March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಚಾರ್ಮಾಡಿ: ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಜಾತ್ರೋತ್ಸವಕ್ಕೆ ಚಾಲನೆ

ಚಾರ್ಮಾಡಿ: ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆ ಮತ್ತು ಆರಾಟ್ ಉತ್ಸವ ಬ್ರಹ್ಮ ಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ಹಿರಿತನದಲ್ಲಿ ಫೆ. 12ರಿಂದ 16ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

ಫೆ. 12ರಂದು ಬೆಳಿಗ್ಗೆ ಪ್ರಾರ್ಥನೆ ಪಂಚಗವ್ಯ ಪುಣ್ಯಾಹ, ಗಣಹೋಮ, ಸಾನಿಧ್ಯ ಕಲಶ ಪೂಜೆ, ಸಾನಿಧ್ಯ ಕಲಶಾಭಿಷೇಕ ಬಳಿಕ ಕೊಡಿ ಏರುವುದರ ಮೂಲಕ ಜಾತ್ರೋತ್ಸವ ಚಾಲನೆ ಗೊಂಡಿತು. ಮಧ್ಯಾಹ್ನ ಮಹಾಪೂಜೆ ಉತ್ಸವಬಲಿ ನಡೆಯಿತು.

ಸಂಜೆ ದೀಪರಾಧನೆ, 7-00ರಿಂದ ಊರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ರಾತ್ರಿ ದೊಡ್ಡ ರಂಗ ಪೂಜೆ, ಫೆ.13ರಂದು ಬೆಳಿಗ್ಗೆ ಗಣಹೋಮ ಉಷ ಪೂಜೆ, ಬಿಂಬ ಶುದ್ಧಿ, ಕಲಶ ಪೂಜೆ, ಸಾನಿಧ್ಯ ಕಲಶಾಭಿಷೇಕ, ಮಹಾ ಪೂಜೆ, ತತ್ವ ಬಲಿ, ಉತ್ಸವ ಬಲಿ, ದೀಪರಾಧನೆ, ರಾತ್ರಿ ರಂಗ ಪೂಜೆ, ಉತ್ಸವ ಬಲಿ, ನೃತ್ಯ ಬಲಿ, ಶಾರದಾ ಆರ್ಟ್ಸ್ ಐಸಿರಿ ಕಲಾವಿದರು ಮಂಜೇಶ್ವರ ಇವರಿಂದ ಪೌರಾಣಿಕ ನಾಟಕ. “ಭಜರಂಗಿ ಬಲಿ ” ಪ್ರದರ್ಶನ ಗೊಳ್ಳಲಿದೆ.

ಫೆ.14ರಂದು ಬೆಳಿಗ್ಗೆ ಗಣಹೋಮ, ಉಷಪೂಜೆ, ಪ್ರಾತ ಬಲಿ, ಸಾನಿಧ್ಯ ನವಕ ಕಲಶಾಭಿಷೇಕ, ಉತ್ಸವ ಬಲಿ, ಸಂಜೆ ದೀಪರಾಧನೆ, ರಾತ್ರಿ ದೊಡ್ಡ ರಂಗ ಪೂಜೆ, ಧಾರ್ಮಿಕ ಸಭೆ, ಪಂಚಶ್ರೀ ಸಾಂಸ್ಕೃತಿಕ ಕಲಾ ಕೇಂದ್ರದ ವಿದ್ಯಾರ್ಥಿಗಳಳಿಂದ ಯಕ್ಷಗಾನ “ಪಾಂಚಜನ್ಯ”, ಫೆ.15ರಂದು ಬೆಳಿಗ್ಗೆ ಗಣಹೋಮ, ವೈದಿಕ ವಿಧಿವಿಧಾನ, ತುಲಾಭಾರ ಸೇವೆಸಂಜೆ ದೀಪರಾಧನೆ,, ಮತ್ತೂರು ಬೆಡಿ ಸೇವೆ, ಭಜನಾ ಕಮ್ಮಟೋತ್ಸವ, ರಾತ್ರಿ ದೊಡ್ಡ ರಂಗಪೂಜೆ, ರಥಬೀದಿ ಯಿಂದ ದೇವರ ಕಟ್ಟೆಗೆ ದೇವರ ಸವಾರಿ ಕಟ್ಟೆ ಪೂಜೆ ಸಿಡಿ ಮದ್ದು ಪ್ರದರ್ಶನ, ನೃತ್ಯ ಬಲಿ, ಬಟ್ಟಲು ಕಾಣಿಕೆ, ಕವಾಟ ಬಂಧನ. ಫೆ. 16ರಂದು ಬೆಳಿಗ್ಗೆ, ಕವಾಟೋದ್ಘಾಟನೆ, ಆರಟು ಬಲಿ, ಅರಾಟು ಉತ್ಸವ, ದೇವರ ಜಳಕ, ಕಟ್ಟೆ ಪೂಜೆ, ಬಟ್ಟಲು ಕಾಣಿಕೆ, ಕೋಡಿ ಇಳಿಸುವುದು, ಸಂಪ್ರೋಕ್ಷಣೆ ಸಂಜೆ ದೈವಗಳ ಭಂಡಾರ ಹೊರಡುವುದು ಬಳಿಕ ಪಿಲಿಚಾಮುಂಡಿ ಮತ್ತು ಅಂಗಣ ಪಂಜುರ್ಲಿ ದೈವಗಳಿಗೆ ನೇಮೋತ್ಸವ, ರಾತ್ರಿ ರಂಗಪೂಜೆ ನಡೆಯಲಿದೆ.

Related posts

ಮಹೇಶ್‌ ಶೆಟ್ಟಿ ತಿಮರೋಡಿ ವಿರುದ್ಧ ಕೇಸ್‌ ದಾಖಲು

Suddi Udaya

ವೇಣೂರು ಭಾರತಿ ಶಿಶುಮಂದಿರದಲ್ಲಿ ಭಗವದ್ಗೀತೆಯ ಕಲಿಕಾ ತರಗತಿ ಉದ್ಘಾಟನೆ

Suddi Udaya

ಬೆಳ್ತಂಗಡಿಯಲ್ಲಿ ಸಾಯಿನಾಥ್ ಗೌಡ ರವರ ನೂತನ ವಕೀಲರ ಕಛೇರಿ ಉದ್ಘಾಟನೆ

Suddi Udaya

ಐಸಿಎಸ್‌ಇ ಪರೀಕ್ಷೆ: ಮುಂಡಾಜೆ ಕ್ರೈಸ್ಟ್ ಅಕಾಡೆಮಿ ಶಾಲೆ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

Suddi Udaya

ಲಾಯಿಲ: ಕೊರಂ ಕೊರತೆಯಿಂದ ಮುಂದೂಡಲಾಗಿದ್ದ ಗ್ರಾ.ಪಂ. ಸಾಮಾನ್ಯ ಸಭೆಯು ನ.29 ರಂದು ಯಶಸ್ವಿ

Suddi Udaya

ಉಜಿರೆ : ಶ್ರೀ ಧ.ಮ. ಕಾಲೇಜು ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮ – ವಿಶೇಷ ಸಾಧಕರಿಗೆ ಸನ್ಮಾನ – ಚಿಗುರು ಪತ್ರಿಕೆ ಅನಾವರಣ

Suddi Udaya
error: Content is protected !!