಾಭಾರತಿ ಹಾಗೂ ಶ್ರೀ ದುರ್ಗಾ ಮಾತೃ ಮಂಡಳಿ ಇದರ ಸಹಭಾಗಿತ್ವದಲ್ಲಿ ಸ್ವ- ಸಹಾಯ ಸಂಘದ ಮಹಿಳೆಯರಿಗಾಗಿ ಉಚಿತ ಟೈಲರಿಂಗ್ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಜ.19 ರಂದು ಧರ್ಮಸ್ಥಳ ಗ್ರಾಮ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು.

ಮಾನ್ವಿಶ್ರೀ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಧನಲಕ್ಷ್ಮೀ ಮಾತನಾಡಿ, ಟೈಲರಿಂಗ್ ಕಲಿಯುವುದರಿಂದ ಬೇರೆ ಬೇರೆ ರೀತಿಯ ಸ್ವ – ಉದ್ಯೋಗದ ಅವಕಾಶವಿರುತ್ತದೆ. ಕಲಿತ ವಿದ್ಯೆ ಎಂದಿಗೂ ನಮಗೆ ಶಾಶ್ವತ ಮಹಿಳೆಯರು ಯಾವತ್ತಿಗೂ ಇನ್ನೊಬ್ಬರಿಗೆ ಅವಲಂಬಿತವಾಗದೆ ಸ್ವಾವಲಂಬಿ ಜೀವನವನ್ನು ನಡೆಸುವುದು ಅತ್ಯಗತ್ಯ ಕಲಿತಂತ ವಿದ್ಯೆಯನ್ನು ಅರ್ಧಕ್ಕೆ ಕೈ ಬಿಡದೆ ಮುಂದುವರಿಸಿಕೊಂಡು ಹೋಗುವಂತೆ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಮಲ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪಿ ಶ್ರೀನಿವಾಸ್ ರಾವ್, ಪಿಡಿಓ ಗಾಯತ್ರಿ, ಕನ್ಯಾಡಿ ಸೇವಾಭಾರತಿ ಅಧ್ಯಕ್ಷೆ ಸ್ವರ್ಣಗೌರಿ, ಶ್ರೀ ದುರ್ಗಾ ಮಾತೃ ಮಂಡಳಿಯ ಅಧ್ಯಕ್ಷೆ ಮಮತಾ, ಕೌಶಲ್ಯ ವಲಯ ಮೇಲ್ವಿಚಾರಕರು ಶ್ರೀಮತಿ ವೀಣಾಶ್ರೀ ಕೆ.ಕೆ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ವಸಂತಿ ಉಪಸ್ಥಿತರಿದ್ದರು. ಒಟ್ಟು 32 ಮಂದಿ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.

ಟೈಲರಿಂಗ್ ತರಬೇತುದಾರರಾದ ಶ್ರೀಮತಿ ಸುಮತಿ ಶುಭಹಾರೈಸಿ ಸಂತಸ ವ್ಯಕ್ತಪಡಿಸಿದರು. ಟೈಲರಿಂಗ್ ಶಿಬಿರಾರ್ಥಿಗಳ ಪರವಾಗಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.

LCRP ಪುಷ್ಪಾವತಿ ಸ್ವಾಗತಿಸಿ, ಮಾನ್ವಿಶ್ರೀ ಒಕ್ಕೂಟದ ಎಮ್ ಬಿಕೆ ಚಂದ್ರಾವತಿ ಕಾರ್ಯಕ್ರಮ ನಿರೂಪಿಸಿ, ಪಶು ಸಖಿ ಯಶೋಧ ಧನ್ಯವಾದವಿತ್ತರು.

Related posts

ಬೆಂಗಳೂರಿನ ದಾಸನಪುರದಲ್ಲಿ ಬೆಳ್ತಂಗಡಿ ಭಜನಾ ತರಬೇತುದಾರರಿಂದ ವಿಶೇಷ ಭಜನಾ ಕಾರ್ಯಕ್ರಮ

Suddi Udaya

ಹೊಸಂಗಡಿ ವಲಯದ ಒಕ್ಕೂಟದ ವತಿಯಿಂದ ಆರ್ಥಿಕ ಸಹಾಯಧನ

Suddi Udaya

ಕಳಿಯ: ಕಲ್ಕುರ್ಣಿ ನಿವಾಸಿ ಜಿನ್ನಪ್ಪ ಗೌಡ ನಿಧನ

Suddi Udaya

ಅಗ್ನಿವೀರ್ ಜಿಡಿ ಹುದ್ದೆಗೆ ಆಯ್ಕೆಯಾದ ಗುರುಕಿರಣ್ ರವರಿಗೆ ಶ್ರೀ ರಾಮ್ ಫ್ರೆಂಡ್ಸ್ ಬಾಜಾರು ವತಿಯಿಂದ ಸನ್ಮಾನ

Suddi Udaya

ಕಣಿಯೂರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಯತೀಶ್ ಶೆಟ್ಟಿ ಪಣೆಕ್ಕರ ಆಯ್ಕೆ

Suddi Udaya

ಅ.2: ನಾಗರಿಕ ಅಭಿನಂದನಾ ಸಮಿತಿ ವತಿಯಿಂದ ನಿವೃತ್ತ ಯೋಧ ಮಂಜುನಾಥ ಹಾಗೂ ಕರ್ನಾಟಕ ರಾಜ್ಯದ ಅತ್ಯುತ್ತಮ ಶಿಕ್ಷಕ ಪುರಸ್ಕೃತ ವಿ.ಕೆ. ವಿಟ್ಲ ರವರಿಗೆ ನಾಗರಿಕ ಅಭಿನಂದನಾ ಸಮಾರಂಭ

Suddi Udaya
error: Content is protected !!