March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶದ ಪೂರ್ವಭಾವಿ ಸಭೆ

ಮಚ್ಚಿನ: ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನ ಬಳ್ಳಮಂಜದಲ್ಲಿ ಶ್ರೀ ಈಶ್ವರ ದೇವರ ಬ್ರಹ್ಮಕಲಶದ ಪೂರ್ವಭಾವಿ ಸಭೆಯು ಜ.31ರಂದು ಶ್ರೀ ಕ್ಷೇತ್ರ ಬಳ್ಳಮಂಜ ದೇವಸ್ಥಾನದಲ್ಲಿ ನಡೆಯಿತು.

ಮಾ.29ರಿಂದ ಎ.6 ರ ವರೆಗೆ ಪರ್ಯಂತ ಬಳ್ಳಮಂಜ ದೇವಸ್ಥಾನದಲ್ಲಿ ನಡೆಯುವ ಬ್ರಹ್ಮ ಕಲಶದ ಪ್ರಯುಕ್ತ ದೇವಸ್ಥಾನದ ವತಿಯಿಂದ ರಚಿಸಿದ ಸಮಿತಿಯ ಸಭೆಯ ಅಧ್ಯಕ್ಷ ವಸಂತ ಗೌಡ ಮರಕಡ, ಗುತ್ತಿನ ಮನೆಯವರು ಊರ ಗಣ್ಯರು ಸಮಿತಿಯ ಸದಸ್ಯರು ಶ್ರಮದಾನ ಮಾಡಿದ ಶ್ರಮಿಕರು ಹಾಗೂ ದೇವಸ್ಥಾನದ ಸಿಬಂದಿ ವರ್ಗದವರ ಉಪಸ್ಥಿತಿಯಲ್ಲಿ ನಡೆಯಿತು.

ಕ್ಷೇತ್ರದ ಅನುವಂಶಿಯ ಆಡಳಿತ ಮೊಕ್ತೇಸರರಾದ ಡಾ| ಹರ್ಷ ಸಂಪಿಗೆತ್ತಾಯ ಬ್ರಹ್ಮಕಲಶವನ್ನು ಮಾದರಿಯಾಗಿ ವಿಜೃಂಭಣೆಯಿಂದ ನಡೆಸುವ ಬಗ್ಗೆ ರೂಪು ರೇಷೆಗಳನ್ನು ವಿವರಿಸಿದರು. ಅಧ್ಯಕ್ಷರು ಉತ್ತಮ ರೀತಿಯಲ್ಲಿ ಬಳ್ಳಮಂಜ ಬ್ರಹ್ಮಕಲಶ ಯಶಸ್ವಿಯಾಗಿ ನಡೆಯಲು ಎಲ್ಲರ ಸಹಕಾರವನ್ನು ಕೋರಿದರು. ಸಭೆಯಲ್ಲಿ ಈವರೆಗೆ ದೇಣಿಗೆ ನೀಡಿದ ದಾನಿಗಳ ಹೆಸರು ಖರ್ಚು ವೆಚ್ಚಗಳ ಮಾಹಿತಿಯನ್ನು ನೀಡಲಾಯಿತು. ಕ್ಷೇತ್ರದ ಸಿಬ್ಬಂದಿಗಳಾದ ಬಾಲಕೃಷ್ಣ ಬಿ ಸ್ವಾಗತಿಸಿ, ಸುಧೀರ್ ಶೆಟ್ಟಿ ಕೋರಬೆಟ್ಟು ಧನ್ಯವಾದವಿತ್ತರು.

Related posts

ಕಾಪಿನಡ್ಕ: ಬಳೆ ವ್ಯಾಪಾರಿ ಲಕ್ಷ್ಮಿದಾಸ್ ಹೃದಯಾಘಾತದಿಂದ ನಿಧನ

Suddi Udaya

ವಿ. ಹಿಂ. ಪ, ಬಜರಂಗದಳ ಪದ್ಮುಂಜ ಘಟಕದಿಂದ ಪದ್ಮುಂಜ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ವಚ್ಛತಾ ಆಂದೋಲನ

Suddi Udaya

ಉಜಿರೆ ಅನುಗ್ರಹ ಶಾಲೆಯಲ್ಲಿ “ಕಲರ‍್ಸ್ ಡೇ”

Suddi Udaya

ಕುತ್ಲೂರು: ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕಮಾಂಡೋ ವೀಲ್ ಚೇರ್ ವಿತರಣೆ

Suddi Udaya

ಡಾ.ಸುಬ್ರಹ್ಮಣ್ಯ ಭಟ್ಟರ ಮೊದಲ ಕಾದಂಬರಿ ” ಶಂಭು” ಬಿಡುಗಡೆ

Suddi Udaya

ಅಳದಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಶೇ.96 ಫಲಿತಾಂಶ

Suddi Udaya
error: Content is protected !!