March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಭೂಸೇನೆಯಲ್ಲಿ 22 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಹುಟ್ಟೂರಿಗೆ ಆಗಮಿಸಿದ ಎ.ಸಿ.ಪಿ ಹವಾಲ್ದಾರ್ ದೇವಪ್ರಸಾದ್ ಗೌಡ ರವರಿಗೆ ಸ್ವಾಗತ ಮತ್ತು ಅಭಿನಂದನಾ ಕಾರ್ಯಕ್ರಮ

ಮೊಗ್ರು : ರಾಷ್ಟ್ರ ಭಕ್ತರ ವೇದಿಕೆ ಬಂದಾರು ಮತ್ತು ಮೊಗ್ರು ಗ್ರಾಮ ಇದರ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳು, ನಿವೃತ್ತ ಸೇನಾನಿಗಳ ಸಂಘ ಹಾಗೂ ಊರವರ ಸಹಕಾರದಲ್ಲಿ ಭಾರತ ಮಾತೆಯ ಸೇವೆಯಲ್ಲಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿ ಕರ್ತವ್ಯದಿಂದ ನಿವೃತ್ತಿ ಹೊಂದಿ ಫೆ 01 ರಂದು ಹುಟ್ಟೂರಿಗೆ ಆಗಮಿಸಿದ ಮೊಗ್ರು ಗ್ರಾಮದ ಮುಗೇರಡ್ಕ ಬರೆಮೇಲು ನಿವಾಸಿ ವೀರ ಯೋಧ ಎ.ಸಿ.ಪಿ ಹವಾಲ್ದಾರ್ ದೇವಪ್ರಸಾದ್ ಗೌಡ ರವರನ್ನು ಹಿಂದೂ ಸಂಗಮ ಆಯೋಜಕರು ಸ್ವಾಗತಿಸಿ, ಸನ್ಮಾನಿಸಿ, ಜಿಲ್ಲೆ, ತಾಲೂಕು ನಿವೃತ ಸೇನಾನಿಗಳ ಸಂಘದ ಪದಾಧಿಕಾರಿಗಳು ಗೌರವ ವಂದನೆ ಸಲ್ಲಿಸಿದರು.

ರಸ್ತೆಯ ಇಕ್ಕೆಲದಲ್ಲಿ ಆಯಾ ಭಾಗದ ನಾಗರಿಕರು, ವಿವಿಧ ಸಂಘ ಸಂಸ್ಥೆಗಳು ಸನ್ಮಾನಿಸಿದರು. ನಂತರ ಮುಗೇರಡ್ಕ ಮೂವರು ದೈವಗಳ ದೈವಸ್ಥಾನ ಬಳಿ ಅಭಿನಂದನಾ ಕಾರ್ಯಕ್ರಮ ನೆರವೇರಿತು. ಮೆರವಣಿಗೆ ಸಾಗುವ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸನ್ಮಾನಿಸಿ, ಅಭಿನಂದಿಸಿದರು, ಹಾಗೂ ಉದ್ಯಮಿಗಳಾದ ಕಿರಣ್ ಚಂದ್ರ ಸನ್ಮಾನಿಸಿದರು. ಪುತ್ತೂರು ಕ್ಷೇತ್ರ ಮಾಜಿ ಶಾಸಕ ಸಂಜೀವ ಮಠoದೂರು ಅಭಿನಂದನಾ ಭಾಷಣ ಮಾಡಿ ಸೈನಿಕರ ಸಾಧನೆ, ದೇಶ ಸೇವೆಯ ತ್ಯಾಗ, ಬಲಿದಾನದ ಬಗ್ಗೆ ಮಾತನಾಡಿದರು. ಸೇನಾ ನಿವೃತ್ತಿ ನಂತರ ಸಮಾಜ ಸೇವೆ ಸಂಘ ಸಂಸ್ಥೆಗಳ ಜೊತೆಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸುವಂತೆ ತಿಳಿಸಿ ದೇವಪ್ರಸಾದ್ ರವರ ಬಗ್ಗೆ ಗುಣಗಾನ ಮಾಡಿದರು. ಬೆಳ್ತಂಗಡಿ ತಾಲೂಕು ನಿವೃತ್ತ ಸೇನಾನಿಗಳ ಸಂಘದ ಅಧ್ಯಕ್ಷ ತಂಗಚ್ಚನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಸೇನಾನಿ ವಿಕ್ರಂ ಜೆ. ಏನ್ ಸೇನಾ ವೃತ್ತಿ ಬಗ್ಗೆ ತಿಳಿಸಿದರು.

ಅಭಿನಂದನೆ ಸ್ವೀಕರಿಸಿದ ದೇವಪ್ರಸಾದ್ ಗೌಡ ರವರು ತಮ್ಮ ಅನುಭವ ಹಂಚಿಕೊಳ್ಳುವ ಜೊತೆಗೆ ಸೇನೆ, ಕಾರ್ಯಕ್ರಮ ಆಯೋಜಕರಿಗೆ, ಆಗಮಿಸಿದ ದೇಶಭಕ್ತರಿಗೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಂದಾರು ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಪದ್ಮುಂಜ ಸಿ ಎ ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಪಣೆಕ್ಕರ, ಬಂದಾರು ಪಂಚಾಯತ್ ಸದಸ್ಯರಾದ ಗಂಗಾಧರ ಪೂಜಾರಿ, ಮುಗೇರಡ್ಕ ಮೂವರು ದೈವಗಳ ದೈವಸ್ಥಾನ ಆಡಳಿತ ಮೊಕ್ತೇಸರರಾದ ಮನೋಹರ ಗೌಡ ಅಂತರ, ಚಂದ್ರಹಾಸ ಗೌಡ ದೇವಸ್ಯಗುತ್ತು, ನಿವೃತ್ತ ಸೇನಾನಿ ಚಂದಪ್ಪ ದoಬೆತ್ತಿಮಾರು, ಅಶೋಕ್ ಪಿ. ಎಲ್ ಮುಗೇರಡ್ಕ, ಅಭಿನಂದನೆ ಸ್ವೀಕರಿಸೀದ ಸೇನಾನಿ ದೇವಪ್ರಸಾದ ಪತ್ನಿ ಶ್ರೀಮತಿ ಹರಿಣಾಕ್ಷಿ ದೇವಪ್ರಸಾದ್, ತಂದೆ ಬಾಬು ಗೌಡ ಮತ್ತು ಶ್ರೀಮತಿ ಮೋನಕ್ಕ, ಸಹೋದರ ಆನಂದ ಗೌಡ ಮತ್ತು ಹೇಮಲತಾ ಮತ್ತು ಮಕ್ಕಳು ಉಪಸ್ಥಿತರಿದ್ದರು.

ರಾಷ್ಟ್ರ ಭಕ್ತರ ವೇದಿಕೆ ಬಂದಾರು ಮತ್ತು ಮೊಗ್ರು ಗ್ರಾಮ,ಗ್ರಾಮ ಪಂಚಾಯತ್ ಬಂದಾರು, ಮೂವರು ದೈವಗಳ ದೈವಸ್ಥಾನ ಮುಗೇರಡ್ಕ,ಕೊರಗಪ್ಪ ಗೌಡ ಮತ್ತು ಮಕ್ಕಳು ಕುಟುಂಬಸ್ಥರು ದಂಡುಗ ಇವರುಗಳಿಂದ ಸನ್ಮಾನ ನೆರವೇರಿತು. ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಗೌಡ ಮುಗೇರಡ್ಕ ಸ್ವಾಗತಿಸಿ, ಮುಖ್ಯ ಶಿಕ್ಷಕರಾದ ಮಾಧವ ಗೌಡ ದೊರ್ತೋಡಿ ಕಾರ್ಯಕ್ರಮ ನಿರೂಪಿಸಿ, ಧನ್ಯವಾದವಿತ್ತರು. ರಾಷ್ಟಭಕ್ತರ ವೇದಿಕೆ ಬಂದಾರು ಮತ್ತು ಮೊಗ್ರು ಗ್ರಾಮ ಇದರ ಆಯೋಜಕರಾದ ಬಾಲಕೃಷ್ಣ ಗೌಡ ಮುಗೇರಡ್ಕ, ಗಿರೀಶ್ ಗೌಡ. ಬಿ. ಕೆ. ಮೈರೋಳ್ತಡ್ಕ, ರಂಜಿತ್ ಗೌಡ ನಡುಮಜಲು, ಶಿವರಾಮ್ ಗೌಡ ಕೊಡಿನೆಕ್ಕಿಲು, ರಮೇಶ್ ಗೌಡ ನೆಕ್ಕರಾಜೆ, ವರುಣ್ ಗೌಡ ನೆಕ್ಕರಾಜೆ, ಗಂಗಾಧರ ಪೂಜಾರಿ ದoಬೆತ್ತಿಮಾರು, ಪುರಂದರ ಗೌಡ ನೈಮಾರು, ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.

Related posts

ಬೆಳ್ತಂಗಡಿಯ ಪ್ರತಿಷ್ಠಿತ ಕೇದೆ ಗುತ್ತಿನ ಮನೆಗೆ ಭೇಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ

Suddi Udaya

ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ

Suddi Udaya

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ “ಬ್ರಹ್ಮಶ್ರೀ- 2025” ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ

Suddi Udaya

ಕಳೆಂಜ ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಛತ್ರ ಗಣಪತಿ ದೇವಸ್ಥಾನದ ಮ್ಯಾನೇಜರ್ ಬಾಲಕೃಷ್ಣ ರಾವ್ ನಿಧನ

Suddi Udaya

ವಲಯ ಮಟ್ಟದ ಕೌಶಲ್ಯ ಸ್ಪರ್ಧೆ: ಆದರ್ಶ್ ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya
error: Content is protected !!