March 7, 2026
ಪ್ರಮುಖ ಸುದ್ದಿಬೆಳ್ತಂಗಡಿವರದಿ

ಎಸ್.ಡಿ.ಎಂ ಕಾಲೇಜಿನಲ್ಲಿ ‘ಎಸ್.ಡಿ.ಎಂ ನೆನಪಿನಂಗಳ’ ಕಾರ್ಯಕ್ರಮ; ಅರ್ಹ ವಿದ್ಯಾರ್ಥಿನಿಗೆ ವಿದ್ಯಾರ್ಥಿ ವೇತನ ವಿತರಣೆ: ದಿ. ಪ್ರೊ. ಎಸ್. ಪ್ರಭಾಕರ್ ರವರಿಗೆ ನುಡಿನಮನ

ಉಜಿರೆ : ಮನುಷ್ಯನಿಗೆ ಪ್ರತಿ ತಪ್ಪುಗಳು ಹೊಸ ಪಾಠ ಮತ್ತು ಅನುಭವವನ್ನು ನೀಡುತ್ತದೆ. ಆ ಅನುಭವದ ಮೂಲಕ ನಮ್ಮ ಭವಿಷ್ಯದ ದಾರಿಯನ್ನು ಕಂಡುಕೊಳ್ಳಬೇಕು. ಈ ಕಾಲೇಜು ಜೀವನ ನೂರಾರು ಸಾಧನೆಗಳನ್ನು ಮಾಡಲು ಅವಕಾಶವನ್ನು ಕಲ್ಪಿಸಿಕೊಡುವ ಆಲಯ. ಗುರು ಹಿರಿಯರ ಮಾರ್ಗದರ್ಶನ ಹಾಗೂ ಸಾಧಕರ ಬದುಕಿನಿಂದ ಪ್ರೇರೆಪಿತರಾಗಿ ಸ್ವ ಪ್ರಯತ್ನದಿಂದ ಮುನ್ನುಗ್ಗದಿದ್ದರೆ ನಮಗೆ ಯಾವತ್ತೂ ಕ್ಷಮೆ ಇಲ್ಲ ಎಂದು ಉಳಿಯಬೀಡು ಅನುವಂಶಿಕ ಆಡಳಿತ ಮೊಕ್ತೇಸರರು, ಮೂಡುಬಿದಿರೆಯ ಜೈನ ಪ್ರೌಢಶಾಲೆಯ ಕನ್ನಡ ಪ್ರಾಧ್ಯಾಪಕರು ಹಾಗು ಎಸ್.ಡಿ.ಎಂ ಕಾಲೇಜಿನ ಹಿರಿಯ ವಿದ್ಯಾರ್ಥಿ ನಿತೇಶ್ ಬಲ್ಲಾಳ್ ಅಭಿಪ್ರಾಯ ಪಟ್ಟರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ( ಸ್ವಾಯತ್ತ) ಕಾಲೇಜಿನ ಸಮ್ಯಕ್ ದರ್ಶನ ಸಭಾಭವನದಲ್ಲಿ ಎಸ್.ಡಿ.ಎಂ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘ ಉಜಿರೆ, ಎಸ್.ಡಿ.ಎಂ ಕಾಲೇಜಿನ ಸಹಕಾರದಲ್ಲಿ ಆಯೋಜಿಸಿದ್ದ 19ನೇ “ಎಸ್.ಡಿ.ಎಂ ನೆನಪಿನಂಗಳ” ಸರಣಿ ಕಾರ್ಯಕ್ರಮದ ಕಾಲೇಜಿನ ಹಿರಿಯ ವಿದ್ಯಾರ್ಥಿಯೊಂದಿಗೆ ಸಂವಾದ ಹಾಗು ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ್ ಪಿ ಮಾತನಾಡಿ, ಈ ನೆಲದ ಮಹಾನ್ ಸಾಧಕರ ಜೀವನ ಸದಾ ನಮಗೆಲ್ಲರಿಗೂ ಪ್ರೇರಣೆ. ಈ ಪ್ರೇರಣೆ ವಿದ್ಯಾರ್ಥಿಗಳಲ್ಲೂ ಜಾಗರೂಕವಾದಾಗ ನೆನಪಿನಂಗಳದಂತ ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ. ನೆನಪಿನಂಗಳ ಕಾರ್ಯಕ್ರಮಕ್ಕೆ ಅದರದ್ದೆ ಆದ ಹಿನ್ನಲೆ ಮತ್ತು ಉದ್ದೇಶವನ್ನು ಹೊತ್ತುಕೊಂಡು ನಿರಂತರವಾಗಿ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಪ್ರತಿಯೊಬ್ಬ ಸಾಧಕ ಅತಿಥಿಯ ಮಾತು ನಮಗೆ ಸ್ಪೂರ್ತಿ ನೀಡಬೇಕು. ಸಾಧಕರ ವ್ಯಕ್ತಿತ್ವ ನಮ್ಮ ವ್ಯಕ್ತಿತ್ವವನ್ನೂ ರೂಪಿಸುವಂತೆ‌ ಆಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್.ಡಿ.ಎಂ ಹಿರಿಯ ವಿದ್ಯಾರ್ಥಿ ಸಂಘ ಉಜಿರೆ ಇದರ ಅಧ್ಯಕ್ಷ, ನಿವೃತ್ತ ವರಿಷ್ಠಾಧಿಕಾರಿ ಪೀತಾಂಬರ ಹೆರಾಜೆ ಮಾತನಾಡಿ, ಗುರು ಹಿರಿಯರು ಹಾಗು ಪೋಷಕರು ನಮ್ಮ ನಿಜವಾದ ಮಾರ್ಗದರ್ಶಕರು. ನಮ್ಮ ಸಾಧನೆಯ ಮೂಲಕ ಅವರ ಸಂತಸಕ್ಕೆ ನಾವು ಕಾರಣೀಭೂತರಾಗಬೇಕು. ಜೊತೆಗೆ ಸಂಸ್ಥೆ, ಊರು ಹಾಗೂ ಸಮಾಜದ ಗೌರವವನ್ನು ಹೆಚ್ಚಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ತನ್ನ ವೃತ್ತಿ ಬದುಕಿನಲ್ಲಿ ನಾನ ಹುದ್ದೆಗಳಲ್ಲಿ ಹಲವು ದಶಕಗಳಿಂದ ಮಾಡಿಕೊಂಡು ಬಂದಿರುವ ಎಸ್.ಡಿ.ಎಂ ಸಂಸ್ಥೆಯ ಹಿರಿಯ ವಿದ್ಯಾರ್ಥಿಯ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ಅತಿಥಿಗಳಾಗಿ ನಿತೇಶ್ ಬಲ್ಲಾಳ್ ರವರಿಗೆ ಪ್ರಾಂಶುಪಾಲ ಪ್ರೊ.ವಿಶ್ವನಾಥ ಪಿ ಎಸ್.ಡಿ.ಎಂ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಸನ್ಮಾನಿಸಿದರು.

ಕಾರ್ಯಕ್ರಮದದಲ್ಲಿ ಬೋಧಕ ಮತ್ತು ಬೋಧಕೇತರರ ಸಿಬ್ಬಂದಿಗಳು ಸೇರಿದಂತೆ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಎಸ್.ಡಿ.ಎಂ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ದಿವಾ ಕೊಕ್ಕಡ ನಿರೂಪಿಸಿ, ವಂದಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಹಿರಿಯ ವಿದ್ಯಾರ್ಥಿ ಸಂಘ ಸಮಿತಿಯ ಸಂಯೋಜಕ ಡಾ. ಎಂ.ಪಿ ಶ್ರೀನಾಥ್ ಕಾರ್ಯಕ್ರಮವನ್ನು ಸಂಯೋಜಿಸಿದರು. ಉಪನ್ಯಾಸಕ ದೀಕ್ಷಿತ್ ರೈ ಸಹಕರಿಸಿದರು.

ವಿದ್ಯಾರ್ಥಿ ವೇತನ ವಿತರಣೆ :

ನೆನಪಿನಂಗಳ ಕಾರ್ಯಕ್ರಮದ ಆಶಯದಂತೆ ಕಾಲೇಜಿನ ಅರ್ಹ ವಿದ್ಯಾರ್ಥಿಗೆ ಎಸ್.ಡಿ.ಎಂ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ವಿದ್ಯಾರ್ಥಿ ವೇತನವನ್ನು ನೀಡಲಾಯಿತು. ಈ ಬಾರಿ ಕಾಲೇಜಿನ ದ್ವಿತೀಯ ವರ್ಷದ ಬಿಸಿಎ ವಿದ್ಯಾರ್ಥಿನಿ ಕುಮಾರಿ ಧನ್ಯ ಇವರಿಗೆ ಅತಿಥಿಗಳಾದ ನಿತೇಶ್ ಬಲ್ಲಾಳ್ ಚೆಕ್ ನೀಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ನಿವೃತ್ತ ವರಿಷ್ಠಾಧಿಕಾರಿ ಪೀತಾಂಬರ ಹೆರಾಜೆ, ಪ್ರಾಂಶುಪಾಲ ಪ್ರೊ ವಿಶ್ವನಾಥ್ ಪಿ, ಪರೀಕ್ಷಾಂಗ ಕುಲಸಚಿವ ಗಣೇಶ್ ನಾಯಕ್, ಸಂಘದ ಸಂಚಾಲಕ ಡಾ. ಎಂ. ಪಿ ಶ್ರೀನಾಥ್, ಸದಸ್ಯ ದಿವಾಕರ್ ಕೊಕ್ಕಡ, ದೀಕ್ಷಿತ್ ರೈ, ಅರವಿಂದ ಉಪಸ್ಥಿತರಿದ್ದರು.

ದಿ. ಪ್ರೊ. ಎಸ್. ಪ್ರಭಾಕರ್ ರವರಿಗೆ ನುಡಿನಮನ :

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಉಜಿರೆಯ ಎಸ್.ಡಿ.ಎಂ ಕಾಲೇಜಿನ ಸ್ಥಾಪಕ ಪ್ರಾಚಾರ್ಯರಾಗಿದ್ದ ದಿವಂಗತ ಪ್ರೊ. ಎಸ್. ಪ್ರಭಾಕರವರ ಭಾವಪೂರ್ಣ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನುಡಿನಮನವನ್ನು ಸಲ್ಲಿಸಲಾಯಿತು. ಒಂದು ನಿಮಿಷದ ಮೌನ ಪ್ರಾರ್ಥನೆಯ ಮೂಲಕ ಸಂತಾಪ ಸೂಚಿಸಲಾಯಿತು.

Related posts

ನಿಡ್ಲೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಮತ್ತು ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನಾ ಕಾರ್ಯಕ್ರಮ

Suddi Udaya

ಜೂ. 23: ಮುಂಗಾರು ಪೂರ್ವ ನಿರ್ವಹಣೆಯ ಪ್ರಯುಕ್ತ ವಿದ್ಯುತ್ ನಿಲುಗಡೆ

Suddi Udaya

ಬೆಳ್ತಂಗಡಿ ವಲಯದ ಮಟ್ಟದ ಪ್ರಗತಿ ಬಂಧು ಒಕ್ಕೂಟಗಳ ಪದಗ್ರಹಣ ಸಮಾರಂಭ ಹಾಗೂ ಸಾಧನಾ ಸಮಾವೇಶ

Suddi Udaya

ಜೆ.ಇ.ಇ.(ಬಿ.ಆರ್ಕ್) ಫಲಿತಾಂಶ ಪ್ರಕಟ: ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಅಮೋಘ ಸಾಧನೆ

Suddi Udaya

ಉಡುಪಿ ಶ್ರೀಕೃಷ್ಣ ಮಾಸೋತ್ಸವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್ ದಂಪತಿಗಳಿಗೆ ಶ್ರೀಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಗೌರವ

Suddi Udaya

ತಾಲೂಕು ಹಬ್ಬಗಳ ಆಚರಣೆ ಸಮಿತಿಯಿಂದ ಡಾ|| ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆ

Suddi Udaya
error: Content is protected !!