ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಫೆ. 16: ರಾಜಕೇಸರಿ ಟ್ರಸ್ಟ್ ವತಿಯಿಂದ 584ನೇ  ಯೋಜನೆ  ಪ್ರಯುಕ್ತ ಬೆಳ್ತಂಗಡಿ, ಉಜಿರೆ ಗುರುವಾಯನಕೆರೆಯಲ್ಲಿ ಪೆನ್ನು ಮಾರಾಟ

ಬೆಳ್ತಂಗಡಿ: ಗರ್ಡಾಡಿ ಗ್ರಾಮದ ನಾಲ್ಕು ವರ್ಷದ ಪ್ರಜ್ಞಾ ರವರು ಎಂಡೋಸಲ್ಫಾನ್ ನಿಂದ ಬಳಲುತಿದ್ದು ಆರೋಗ್ಯದ ನೆರವಿಗಾಗಿ ಬೆಳ್ತಂಗಡಿ, ಉಜಿರೆ, ಗುರುವಾಯನಕೆರೆ ಏಕಕಾಲದಲ್ಲಿ ಪೆನ್ನು ಮಾರಿ ಅದರಲ್ಲಿ ಬಂದ ಹಣವನ್ನು ಕುಟುಂಬಕ್ಕೆ ಹಸ್ತಾಂತರಿಸುವ ಕಾರ್ಯಕ್ರಮ ಫೆ. 16ರಂದು ನಡೆಯಲಿದೆ ಎಂದು ರಾಜಕೇಸರಿ ಸಂಸ್ಥಾಪಕ ದೀಪಕ್ ಹೇಳಿದರು. ಅವರು ಮಂಗಳವಾರ ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.ಹತ್ತು ರೂಪಾಯಿ ಮೌಲ್ಯದ ಪೆನ್ನು ಮಾರಾಟ ಮಾಡಿ ಅದರಲ್ಲಿ ಬಂದ ಲಾಭಾಂಶವನ್ನು ಆರೋಗ್ಯದ ನೇರವಿಗಾಗಿ ಕುಟುಂಬಕ್ಕೆ ಹಸ್ತಂತಾರಿಸಲಾಗುವುದು. ಬೆಳ್ತಂಗಡಿ ಬಸ್‌ನಿಲ್ದಾಣ, ಉಜಿರೆ, ಗುರುವಾಯನಕೆರೆ ಪರಿಸರದಲ್ಲಿ ಸಂಘಟನೆ ಸದಸ್ಯರು ಈ ಕಾರ್ಯಕ್ರಮ ನಡೆಸಲಿದ್ದಾರೆ. ಕಟ್ಟೆಮಾರ್ ಮಂತ್ರದೇವಾತ ಸಾನಿಧ್ಯದ ಧರ್ಮದರ್ಶಿ ಮನೋಜ್ ಕಟ್ಟೆಮಾರ್, ಶಾಸಕ ಹರೀಶ್ ಪೂಂಜ, ಮಂಗಳೂರು ಲೈಫ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅರ್ಜುನ್ ಭಂರ್ಡಾಕರ್, ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ತುಕಾರಂ ಬಿ., ಸಹಿತ ಮತ್ತಿರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ಜಾಲತಾಣದ ಶರತ್ ಕೆ ಎಸ್ ಬೆಳ್ತಂಗಡಿ, ಘಟಕದ ಸಂಚಾಲಕ ಗಿರೀಶ್ ಉಪಸ್ಥಿತರಿದ್ದರು.

Related posts

ಜಿಲ್ಲಾ ಮಹಿಳಾ ಮೋರ್ಚಾದ ತಂಡವು ಬೆಳ್ತಂಗಡಿ ಬಿಜೆಪಿ ಕಚೇರಿಗೆ ಭೇಟಿ

Suddi Udaya

ವಿಟಿಯು ಅಂತರ್ ಕಾಲೇಜು ಕ್ರಿಕೆಟ್ ಟೂರ್ನಿ : ಉಜಿರೆಯ ಎಸ್.ಡಿ.ಎಂ ಗೆ ಪ್ರಶಸ್ತಿ

Suddi Udaya

ಧರ್ಮಸ್ಥಳ: ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬದಿ ಇರುವ ಅನಧಿಕೃತ ಗೂಡಂಗಡಿಗಳನ್ನು ಧರ್ಮಸ್ಥಳ ಗ್ರಾ. ಪಂ. ನಿಂದ ತೆರವು

Suddi Udaya

ನಾರ್ಮ್ ರೌಂಡರ್ ರಾಬಿನ್ ಪಂದ್ಯಾವಳಿಯಲ್ಲಿ ಬೆಳ್ತಂಗಡಿಯ ಇಶಾ ಶರ್ಮಾ ರವರಿಗೆ ರಾಜ್ಯದ ಮೊದಲ ಮಹಿಳಾ ಗ್ರ್ಯಾಂಡ್ ಮಾಸ್ಟರ್ ಬಿರುದು

Suddi Udaya

ಗೇರುಕಟ್ಟೆ : ಪರಪ್ಪು ಜುಮ್ಮಾ ಮಸೀದಿಯಲ್ಲಿ ನಡೆಯುವ ಈದ್ ಮಿಲಾದ್ ಕಾರ್ಯಕ್ರಮದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಜಿ ಡಿ ಅಶ್ರಫ್ ಆಯ್ಕೆ

Suddi Udaya

ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ರಾಜ್ಯಮಟ್ಟದಲ್ಲಿ ನಾಲ್ಕನೇ ಸ್ಥಾನ

Suddi Udaya
error: Content is protected !!