September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಅಳದಂಗಡಿ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಾರ್ಷಿಕ ವರ್ಧಂತಿ ಉತ್ಸವ:

ಅಳದಂಗಡಿ: ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಮಹಾಗಣಪತಿ ದೇವರ ಪ್ರತಿಷ್ಠಾ ದಿನದ ಸಲುವಾಗಿ ವಾರ್ಷಿಕ ವರ್ಧಂತಿ ಉತ್ಸವವು (ವಾರ್ಷಿಕ ಜಾತ್ರೆ) ಕ್ಷೇತ್ರದ ತಂತ್ರಿವರ್ಯರಾದ ಪೊಳಲಿ ಕೋಡಿಮಜಲು ಶ್ರೀ ಅನಂತ ಪದ್ಮನಾಭ ಉಪಧ್ಯಾಯರ ನೇತೃತ್ವದಲ್ಲಿ ಫೆ.7ರಂದು ನಡೆಯಿತು,

ಬೆಳಿಗ್ಗೆ 12 ತೆಂಗಿನಕಾಯಿ ಗಣಹವನ, 25 ಕಲಶಾಭಿಷೇಕ, ಪ್ರಧಾನ ಹವನ, ಸ್ಥಳೀಯರಿಂದ ಭಜನಾ ಸತ್ಸಂಗ, ಮಧ್ಯಾಹ್ನ ಪ್ರಸನ್ನ ಪೂಜೆ, ಮಹಾ ಮಂಗಳಾರತಿ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ಶಶಿಧರ ಡೋಂಗ್ರೆ ಸೇನರೆಬೈಲು, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸತೀಶ್ ಪೂಜಾರಿ ನಮನ, ಪ್ರಧಾನ ಅರ್ಚಕರಾದ ಎ.ಸೋಮನಾಥ ಮಯ್ಯ, ಪ್ರವೀಣ ಮಯ್ಯ, ಸದಸ್ಯರಾದ ದೀಪಕ್ ಎಚ್.ಡಿ. ಬಳಂಜ, ಸದಾನಂದ ತೋಟದಪಲ್ಕೆ, ಜಿನ್ನಪ್ಪ ಶೆಟ್ಟಿ ಕೆದ್ದು, ಸತೀಶ್ ದೇವಾಡಿಗ ಸಾರಬೈಲು, ಶ್ರೀಮತಿ ಲಾವಣ್ಯ ದೇವಿಪ್ರಸಾದ್ ಶೆಟ್ಟಿ ಬಡಗಕಾರಂದೂರು ಶ್ರೀಮತಿ ಸುಮಲತ ನೀರಲ್ಕೆ ಹಾಗೂ ಊರವರು ಉಪಸ್ಥಿತರಿದ್ದರು.

ಸಂಜೆ ಬಳಂಜ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಮತ್ತು ನಾಲ್ಕೂರು ಪಂಚಶ್ರೀ ಕುಣಿತ ಭಜನಾ ಮಂಡಳಿಯವರಿಂದ ನೃತ್ಯ ಭಜನೆ, ಶ್ರೀರಂಗಪೂಜೆ, ರಾತ್ರಿ ಶ್ರೀ ದೇವರ ಉತ್ಸವ, ಉಪಾಹಾರ, ಸಾಂಸ್ಕೃತಿಕ ಕಾರ್ಯಕ್ರಮ, ಕದಂಬ ನಾಟಕ ತಂಡದಿಂದ ರಂಗಭೂಷಣ ಮಣಿ ಕೋಟೆಬಾಗಿಲು ಕಥೆ ಸಂಭಾಷಣೆ ನಿರ್ದೇಶನ ಸಾರಥ್ಯದ ಪಿಂಗಾರ ಕಲಾವಿದೆರ್ ಬೆದ್ರ ಅಭಿನಯಿಸುವ ತುಳು ಹಾಸ್ಯ ನಾಟಕ “ಓಂಕಾರ” ಪ್ರದರ್ಶನಗೊಳ್ಳಲಿದೆ.

Related posts

ಬಳಂಜ ಶ್ರೀ ಉಮಾಮಹೇಶ್ವರ ಯುವಕ ಮಂಡಲದ ಪದ ಪ್ರದಾನ ಸಮಾರಂಭ

Suddi Udaya

ಬಂಗೇರ ನಿಧನಕ್ಕೆ ಡಾ.ಹೆಗ್ಗಡೆ ಸಂತಾಪ

Suddi Udaya

ಎ.14: ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ಆದಿತ್ಯ ನಾರಾಯಣ ಕೊಲ್ಲಾಜೆ ನಾಮಪತ್ರ ಸಲ್ಲಿಕೆ

Suddi Udaya

ಜಿ.ಪಂ. ಉಪ ಕಾರ್ಯದರ್ಶಿ ಆನಂದ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿ ತಾಲೂಕು ಪಂಚಾಯತ್ ಮಾಸಿಕ ಕೆ.ಡಿ.ಪಿ.ಸಭೆ

Suddi Udaya

ಬಡಗಕಾರಂದೂರು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ

Suddi Udaya

ಹತ್ಯಡ್ಕ: ಕೊಡಂಗೆ ನಿವಾಸಿ ಹರಿಹರ ಹೆಬ್ಬಾರ್ ಗೋಖಲೆ ನಿಧನ

Suddi Udaya
error: Content is protected !!