37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ: ಸೇವಾಪ್ರತಿನಿಧಿಗಳ ಕೌಶಲ್ಯಾಭಿವೃದ್ಧಿ ತರಬೇತಿ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ಗುರುವಾಯನಕೆರೆ ಯೋಜನ ವ್ಯಾಪ್ತಿಯ ಸೇವಾಪ್ರತಿನಿಧಿಗಳ ವಿಶೇಷ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಬೆಳ್ತಂಗಡಿ ತರಬೇತಿ ಕೇಂದ್ರದಲ್ಲಿ ನಡೆಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ನಿರ್ದೇಶಕರಾದ ದಿನೇಶ್ ಪೂಜಾರಿ ರವರು ಗ್ರಾಮಾಬಿವೃದ್ಧಿ ಯೋಜನೆಯ ಹಿನ್ನಲೆ , ಗ್ರಾಮ ಅಭಿವೃದ್ಧಿ ಯೋಜನೆ ನಡೆದು ಬಂದ ದಾರಿ ಬಗ್ಗೆ ವಿವರಿಸಿದರೂ, ತಂಡಗಳ ಮೇಲ್ದರ್ಜೆಗೆ ಏರಿಸುವಲ್ಲಿ ಸುತ್ತೋಲೆ 64ರ ಎಂಟು ಅಂಶಗಳ ಬಗ್ಗೆ ಮಾಹಿತಿ ಮಾದೇಶ ನೀಡಿದರು.

ಉಡುಪಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ, ಸೇವಾ ಪ್ರತಿನಿಧಿಗಳಿಗೆ, ಶ್ರೀ ಕ್ಷೇತ್ರದ ಬಗ್ಗೆ, ಅಂಗ ಸಂಸ್ಥೆಗಳ ಬಗ್ಗೆ, ವಿವರಿಸುತ್ತಾ ತಾಲೂಕಿನ ಸರ್ವತೋಮುಖ ಅಭಿವೃದ್ಧಿಯ ಕನಸು ಕಂಡ ಪೂಜ್ಯರು ಪ್ರಾರಂಭಿಸಿದ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಅಂದಿನ ಕಾರ್ಯಕರ್ತರು ಮನೆ ಬೇಟಿ ಮಾಡಿ ಪ್ರತಿಯೊಂದು ಕುಟುಂಬದ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಶ್ರಮ ಪಟ್ಟು ಪ್ರಾಮಾಣಿಕವಾದ ಸೇವೆಯನ್ನು ನೀಡಿದ್ದಾರೆ. ನಾವು ಸದಸ್ಯರ ಸ್ಥಾನ ಮಾನ ವ್ಯಕ್ತಿತ್ವಕ್ಕೆ ಗೌರವವನ್ನು ನೀಡಬೇಕು. ತಾಲೂಕಿನ ಎಷ್ಟೋ ಮನೆಗಳಿಗೆ ಪೂಜ್ಯರು ಖುದ್ದು ಭೇಟಿ ನೀಡಿದ್ದಾರೆ. ನಾವು ಒಬ್ಬ ಒಳ್ಳೆಯ ಮನುಷ್ಯರಾಗಬೇಕು . ಉತ್ತಮ ಕಾರ್ಯಕರ್ತರಾಗಬೇಕು. ನಾವು ಮಾಡುವ ಸೇವೆ ಬೆಳಗುವ ದೀಪಕ್ಕೆ ಎಣ್ಣೆಯನ್ನು ಹಾಕುವ ಕೆಲಸವಾಗಬೇಕು. ಗೆಲ್ಲುವುದು ನಂಬಿಕೆ ಪ್ರೀತಿ ವಿಶ್ವಾಸ, ಪ್ರಾಮಾಣಿಕವಾದ ಸೇವೆ ಮತ್ತು ಗೌರವದ ಸೇವೆಯನ್ನು ನೀಡಿ ಎಂದರು. ಉತ್ತಮ ಗುರಿಯನ್ನು ಇಟ್ಟುಕೊಂಡು ಬೇಟಿ ಮಾಡಿ ಪರಿಶೀಲನಾ ಕ್ರಮ ಉತ್ತಮವಾಗಿದ್ದಲ್ಲಿ ನಮಗೆ ಯಾವುದೇ ರೀತಿಯ ಒತ್ತಡ ಆಗಲು ಸಾಧ್ಯವಿಲ್ಲ ನಾವು ಮಾಡುವ ತಪ್ಪುಗಳೇ ನಮಗೆ ಒತ್ತಡವಾಗುತ್ತದೆ ಎಲ್ಲರನ್ನೂ ಮಾತನಾಡಿಸಿ ಅವರ ಸಮಸ್ಯೆಗಳಿಗೆ ಪರಿಹಾರ ನೀಡಿದ ಹೆಚ್ಚು ಹೆಚ್ಚು ಅಧ್ಯಯನದಿಂದ ವಿಶ್ವಾಸ ನಂಬಿಕೆ ಹೆಚ್ಚಾಗುತ್ತದೆ ಎಂದು ಮಾರ್ಗದರ್ಶನ ನೀಡಿದರು.

Related posts

ಗೋವಿಂದೂರು: ರಸ್ತೆಗೆ ಬಿದ್ದ ಬೃಹತ್ ಗಾತ್ರದ ಮರ

Suddi Udaya

ಉಜಿರೆ: ಶ್ರೀ ವನದುರ್ಗಾ, ಶ್ರೀ ನಾಗಬ್ರಹ್ಮ ರಕ್ತೇಶ್ವರಿ ದೈವ ಮತ್ತು ಪರಿವಾರ ದೇವತೆಗಳ ವಾರ್ಷಿಕ ಆರಾಧನೆ, ನೂರಾರು ಭಕ್ತರು ಭಾಗಿ

Suddi Udaya

ಪಿಡಬ್ಲ್ಯೂಡಿ ಗುತ್ತಿಗೆದಾರ ಮಹಮ್ಮದ್ ಮದ್ದಡ್ಕ ಅಸೌಖ್ಯದಿಂದ ನಿಧನ

Suddi Udaya

ಸಿಎ ಪರೀಕ್ಷೆಯಲ್ಲಿ ಮಡಂತ್ಯಾರಿನ ಅಲ್ ಸ್ಟನ್ ಸೋನಿಲ್ ಡಯಾಸ್ ತೇರ್ಗಡೆ

Suddi Udaya

ನಾರಾವಿ ವಲಯ ಮಟ್ಟದ ಕ್ರೀಡಾಕೂಟ: ಪಡಂಗಡಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳ ತಂಡ ರಿಲೇಯಲ್ಲಿ ಪ್ರಥಮ ಸ್ಥಾನ

Suddi Udaya

ಅಳದಂಗಡಿ ಸ. ಪ್ರೌ. ಶಾಲೆ ಮಕ್ಕಳಿಂದ ನಗರ ಸ್ವಚ್ಛತೆ, ಪ್ಲಾಸ್ಟಿಕ್ ಬಳಕೆ ಬಗ್ಗೆ ಜಾಗೃತಿ

Suddi Udaya
error: Content is protected !!