23.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಜೆಇಇ ಫಲಿತಾಂಶದಲ್ಲಿ ಗುರುವಾಯನಕೆರೆ ವಿದ್ವತ್ ಕಾಲೇಜು ವಿದ್ಯಾರ್ಥಿಗಳ ಶ್ರೇಷ್ಠ ಸಾಧನೆ

ಬೆಳ್ತಂಗಡಿ: ಭಾರತೀಯ ಪ್ರತಿಷ್ಠಿತ ಸಂಸ್ಥೆಗಳಾದ ಎನ್‌ಐಟಿ ಹಾಗೂ ಐಐಐಟಿ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಜೆಇಇ (ಮೇನ್ಸ್)- 2026 ಪರೀಕ್ಷೆಯಲ್ಲಿ ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನ ವಿದ್ಯಾರ್ಥಿ ಚಿನ್ಮಯ್ ಜಿ.ಕೆ. ಶೇ.99.6465 ಪರ್ಸೆಂಟೈಲ್  ಪಡೆಯುವ ಮೂಲಕ ದ.ಕ.ಜಿಲ್ಲೆಗೆ ಹಾಗೂ ಬೆಳ್ತಂಗಡಿ ತಾಲೂಕಿಗೆ ಅದ್ವಿತೀಯ ಸಾಧನೆ ತೋರಿದ್ದಾರೆ.

ಚಿನ್ಮಯ್ ಜಿ.ಕೆ. ಭೌತಶಾಸ್ತ್ರದಲ್ಲಿ ಶೇ.99.5167, ರಸಾಯನಶಾಸ್ತ್ರದಲ್ಲಿ 99.4710, ಗಣಿತದಲ್ಲಿ ಶೇ.99.1618 ಪರ್ಸೆಂಟೈಲ್ ಪಡೆಯುವ ಮೂಲಕ ಒಟ್ಟು ಶೇ.99.6465 ಫಲಿತಾಂಶದೊಂದಿಗೆ ಹೊಸ ದಾಖಲೆ ನಿರ್ಮಿಸಿದ್ದಾರೆ.

ಉಳಿದಂತೆ ವೈಯಕ್ತಿಕ ವಿಷಯದಲ್ಲಿ ನಾಲ್ವರು ವಿದ್ಯಾರ್ಥಿಗಳು ಶೇ.99 ಗಿಂತಲೂ ಅಧಿಕ ಪರ್ಸೆಂಟೈಲ್ ಪಡೆದಿದ್ದು, ಭೌತಶಾಸ್ತ್ರದಲ್ಲಿ ಮನೀಶ್ ಡಿ. ಶೇ.99.6054 ಹಾಗೂ ಪ್ರತೀಕ್ ವಿ.ಎಸ್. ಶೇ.99.5473 ಪರ್ಸೆಂಟೈಲ್ ಪಡೆದಿದ್ದು, ರಸಾಯನಶಾಸ್ತ್ರದಲ್ಲಿ ತನುಶ್ರೀ ಶೇ.99.5115 ಪರ್ಸೆಂಟೈಲ್ ಪ್ರತೀಕ್ ವಿ.ಎಸ್. ಶೇ.99.1198 ಪರ್ಸೆಂಟೈಲ್, ಪ್ರಥಮ್ ಗೋಖಲೆ ಗಣಿತದಲ್ಲಿ 98.9986 ಪರ್ಸೆಂಟೈಲ್ ದಾಖಲಿಸಿ

ಉಳಿದಂತೆ ಪ್ರತಿಕ್ ವಿ.ಎಸ್. ಶೇ.98.8882, ಮನೀಶ್ ಡಿ. ಶೇ.97.5254, ಪ್ರಥಮ್ ಆರ್.ಗೋಖಲೆ ಶೇ.98.2818, ತನುಶ್ರೀ 97.6893 ಫಲಿತಾಂಶ ಪಡೆಯುವ ಮೂಲಕ ಕಾಲೇಜಿಂದ ಪ್ರಥಮ ಬಾರಿಗೆ ಜೆಇಇ ಪರೀಕ್ಷೆಗೆ ಹಾಜರಾದ 35 ವಿದ್ಯಾರ್ಥಿಗಳ ಪೈಕಿ ಐವರು ಈ ಸಾಧನೆ ಮಾಡಿರುವುದು ಕಾಲೇಜಿಗೆ ಹೆಮ್ಮೆ ತಂದಿದೆ.

ವಿದ್ಯಾರ್ಥಿಗಳ ಉತ್ತಮ ಸಾಧನೆಗೆ ಮತ್ತು ಉಪನ್ಯಾಸಕರ ಪರಿಶ್ರಮಕ್ಕೆ ಸಂಸ್ಥೆಯ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಕಾರ್ಯದರ್ಶಿ ಪ್ರಜ್ವಲ್ ರೈ, ಶೈಕ್ಷಣಿಕ ನಿರ್ದೇಶಕರಾದ ಗಂಗಾಧರ ಮಂಡಗಳಲೆ, ಪ್ರಾಂಶುಪಾಲರಾದ ಹರೀಶ್ ಕೆ.ಆರ್., ಪ್ರಶಂಸಿದ್ದಾರೆ.

Related posts

ತಾಲೂಕು ಮಟ್ಟದ ಸ್ಪರ್ಧೆ: ಧರ್ಮಸ್ಥಳ ಶ್ರೀ ಮಂ.ಸ್ವಾ.ಅ. ಹಿ. ಪ್ರಾ. ಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಭೇಟಿ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಓಣಂ ಆಚರಣೆ

Suddi Udaya

ಕೊಕ್ಕಡ: ಕಥೋಲಿಕ್ ಸಭಾ ಮಂಗ್ಳುರ್ ಪ್ರದೇಶ್ ಘಟಕದ ಪದಗ್ರಹಣ ಹಾಗೂ ವಾರ್ಷಿಕ ಸಮ್ಮಿಲನ ಕಾರ್ಯಕ್ರಮ

Suddi Udaya

ಲಾಯಿಲ: ಪಡ್ಲಾಡಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ: ಅಧ್ಯಕ್ಷರಾಗಿ ಹರ್ಷಿತ್ ನಿನ್ನಿಕಲ್ಲು, ಕಾರ್ಯದರ್ಶಿ ವಿನಯ್, ಕೋಶಾಧಿಕಾರಿ ಹರೀಶ್ ಎಲ್.ಆಯ್ಕೆ

Suddi Udaya

ಬೆಳ್ತಂಗಡಿ ಜೂನಿಯರ್ ಕಾಲೇಜಿನಲ್ಲಿ ಸಿಇಟಿ ತರಬೇತಿ ಮತ್ತು ಸ್ಪೋಕನ್ ಇಂಗ್ಲೀಷ್ ಕ್ಲಾಸ್ ಉದ್ಘಾಟನೆ

Suddi Udaya
error: Content is protected !!