September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಜ.22: ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ 108 ಕಾಯಿ ಗಣಹೋಮ ಹಾಗೂ ಮೂಡಪ್ಪ ಸೇವೆ

ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಗಳವರ ನೇತೃತ್ವದಲ್ಲಿ 108 ಕಾಯಿ ಗಣಹೋಮ ಹಾಗೂ ಮೂಡಪ್ಪ ಸೇವೆ ಜ.22 ರಂದು ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಶಬರಾಯ ತಿಳಿಸಿದ್ದಾರೆ.

ಬೆಳಿಗ್ಗೆ 8.00ರಿಂದ 108 ಕಾಯಿ ಗಣಹೋಮ ಮತ್ತು ಅಥರ್ವಶೀರ್ಷಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪಲ್ಲಪೂಜೆ, ರಾತ್ರಿ ಗಂಟೆ 7.30ರಿಂದ ಮೂಡಪ್ಪಸೇವೆ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.


ಸಾಂಸ್ಕೃತಿಕ ಕಾರ್ಯಕ್ರಮ: ಬೆಳಗ್ಗೆ ಶ್ರೀ ವಾಮನ್ ನಾಯಕ್ ಉಪ್ಪಿನಂಗಡಿ ಇವರ ಸಂಯೋಜನೆಯಲ್ಲಿ ಆಸಕ್ತ ವಿವಿಧ ಭಜನಾ ತಂಡಗಳಿಂದ “ಭಜನಾ ಸೇವೆ”, ಸಂಜೆ ಶ್ರೀ ಕ್ಷೇತ್ರ ಸೌತಡ್ಕದ ಶಿಶುಮಂದಿರದ ಪುಟಾಣಿ ವಿದ್ಯಾರ್ಥಿಗಳಿಂದ “ಚಿಣ್ಣರ ಚಿಲಿಪಿಲಿ” ಸಾಯಂಕಾಲ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗಾಯಕ ಪುತ್ತೂರು ಚಂದ್ರಶೇಖರ ಹೆಗ್ಡೆ ನಿರ್ದೇಶನದ ಪುನೀತ್ ಆರ್ಕೆಸ್ಟ್ರಾ -ಪುತ್ತೂರು ಇವರಿಂದ “ಭಕ್ತಿ ಸಿಂಚನ”, ರಾತ್ರಿ ನರೇಶ್ ಕುಮಾರ್ ಸಸಿಹಿತ್ಲು ನಿರ್ದೇಶನದ ತುಳು ನಾಟಕ “ಬ್ರಹ್ಮ ರಕ್ಕಸ” ನಡೆಯಲಿದೆ.

Related posts

ಶಿರ್ತಾಡಿ: ಸಾಯಿ ಎಂಟರ್ಪ್ರೈಸಸ್ ನಲ್ಲಿ 4 ನೇ ಹಂತದ ಲಕ್ಕಿ ಸ್ಕೀಮ್: 15 ಸದಸ್ಯರನ್ನು ಸೇರಿಸಿದ ಸದಸ್ಯರಿಗೆ ಸ್ಕೀಮ್ ಕಾರ್ಡ್ ಉಚಿತ

Suddi Udaya

ರಾಜ್ಯ ಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ: ಎಸ್.ಡಿ.ಎಂ. ವಿದ್ಯಾರ್ಥಿಗೆ ಪ್ರಶಂಸಾ ಪ್ರಮಾಣಪತ್ರ

Suddi Udaya

ರಾಜಕೇಸರಿ ಸೇವಾ ಟ್ರಸ್ಟ್ ನ ನೂತನ ಲಾಂಛನ ಬಿಡುಗಡೆ

Suddi Udaya

ಇತಿಹಾಸ ಪ್ರಸಿದ್ದ ಬಳಂಜ ದೇವಸ್ಥಾನದ ಭಕ್ತವೃಂದದಿಂದ ಶಾಸಕ ಹರೀಶ್ ಪೂಂಜರವರ ಭೇಟಿ

Suddi Udaya

‘ಪ್ರೇರಣಾ – 2026’ ರಾಷ್ಟ್ರ ಮಟ್ಟದ ಸಾಂಸ್ಕೃತಿಕ ಉತ್ಸವ : ಉಜಿರೆಯ ಎಸ್.ಡಿ.ಎಂ ಕಾಲೇಜು ಚಾಂಪಿಯನ್ಸ್

Suddi Udaya

ಉಜಿರೆಯಲ್ಲಿ ಐಶ್ವರ್ಯ ಬ್ಯಾಂಗಲ್ ಸ್ಟೋರ್ ಶುಭಾರಂಭ

Suddi Udaya
error: Content is protected !!