March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನೆರಿಯ: ಹಿರಿಯ ಕಾಂಗ್ರೆಸ್ ನಾಯಕ ದಿ| ನೀಲಯ್ಯ ಮಲೆಕುಡಿಯವರ ಶ್ರದ್ಧಾಂಜಲಿ ಸಭೆ

ನೆರಿಯ: ತನಗಿಂತಲೂ ಮೊದಲೇ ಪಕ್ಷದ ಸದಸ್ಯರಾಗಿದ್ದುಕೊಂಡು ಕಾಂಗ್ರೆಸ್ ಪಕ್ಷದ ಉನ್ನತಿಗಾಗಿ ದುಡಿದಿರುವ ನೀಲಯ್ಯ ಮಲೆಕುಡಿಯರು ಕಾಂಗ್ರೆಸ್ ಪಕ್ಷದ ನಿಜವಾದ ಆಸ್ತಿಯಾಗಿದ್ದರು ಎಂದು ಮಾಜಿ ಶಾಸಕ ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ , ಮೆಸ್ಕಾಂ ಅಧ್ಯಕ್ಷ ಕೆ.ಹರೀಶ್ ಕುಮಾರ್ ಹೇಳಿದರು.

ಅವರು ಫೆ. 17 ರಂದು ನೆರಿಯ ಸಿಎ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಹಿರಿಯ ಕಾಂಗ್ರೆಸ್ ನಾಯಕ , ಮಾಜಿ ಗ್ರಾಮ ಪಂಚಾಯತ್ ಮತ್ತು ಭೂ ನ್ಯಾಯ ಮಂಡಳಿ ಸದಸ್ಯರಾಗಿದ್ದ ನೀಲಯ್ಯ ಮಲೆಕುಡಿಯವರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿ ಹಗಲಿರುಳು ದುಡಿದ ನೀಲಯ್ಯ ಮಲೆಕುಡಿಯರು ಇಂದು ನಮ್ಮೊಂದಿಗಿಲ್ಲ , ಆದರೂ ಅವರು ಕಟ್ಟಿದ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದೆ. ಮುಂದಿನ ಗ್ರಾಮ , ತಾಲೂಕು , ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಮೂಲಕ ನೀಲಯ್ಯ ಮಲೆಕುಡಿಯರಿಗೆ ನಿಜವಾದ ಶ್ರದ್ಧಾಂಜಲಿ ಅರ್ಪಿಸಬೇಕು ಎಂದು ಕರೆ ನೀಡಿದರು.

ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಫೆರ್ನಾಂಡೀಸ್ ಹಳ್ಳಿಮನೆ ಮಾತನಾಡಿ ಪಕ್ಷದ ಸಿದ್ಧಾಂತ , ಸಂವಿಧಾನದಲ್ಲಿ ಬದ್ದತೆಯಿಂದ ಪಕ್ಷದ ಏಳ್ಗೆಗಾಗಿ ದುಡಿದ ನೀಲಯ್ಯ ಮಲೆಕುಡಿಯರು ನಮಗೆಲ್ಲ ಪ್ರೇರಣೆಯಾಗಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಒಂದುಚೂರು ಅನ್ಯಾಯವಾದರೂ ಸಹಿಸದ ಅವರು ಕಾಂಗ್ರೆಸ್ ಪಕ್ಷವನ್ನು ತನ್ನ ತಾಯಿಯಂತೆ ಪ್ರೀತಿಸುತ್ತಿದ್ದರು. ತನ್ನ ಅನಾರೋಗ್ಯದ ಸಂದರ್ಭದಲ್ಲಿಯೂ ಭೇಟಿಯಾದವರ ಜೊತೆಗೆ ಪಕ್ಷದ ಬಗ್ಗೆ ಮಾಹಿತಿ ವಿನಿಮಯ ಮಾಡುತ್ತಿದ್ದರು ಎಂದರು.

ಸಭೆಯನ್ನು ಉದ್ದೇಶಿಸಿ ಮಹಿಳಾ ಕಾಂಗ್ರೆಸ್ ನ ರಾಜ್ಯ ಕಾರ್ಯದರ್ಶಿ ನಮಿತಾ ಪೂಜಾರಿ , ಪ್ರಚಾರ ಸಮಿತಿ ನೂತನ ಅಧ್ಯಕ್ಷ ಅಶ್ರಪ್ ನೆರಿಯ , ನೆರಿಯ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಹಮ್ಮದ್ ಪಿ , ಮಲೆಕುಡಿಯ ಸಮುದಾಯದ ಹಿರಿಯರಾದ ಕಾಂತಪ್ಪ ಆಲಂಗಾಯಿ , ಸುಂದರ ಮಲೆಕುಡಿಯ ಆಲಂಗಾಯಿ ಮಾತನಾಡಿದರು.

ಸಭೆಯಲ್ಲಿ ನೆರಿಯ ಗ್ರಾಮ ಪಂಚಾಯತ್ ಸದಸ್ಯ ರಮೇಶ್ ಕೆ.ಎಸ್ , ಮಾಜಿ ಸದಸ್ಯರಾದ ಪಿ.ಕೆ ರಾಜನ್ , ಮೂಸೆಕುಂಞ , ಮಾಜಿ ಮಂಡಲ ಪ್ರಧಾನ ನಂದಕುಮಾರ್ , ನೆರಿಯ ಹಾಲು ಉತ್ಪಾದಕರ ಸಂಘದ ನಿರ್ದೇಶಕ ಲೀಲಾಧರ್ ಮಲೆಕುಡಿಯ , ಬಾಲಕೃಷ್ಣ ಗೌಡ ಮಾಜಿ ನಿರ್ದೇಶಕ ಕಮಲಾಕ್ಷ ಗೌಡ , ಕಾಂಗ್ರೆಸ್ ಎಸ್ಟಿ ಘಟಕದ ಅಧ್ಯಕ್ಷ ಜಯಾನಂದ ಪಿಲಿಕಲ , ಮಲೆಕುಡಿಯ ಸಂಘದ ಅಧ್ಯಕ್ಷ ಗಂಗಯ್ಯ ಮಲೆಕುಡಿಯ ಹೇರಾಳ್ , ಮುಖಂಡರಾದ ಪುಷ್ಪ ಬಾಂದಡ್ಕ , ಸುಧಾರಕ ಆಲಂಗಾಯಿ , ರಾಜು ನೆರಿಯಕಾಡು ಉಪಸ್ಥಿತರಿದ್ದರು.

ಮೊದಲಿಗೆ ನೆರಿಯ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಎಂ. ಜೆ ಸೆಬಾಸ್ಟಿಯನ್ ಸ್ವಾಗತಿಸಿ , ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷ ಲಕ್ಷ್ಮಣ್ ಆಲಂಗಾಯಿ ಧನ್ಯವಾದವಿತ್ತರು.

Related posts

ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಧರ್ಮಸ್ಥಳ ಪೋಸೋಲಿಕೆ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಎ.ಆರ್.ಎಂ ಮೋಟಾರ್ಸ್ ನಲ್ಲಿ ಕಿಯಾ ಕಂಪನಿಯ ‘ನ್ಯೂ ಸೆಲ್ಟೋಸ್’ ಕಾರು ಬಿಡುಗಡೆ

Suddi Udaya

ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರ ಕ್ಷೇತ್ರದ ಚುನಾವಣೆ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂರಿಂದ ಮತದಾನ

Suddi Udaya

ಎಸ್.ಡಿ.ಎಂ. ಪಪೂ ಕಾಲೇಜು : ಶೈಕ್ಷಣಿಕ ಅಧ್ಯಯನ ಪ್ರವಾಸ

Suddi Udaya

ನಿಡ್ಲೆ: ಬೂಡುಜಾಲು ಹಾ.ಉ. ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ಸದಸ್ಯರಿಗೆ ಶೇ.10 ಡಿವಿಡೆಂಟ್ ಘೋಷಣೆ

Suddi Udaya
error: Content is protected !!