ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮಲವಂತಿಗೆ ಗ್ರಾ.ಪಂ. ಪಿಡಿಒ ರಶ್ಮಿ ರವರಿಗೆ ಬಿಳ್ಕೋಡುಗೆ: ಪಂಚಾಯತ್ ಅಭಿವೃದ್ಧಿಗೆ ಸಹಕರಿಸಿದ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರಿಗೆ ಗೌರವಾರ್ಪಣೆ

ಮಲವಂತಿಗೆ ಗ್ರಾ.ಪಂ ನಲ್ಲಿ ಸತತ 7 ವರ್ಷಗಳ ಕಾಲ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಇಂದಬೆಟ್ಟು ಗ್ರಾ.ಪಂ. ಗೆ ವರ್ಗಾವಣೆಗೊಂಡ ರಶ್ಮಿ ಬಿ.ಪಿ ಅವರನ್ನು ಫೆ. 5ರಂದು ಪಂಚಾಯತ್ ಸಭಾಂಗಣದಲ್ಲಿ ಬಿಳ್ಕೋಡಲಾಯಿತು.

ಇದೇ ಸಂದರ್ಭದಲ್ಲಿ ಕಳೆದ 5ವರ್ಷಗಳ ಅವಧಿಯಲ್ಲಿ ಪಂಚಾಯತ್ ಅಭಿವೃದ್ಧಿಗೆ ಸಹಕರಿಸಿದ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರನ್ನು ಗೌರವಿಸಲಾಯಿತು.

ಅಧ್ಯಕ್ಷ ಪ್ರಕಾಶ್ ಜೈನ್ ಮಾತನಾಡಿ 7ವರ್ಷ ಪಿಡಿಒ ರವರು ಪಂಚಾಯತ್ ಮಟ್ಟದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಶ್ಲಾಘಿಸಿದ ಅವರು ಕಳೆದ 5 ವರ್ಷ ಆಡಳಿತ ಅವಧಿಯಲ್ಲಿ ಸಹಕಾರ ನೀಡಿದ ಆಡಳಿತ ಮಂಡಳಿಗೆ, ಅಧಿಕಾರಿಗಳಿಗೆ, ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ನೂತನ ಪಿಡಿಒ ಮೋಹನ್ ಬಂಗೇರ ಕೆ. ವಿಎ ಸಂತೋಷ್, ಸದಸ್ಯರು, ಸಿಬ್ಬಂದಿಗಳು, ಅಂಗನವಾಡಿ ಹಾಗೂ ಆಶಾಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸದಸ್ಯರು, ಪಶು ಹಾಗೂ ಕೃಷಿ ಸಖಯರು ಮತ್ತಿತರರು ಉಪಸ್ಥಿತರಿದ್ದರು.

ಪಂಚಾಯತ್ ಸಿಬ್ಬಂದಿ ಅಕ್ಷತಾ ಪ್ರಾರ್ಥಿಸಿ, ಶ್ರೀಮತಿ ಕಾಂತಿ ದಿನೇಶ್ ಸ್ವಾಗತಿಸಿ, ಪಿಡಿಒ ಮೋಹನ್ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ಪಂಚಾಯತ್ ಸಿಬ್ಬಂದಿ ಸದಾಶಿವ ಎ ಧನ್ಯವಾದವಿತ್ತರು.

Related posts

ಎಸ್.ಎಮ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಕರ್ನಾಟಕ ಜಂಇಯ್ಯತುಲ್ ಉಲಮಾ ಮುಶಾವರ ಸದಸ್ಯ ಪಿ.ಕೆ ಮುಹಮ್ಮದ್ ಮದನಿ ಅಳಕ್ಕೆ ಉಸ್ತಾದರಿಗೆ ಸನ್ಮಾನ

Suddi Udaya

ತೆಕ್ಕಾರು ಗ್ರಾಮ ಪಂಚಾಯತ್ ದ್ವಿತೀಯ ಹಂತದ ಗ್ರಾಮ ಸಭೆ

Suddi Udaya

ಕಳೆಂಜ: ‘ಪುಣ್ಯ ಕೋಟಿಗೆ ಒಂದು ಕೋಟಿ’ ನಂದಗೋಕುಲ ದೀಪೋತ್ಸವ: ಸಾಮೂಹಿಕ ಗೋಪೂಜೆ, ಗೋ ನಂದಾರತಿ

Suddi Udaya

ಕರಾಯ ಸರಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಬೆಳ್ತಂಗಡಿ ಎಸ್.ಡಿ.ಎಂ. ಆಂಗ್ಲ ಮಾದ್ಯಮ ಶಾಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿನಿ ಕು.ಸಿಂಚನ ರವರಿಂದ ಗ್ರಾಮೀಣಾಭಿವೃದ್ದಿ ಸೇವೆಗೆ ಪ್ರಮಾಣ ಪತ್ರ

Suddi Udaya

ಸುಹಾಸ್ ಶೆಟ್ಟಿ ಪ್ರಕರಣದೊಂದಿಗೆ ಉಳಿದ ಮೂರು ಕೊಲೆ ಪ್ರಕರಣಗಳನ್ನು ಎನ್.ಐ.ಎ (NIA) ಗೆ ಯಾಕೆ ನೀಡಿಲ್ಲ?: ಹರೀಶ್ ಕುಮಾರ್ ಪ್ರಶ್ನೆ

Suddi Udaya
error: Content is protected !!