July 23, 2026
ಅಭಿನಂದನೆಗ್ರಾಮಾಂತರ ಸುದ್ದಿಬೆಳ್ತಂಗಡಿವರದಿ

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್:ಬೆಳ್ತಂಗಡಿ ವಲಯದ ನೂತನ ಪದಾಧಿಕಾರಿಗಳ ಪದಪ್ರದಾನ

ಕುವೆಟ್ಟು: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ದ.ಕ., ಉಡುಪಿ ಜಿಲ್ಲೆ ಬೆಳ್ತಂಗಡಿ ವಲಯದ 2025-2027ನೇ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭವು ಫೆ.10 ರoದು ಗುರುವಾಯನಕೆರೆ ಛಾಯಾಭವನದಲ್ಲಿ ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಇದರ ಜಿಲ್ಲಾಧ್ಯಕ್ಷರಾದ ನವೀನ್ ರೈ ಪಂಜಳ ವಹಿಸಿದ್ದರು ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿದ ಅವರು ನಮ್ಮ ಸಂಘಟನೆಯಲ್ಲಿ ಇದ್ದ ಸದಸ್ಯರ ಕಷ್ಟಗಳನ್ನು ಅರಿತು ಅವರೀಗೆ ಸಹಾಯ ಮಾಡುವುದರೊoದಿಗೆ ಸಮಾಜಮುಖಿ ಕಾರ್ಯಗಳಲ್ಲಿ ಸoಘಟನೆಯನ್ನು ತೊಡಗಿಸಿ ಸಮಾಜದಲ್ಲಿ ಉತ್ತಮ ಸoಘಟನಯಾಗಿ ಗುರುತಿಕೊoಡು ನಮ್ಮ ಎಸ್.ಕೆ.ಪಿ.ಎ ಸಂಘಟನೆ ಬೆಳೆಯಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಪಾಧ್ಯಕ್ಷ ದತ್ತಾತ್ರೆಯ ಕಾರ್ಕಳ, ದೇವರಾಜ್ ಶೆಟ್ಟಿ ಸುರತ್ಕಲ್, ಜಿಲ್ಲಾ ಸಂಚಾಲಕರಾದ ಗೋಪಾಲ್ ಸುಳ್ಯ, ಪ್ರಧಾನ ಕಾರ್ಯದರ್ಶಿ ಅಜಯ್ ಮಂಗಳೂರು, ಎಸ್.ಕೆ.ಪಿ ವಿವಿದ್ಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ವಾಸುದೇವ ರಾವ್ ಎಸ್.ಕೆ.ಪಿ.ಎ ಜಿಲ್ಲಾ ಕಟ್ಟಡ ಸಮಿತಿಯ ಅಧ್ಯಕ್ಷ ಆನಂದ ಎನ್ ಬಂಟ್ವಾಳ, ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿ ಸುರೇಶ್ ಬಿ ಕೌಡoಗೆ, ಬೆಳ್ತಂಗಡಿ ವಲಯದ ಸ್ಥಾಪಕ ಅಧ್ಯಕ್ಷ ಪಾಲಾಕ್ಷ ಪಿ ಸುವರ್ಣ, ಎಸ್.ಕೆ.ಪಿ. ಸಹಕಾರಿ ಸಂಘದ ನಿರ್ದೇಶಕ ಭಾರದ್ವಾಜ್ ಉಜಿರೆ, ವಲಯದ ನಿರ್ಗಮನ ಅಧ್ಯಕ್ಷೆ ಸಿಲ್ವಿಯಾ ಕೊರ್ಡೆರೋ, ಕಾರ್ಯದರ್ಶಿ ವಿಜಯ ಎಚ್ ಪ್ರಸಾದ, ನೂತನ ಅಧ್ಯಕ್ಷ ರವಿ ಪೂಜಾರಿ ನಾರಾವಿ, ಗೌರವಾಧ್ಯಕ್ಷ ವಿಲ್ಸನ್ ಬೆಳ್ತಂಗಡಿ, ಪ್ರಧಾನ ಕಾರ್ಯದರ್ಶಿ ದಾಮೋದರ್ ಗುರುವಾಯನಕೆರೆ, ಕೋಶಾಧಿಕಾರಿ ಸುಜಿತ್ ರೈ, ವಲಯದ ಮಾಜಿ ಅಧ್ಯಕ್ಷರುಗಳು ಸರ್ವ ಸದಸ್ಯರು ಉಪಸ್ಥಿತರಿದ್ದರು.

ಅಶೋಕ್ ಆಚಾರ್ಯ ಪ್ರಾರ್ಥನೆ ಗೈದರು, ವಲಯದ ಸ್ಥಾಪಕ ಅಧ್ಯಕ್ಷ ಪಾಲಾಕ್ಷ ಪಿ ಸುವರ್ಣ ಪ್ರಾಸ್ತಾವಿಸಿ ಸ್ವಾಗತಿಸಿ, ಜಗದೀಶ್ ಜೈನ್ ಹಾಗೂ ಹರ್ಷ ಬಳ್ಳಮoಜ ನಿರೂಪಿಸಿದರು. ನೂತನ ಕಾರ್ಯದರ್ಶಿ ದಾಮೋದರ್ ವಂದಿಸಿದರು.

Related posts

ಬರೆಂಗಾಯ ಸ.ಉ.ಹಿ.ಪ್ರಾ. ಶಾಲೆಯಲ್ಲಿ 75ನೇ ವರ್ಷದ ಅಮೃತ ಮಹೋತ್ಸವದ ಉದ್ಘಾಟನಾ ಸಮಾರಂಭ

Suddi Udaya

ಶಿಶಿಲ ದೇವಾಲಯ ವ್ಯವಸ್ಥಾಪನಾ ಸಮಿತಿ ರಚನೆಗೆ ಮೀನ ಮೇಷ..ಭಕ್ತರ ಆಕ್ರೋಶ

Suddi Udaya

ಕುಮಟಾ ನೆರೆಪೀಡಿತ ಪ್ರದೇಶಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ತುರ್ತು ನೆರವು

Suddi Udaya

ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ವತಿಯಿಂದ ಕೊಕ್ರಾಡಿ ಸರ್ಕಾರಿ ಪ್ರೌಢಶಾಲೆ ಮತ್ತು ಪ.ಪೂ. ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

Suddi Udaya

ಅಕ್ರಮ ಜೂಜಾಟದ ಮೇಲೆ ವೇಣೂರು ಪೊಲೀಸರ ದಾಳಿ: 17 ಮಂದಿ ಆರೋಪಿಗಳ ಬಂಧನ

Suddi Udaya

ವಿದ್ವತ್ ಪಿಯು ಕಾಲೇಜಿನಲ್ಲಿ ವಿಶೇಷ ಕಾರ್ಯಕ್ರಮ: ವಿಜ್ಞಾನ-ವಿಸ್ಮಯ ಮತ್ತು ಕುತೂಹಲ” ಎಂಬ ಶೀರ್ಷಿಕೆಯಡಿಯಲ್ಲಿ ವಿಶೇಷ ಕಾರ್ಯಾಗಾರ

Suddi Udaya
error: Content is protected !!