ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಎಸ್ ಡಿ ಎಂ, ಆರ್ ಸಿ ಸಿ, ರೋಟೊ, ಲಾಯರ್ಸ್ ಇಂಟರ್ ನ್ಯಾಷನಲ್ ಚೆಸ್ ಕಪ್ ಉದ್ಘಾಟನಾ ಸಮಾರಂಭ

ಬೆಳ್ತಂಗಡಿ: ಎಸ್ ಡಿ ಎಂ, ಆರ್ ಸಿ ಸಿ, ರೋಟೊ, ಲಾಯರ್ಸ್ ಇಂಟರ್ ನ್ಯಾಷನಲ್ ಚೆಸ್ ಕಪ್-2026 ಇದರ ಉದ್ಘಾಟನಾ ಸಮಾರಂಭವು ಜ.31ರಂದು ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ನಡೆಯಿತು.

ಉದ್ಘಾಟನೆಯನ್ನು ಬೆಳ್ತಂಗಡಿ ಹಿರಿಯ ಪ್ರಧಾನ ಸಿವಿಲ್ ಮತ್ತು ಜೆ ಎಂ ಎಫ್ ಸಿ ಮನು ಬಿ ಕೆ ನೆರವೇರಿಸಿ ಶುಭಹಾರೈಸಿದರು.

ಉಜಿರೆ ಎಸ್ ಡಿ ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸತೀಶ್ ಚಂದ್ರ ಎಸ್ ಅಧ್ಯಕ್ಷತೆ ವಹಿಸಿದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷ ಅಲೋಶಿಯಸ್ ಎಸ್ ಲೋಬೊ , ಬೆಳ್ತಂಗಡಿ ಹಿರಿಯ ನ್ಯಾಯವಾದಿ ಚೀಫ್ ಕೋ ಆರ್ಡಿನೇಟರ್ ರತ್ನವರ್ಮ ಬುಣ್ಣು, ಮಂಗಳೂರು ಕೋ-ಫೌಂಡರ್ ರಾವ್ಸ್ ಚೆಸ್ ಕಾರ್ನರ್ ಇಶಾ ಶರ್ಮ, ರಿಟೇರ್ಡ್ ಮೇಜರ್ ಜನರಲ್ ಎಂ ವಿ ಭಟ್ ಉಪಸ್ಥಿತರಿದ್ದರು.

ಬೆಳ್ತಂಗಡಿ ವಕೀಲರು ಬಿ ಕೆ ಧನಂಜಯ ರಾವ್ ಸ್ವಾಗತಿಸಿ, ಪ್ರಸ್ತಾಪಿಸಿದರು. ಬೆಳ್ತಂಗಡಿ ವಕೀಲರ ಸಂಘ ಉಪಾಧ್ಯಕ್ಷ ಶ್ರೀನಿವಾಸ ಗೌಡ ಧನ್ಯವಾದವಿತ್ತರು. ನ್ಯಾಯವಾದಿ ವಸಂತ ಮರಕಡ, ನವೀನ್ ಬಿ ಕೆ ಕಾರ್ಯಕ್ರಮ ನಿರೂಪಿಸಿದರು.

Related posts

ಯಕ್ಷಭಾರತಿ ಕನ್ಯಾಡಿ ಸಂಸ್ಥೆಯು ಪುರಸ್ಕರಿಸುವ ಯಕ್ಷಭಾರತಿ ಪ್ರಶಸ್ತಿಗೆ ಮೂಡಬಿದರೆಯ ಕೆ ಶ್ರೀಪತಿ ಭಟ್ ಆಯ್ಕೆ

Suddi Udaya

ಧರ್ಮಸ್ಥಳದಲ್ಲಿ ನೈತಿಕ ಮೌಲ್ಯಾಧಾರಿತ ಪುಸ್ತಕಗಳ ಲೋಕಾರ್ಪಣೆ, ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧಾ ವಿಜೇತರಿಗೆ ಪುರಸ್ಕಾರ

Suddi Udaya

ಪುಂಜಾಲಕಟ್ಟೆ, ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಪುಂಜಾಲಕಟ್ಟೆ – ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ದುರಸ್ತಿ ಕಾಮಗಾರಿಯನ್ನು ಕಾಲಮಿತಿಯಲ್ಲಿ ವೈಜ್ಞಾನಿಕವಾಗಿ ನಿಮಿ೯ಸಬೇಕು ಮತ್ತು ಹೆದ್ದಾರಿ ಗುತ್ತಿಗೆಯಲ್ಲಿ ನಡೆದಿರುವ ಭ್ರಷ್ಟಾಚಾರ ತನಿಖೆಗೆ ಒಳಪಡಿಸಬೇಕು ಒತ್ತಾಯಿಸಿ ಜನಾಗ್ರಹ ಸಭೆ

Suddi Udaya

ಬಸ್ಸಿನಿಂದ ಬಿದ್ದ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದ ಶಾಸಕ ಹರೀಶ್ ಪೂಂಜ

Suddi Udaya

ಕಡಿತಗೊಂಡಿದ್ದ ಅಂಬಡಬೆಟ್ಟು ತಾತ್ಕಾಲಿಕ ರಸ್ತೆಗೆ ಶಾಸಕ ಹರೀಶ್ ಪೂಂಜರ ಸ್ಪಂದನೆ

Suddi Udaya

ಕೊಕ್ಕಡ: ಕೆಸರ್ದ ಕಂಡೊಡು ಒಂಜಿ ದಿನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!