March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳಾಲು ಶ್ರೀ ಧ.ಮಂ. ಪ್ರೌಢ ಶಾಲೆಯಲ್ಲಿ ಸುರಕ್ಷಿತ ಚಾಲನೆ ಮತ್ತು ಸೈಬರ್ ವಂಚನೆ, ಮಾದಕವಸ್ತು ಮುಕ್ತ ಸಮಾಜ ಕುರಿತು ಜಾಗೃತಿ ಕಾರ್ಯಕ್ರಮ

ಬೆಳಾಲು ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ಟ್ರಾಫಿಕ್ ನಿಯಮ ಹಾಗೂ ಸುರಕ್ಷಿತ ಚಾಲನೆ ಮತ್ತು ಸೈಬರ್ ವಂಚನೆ, ಮಾದಕವಸ್ತು ಮುಕ್ತ ಸಮಾಜ ಕುರಿತು ಜಾಗೃತಿ ಕಾರ್ಯಕ್ರಮ ಫೆ.2ರಂದು ಜರಗಿತು.

ಬೆಳ್ತಂಗಡಿ ತಾಲೂಕು ಕಾನೂನು ನೆರವು ಸಮಿತಿ ಮತ್ತು ಉಜಿರೆ ಬೆಳಾಲು ‘ಶೌರ್ಯ’ ವಿಪತ್ತು ನಿರ್ವಹಣೆ ಘಟಕದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕಿಶೋರ್ ಪಿ. ಸಂಪನ್ಮೂಲ ವ್ಯಕ್ತಿಯಾಗಿದ್ದರು.

ಸಂಚಾರ ಪೊಲೀಸ್ ಸಿಬ್ಬಂದಿ ಅಭಿಜಿತ್, ಬೆಳ್ತಂಗಡಿ ಶೌರ್ಯ ವಿಪತ್ತು ನಿರ್ವಹಣೆ ಘಟಕದ ಮಾಸ್ಟರ್ ಅವಿನಾಶ್ ಭಿಡೆ ಉಪಸ್ಥಿತರಿದ್ದರು.

ಊರಿನ ಆಟೊ ಚಾಲಕರು ಮತ್ತು ವಾಹನ ಮಾಲಕರು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.

ಮುಖ್ಯೋಪಾಧ್ಯಾಯ ಜಯರಾಮ ಮಯ್ಯ ಸ್ವಾಗತಿಸಿದರು. ಶೌರ್ಯ ತುರ್ತು ಸ್ಪಂದನಾ ಘಟಕದ ಸಂಯೋಜಕ ಸುಲೈಮಾನ್ ಭೀಮಂಡೆ ಕಾರ್ಯಕ್ರಮ ನಿರ್ವಹಿಸಿದರು.

Related posts

ಬೆಂಗಳೂರುನಲ್ಲಿರುವ ಯೂಟ್ಯೂಬರ್ ಸಮೀರ್ ಎಮ್.ಡಿ ಮನೆಯನ್ನು ಸುತ್ತುವರಿದ ಧರ್ಮಸ್ಥಳ ಪೊಲೀಸರು

Suddi Udaya

ಪಣೆಜಾಲು ಶ್ರೀ ಸ್ಟಾರ್ ಯುವಕ ಮಂಡಲ ಮತ್ತು ಮಹಿಳಾ ಮಂಡಲದಿಂದ ಚಿಕಿತ್ಸಾ ನೆರವು

Suddi Udaya

ರಾಜ್ಯ ಮಟ್ಟದ ಜಿನಭಜನಾ ಸ್ಪರ್ಧೆ – 8: ನಿರಂಜನ್ ಜೈನ್ ಕುದ್ಯಾಡಿ ಅವರ ರಚನೆಯ ಬೆಳಗಾವಿಯ ವಿಶಾರದಾ ನೃತ್ಯ ತಂಡ ಪ್ರಥಮ ಸ್ಥಾನ

Suddi Udaya

ಬೆಳ್ತಂಗಡಿ: ಕಿನ್ಯಮ್ಮ ಸಭಾಭವನದ ಉದ್ದಿಮೆ ಪರವಾನಿಗೆ ರದ್ದುಗೊಳಿಸಿದ ಆದೇಶ ಹಿಂಪಡೆದ ಪಟ್ಟಣ ಪಂಚಾಯತ್

Suddi Udaya

ಭಾರತೀಯ ಜೈನ್ ಮಿಲನ್ ಬೆಳ್ತಂಗಡಿ ವತಿಯಿಂದ ಶ್ರವಣಬೆಳಗೊಳ ಶ್ರೀ ಗಳಿಗೆ ವಿನಯಾಂಜಲಿ ಕಾರ್ಯಕ್ರಮ

Suddi Udaya

ವಾಣಿ ಪ.ಪೂ. ಕಾಲೇಜಿನ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ

Suddi Udaya
error: Content is protected !!