September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವಾಣಿ ಶಿಕ್ಷಣ ಸಂಸ್ಥೆಗೆ ಅಮೇರಿಕದ ಡಾ. ರಾಮಯ್ಯ ಗೌಡ, ಶ್ರೀಮತಿ ಕೋನಿ ದಂಪತಿ ಭೇಟಿ

ಬೆಳ್ತಂಗಡಿ: ವಿದ್ಯಾರ್ಥಿಗಳು ತಮ್ಮ ಸ್ವ ಬುದ್ಧಿ ಶಕ್ತಿಯಿಂದ ಯೋಚನೆ, ಯೋಜನೆಯನ್ನು ಬೆಳೆಸಿಕೊಳ್ಳಬೇಕು. ಜ್ಞಾನವು ಸ್ವಂತ ಆಗಿರಬೇಕು ಹೊರತು ಕೃತಕವಾಗಿರಬಾರದು ಎಂದು ವಾಣಿ ಶಿಕ್ಷಣ ಸಂಸ್ಥೆಯ ಪೋಷಕರು ಹಾಗೂ ದಾನಿಗಳು ಅಮೇರಿಕದ ಕಾರ್ಡಿಯೋ ವಾಸ್ಕಿಲರ್ ಸರ್ಜನ್ ಡಾ. ರಾಮಯ್ಯ ಗೌಡ ಹೇಳಿದರು.

ಅಮೇರಿಕದಲ್ಲಿ ಸುಮಾರು 50 ವರ್ಷಗಳಿಂದ ನೆಲೆಸಿರುವ ಅವರು ವಾಣಿ ಶಿಕ್ಷಣ ಸಂಸ್ಥೆಗೆ ಭೇಟಿಕೊಟ್ಟು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಾ, ಆಧುನಿಕ ತಂತ್ರಜ್ಞಾನದ ಈ ಕಾಲದಲ್ಲಿ ಮೊಬೈಲ್ ಬಳಕೆ ಹೆಚ್ಚಾಗುತ್ತಿರುವುದು ವಿಪರ್ಯಾಸವಾಗಿದೆ. ಅದನ್ನು ನಮ್ಮ ಜ್ಞಾನಕ್ಕೆ ಅನುಸಾರವಾಗಿ ಮಿತವಾಗಿ ಬಳಸಬೇಕು ಎಂದರು.

ಡಾ ರಾಮಯ್ಯ ಗೌಡ ಅವರ ಪತ್ನಿ ಕೋನಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಾ, ಜೀವನಕ್ಕೆ ನಿಜವಾದ ಅಡಿಪಾಯ ಹಾಕುವವರು ಶಿಕ್ಷಕರು. ಇದರಿಂದ ವಿದ್ಯಾರ್ಥಿಗಳ ಭವಿಷ್ಯ ರೂಪುಗೊಳ್ಳುವುದು. ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಶಿಕ್ಷಣವನ್ನು ಮುಂದುವರಿಸಬೇಕು. ಇದರಿಂದ ನಿರುದ್ಯೋಗ ಮತ್ತು ಆರ್ಥಿಕ ಸಂಕಷ್ಟಗಳನ್ನು ನಿವಾರಿಸಿಕೊಳ್ಳಬಹುದು ಎಂದರು.

ಡಾ ರಾಮಯ್ಯಗೌಡ ದಂಪತಿಗಳು ವಾಣಿ ಶಿಕ್ಷಣ ಸಂಸ್ಥೆಯ ಎಲ್ ಕೆ ಜಿ ವಿದ್ಯಾರ್ಥಿಗಳೊಂದಿಗೂ ಸಂವಾದ ನಡೆಸಿದರು.
ವಾಣಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಿ ಕುಶಾಲಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ನಾರಾಯಣ ಗೌಡ ದೇವಸ್ಯ, ಕಾರ್ಯದರ್ಶಿ ಗಣೇಶ್ ಗೌಡ, ಜೊತೆ ಕಾರ್ಯದರ್ಶಿ ಶ್ರೀನಾಥ್ ಎಂಕೆ, ಸಂಘಟನಾ ಕಾರ್ಯದರ್ಶಿ ಕೃಷ್ಣಪ್ಪ ಗೌಡ ಸವಣಾಲು, ನಿರ್ದೇಶಕರಾದ ಉಷಾ ವೆಂಕಟರಮಣ ಗೌಡ, ಜಯಾನಂದ ಗೌಡ ಪ್ರಜ್ವಲ್, ದಿನೇಶ್ ಗೌಡ ಕೊಯ್ಯೂರು, ಡಾ. ರಾಮಯ್ಯ ಗೌಡರ ಸಹೋದರ ಗೋಪಾಲ ಗೌಡ ರೂಪ ದಂಪತಿಗಳು, ತಾಲೂಕು ಮಹಿಳಾ ಪ್ರತಿನಿಧಿ ಶೋಭ ನಾರಾಯಣಗೌಡ, ವಾಣಿ ಸಂಸ್ಥೆಯ ಆಡಳಿತಾಧಿಕಾರಿ ಪ್ರಸಾದ್ ಕುಮಾರ್, ವಾಣಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿ ಸುಹಾಸಿನಿ, ಉಪಸಿತರಿದ್ದರು.

ವಾಣಿ ಶಿಕ್ಷಣ ಸಂಸ್ಥೆಯ ಗೌರವಾಧ್ಯಕ್ಷ ಹೆಚ್ ಪದ್ಮಗೌಡ ಸ್ವಾಗತಿಸಿ, ವಾಣಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಲಕ್ಷ್ಮೀನಾರಾಯಣ ಕೆ ಧನ್ಯವಾದವಿತ್ತರು. ಕಾಲೇಜಿನ ಪ್ರಾಂಶುಪಾಲರು ವಿಷ್ಣು ಪ್ರಕಾಶ್ ಎಂ ಕಾರ್ಯಕ್ರಮ ನಿರೂಪಿಸಿದರು.

Related posts

ಕೊಕ್ಕಡ ಅರೆಕಾ ಪ್ಲೇಟ್ ಇಂಡಸ್ಟ್ರಿಸ್ ಮಾಲಕ ಶ್ರೀಕಾಂತ್ ರಿಂದ ಉಪ್ಪಾರಪಳಿಕೆ ಯಿಂದ ಗೋಳಿತೊಟ್ಟು ರಸ್ತೆಯಲ್ಲಿ ಇದ್ದ ಗಿಡಗಂಟಿ ಹಾಗೂ ಪೊದೆಗಳ ದುರಸ್ತಿ ಕಾರ್ಯ

Suddi Udaya

ಬಂದಾರು ಸಿದ್ಧಿ ವಿನಾಯಕ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಕಚೇರಿ ಉದ್ಘಾಟನೆ

Suddi Udaya

ಉಜಿರೆ: ‘ಎಸ್.ಡಿ.ಎಂ. ನೆನಪಿನಂಗಳ’ದ ಹದಿನಾರನೇ ಕಂತಿನ ಕಾರ್ಯಕ್ರಮ

Suddi Udaya

ಕೊಕ್ಕಡ ಪ್ರೌಢ ಶಾಲೆಯಿಂದ ರೂ. 3.20 ಲಕ್ಷ ಮೌಲ್ಯದ ಬ್ಯಾಟರಿ ಕಳವು ಮಾಡಿದ ಮೂವರ ಬಂಧನ

Suddi Udaya

ಲಾಯಿಲ: ಪ್ರಸನ್ನ ಫಾರ್ಮಸಿ ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ 12 ತೆಂಗಿನಕಾಯಿ ಗಣಹೋಮ ಮತ್ತು ಚಂಡಿಕಾ ಹೋಮ

Suddi Udaya
error: Content is protected !!