March 7, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಹರೇಕಳ ಹಾಜಬ್ಬರಿಂದ ವಿದ್ವತ್ ಕಾಲೇಜಿನಲ್ಲಿ ವಾಕ್ ಇನ್ ಟು ವಿದ್ವತ್ ನಾಮಫಲಕ ಅನಾವರಣ: ಕಾಲೇಜಿನ ಭೌತಶಾಸ್ತ್ರ, ರಸಾಯನಶಾಸ್ತ್ರ,ಜೀವಶಾಸ್ತ್ರ ವಿಭಾಗದ ಲ್ಯಾಬ್ ಉದ್ಘಾಟನೆ:

ಗುರುವಾಯನಕೆರೆ: ವಿದ್ವತ್ ಕಾಲೇಜಿನಲ್ಲಿ ವಾಕ್ ಇನ್ ಟು ವಿದ್ವತ್ ನಾಮಫಲಕ ಅನಾವರಣ ಹಾಗೂ ಪ್ರಯೋಗಲಯ ಉದ್ಘಾಟನೆಯು ಫೆ 8 ರಂದು ನಡೆಯಿತು.ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ವಾಕ್ ಇನ್ ಟು ವಿದ್ವತ್ ನಾಮಫಲಕ ಅನಾವರಣಗೊಳಿಸಿ ಶುಭ ಕೋರಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ರೈ ನೇರವೇರಿಸಿ ಮಾತನಾಡಿ ನಾವು ಮಾಡು ಕಾಯಕದಲ್ಲಿ ಇಚ್ಛಾಶಕ್ತಿ ಮತ್ತು ಬದ್ದತೆಯಿದ್ದಾಗ ಸಂಸ್ಥೆಯು ಮೇಲ್ಪಂಕ್ತಿಯಲ್ಲಿ ಸಾಗುತ್ತದೆ.ವಿದ್ವತ್ ವಿದ್ಯಾಲಯ ಶ್ರೇಷ್ಠ ಸಂಸ್ಥೆಯಾಗಿ ಬೆಳೆಯುತ್ತದೆ ಎಂಬ ಆತ್ಮವಿಶ್ವಾಸ ನಂಬಿಕೆ ನಮಗಿದೆ ಎಂದರು.

ಭೌತಶಾಸ್ತ್ರ ವಿಭಾಗದ ಪ್ರಯೋಗಲಯದ ಉದ್ಘಾಟನೆಯನ್ನು ಬೆಳ್ತಂಗಡಿ ತಹಿಶೀಲ್ದಾರ್ ಪೃಥ್ವಿ ಸಾನಿಕಮ್ ಉದ್ಘಾಟಿಸಿದರು. ರಾಸಾಯನ ಶಾಸ್ತ್ರ ವಿಭಾಗದ ಪ್ರಯೋಗಲಯವನ್ನು ಫಾ.ಜೋಸೇಫ್ ವಲಿಯಪರಂಬಿಲ್ ನೇರವೇರಿಸಿದರು. ಜೀವಶಾಸ್ತ್ರ ವಿಭಾಗದ ಪ್ರಯೋಗಲಯದ ಉದ್ಘಾಟನೆಯನ್ನು ಕುವೆಟ್ಟು ಗ್ರಾ.ಪಂ ಅಧ್ಯಕ್ಷೆ ಭಾರತಿ ಶೆಟ್ಟಿ ಉದ್ಘಾಟಿಸಿ ಶುಭಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ವತ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಸುಭಾಶ್ವಂದ್ರ ಶೆಟ್ಟಿ ವಹಿಸಿದ್ದರು.

ವೇದಿಕೆಯಲ್ಲಿ ವಿದ್ವತ್ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿ ಪ್ರಜ್ವಲ್ ರೈ,ಕೋಶಾಧಿಕಾರಿ ಕಾಶಿನಾಥ್ ಭಟ್, ಟ್ರಸ್ಟಿಗಳಾದ ಸುಚಿತ್ರಾ ಶೆಟ್ಟಿ, ರೇಶ್ಮಾ ಸುಭಾಶ್ವಂದ್ರ ಶೆಟ್ಟಿ ಉಪಸ್ಥಿತರಿದ್ದರು. ಶಿಕ್ಷಣ ಸಂತ ಹರೇಕಳ ಹಾಜಬ್ಬ ಹಾಗೂ ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ರೈ ಅವರನ್ನು ವಿದ್ವತ್ ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳು ಪ್ರಾರ್ಥನೆಗೈದರು,ಶೈಕ್ಷಣಿಕ ನಿರ್ದೇಶಕ ಗಂಗಾಧರ ಇ ಮಂಡಲೆಗಳಲೆ ಸ್ವಾಗತಿಸಿದರು.ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರತಾಪ್ ಬಾಬು ಡಿ.ಎಮ್ ಪ್ರಸ್ತಾವಣೆಗೈದರು.ಬಾಲಕೃಷ್ಣ ಪೊರ್ದಾಲ್ ನಿರೂಪಿಸಿದರು,ಸಾರ್ವಜನಿಕ ಸಂಪರ್ಕಾಧಿಕಾರಿ ಚೈತ್ರೇಶ್ ಸಂದೇಶ ವಾಚನ ಮಾಡಿದರು.ಪ್ರಾಂಶುಪಾಲರಾದ ಹರೀಶ್ ಕೆ.ಆರ್ ವಂದಿಸಿದರು.ಉಪನ್ಯಾಸಕರಾದ ಬಸವಕಿರಣ ಜೆ‌ಎಚ್,ದಿವ್ಯಶ್ರೀ ಸನ್ಮಾನಿತರ ಪರಿಚಯ ವಾಚಿಸಿದರು.ಆಡಳಿತಧಿಕಾರಿ ಅಶೋಕ್ ಕುಮಾರ್ ಶೆಟ್ಟಿ ಮತ್ತು ಉಪನ್ಯಾಸಕ ವೃಂದದವರು ಸಹಕರಿಸಿದರು.

Related posts

ಗೇರುಕಟ್ಟೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿಶೇಷ ಚೇತನರ ಬಗ್ಗೆ ಸಂವಾದ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಣಾಳಿಕೆ ಬಿಡುಗಡೆ: ಪ್ರಣಾಳಿಕೆಯಲ್ಲಿರುವ ಅಂಶಗಳೇನು?

Suddi Udaya

ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಪಟ್ರಮೆ ಗ್ರಾಮ ಪಂಚಾಯತ್ ಬಳಿ ಬಿಜೆಪಿ ಪ್ರತಿಭಟನೆ

Suddi Udaya

ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಮತ್ತು ಸಾಮಾಜಿಕ ಪರಿಶೋಧನಾ ಕುರಿತು ಐಇಸಿ ಚಟುವಟಿಕೆ

Suddi Udaya

ಕಾಶಿಪಟ್ಣ : ಅವಳಿ ಹೆಣ್ಣು ಕರುಗಳಿಗೆ ಜನ್ಮ ನೀಡಿದ ಗೋವು

Suddi Udaya

ಶ್ರೀ ಕ್ಷೇ.ಧ.ಗ್ರಾ.ಯೋಜನೆ ‘ಜ್ಞಾನ ದೀಪ’ ಕಾರ್ಯಕ್ರಮದ ಅಡಿಯಲ್ಲಿ ಬಳಂಜ ಶಾಲೆಗೆ ಡೆಸ್ಕ್ ಮತ್ತು ಬೆಂಚ್ ಹಸ್ತಾಂತರ

Suddi Udaya
error: Content is protected !!