July 23, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಶ್ರೀ ಗುರುದೇವ ಮಠದ ಟ್ರಸ್ಟಿಗಳಾಗಿ ಕೆ. ಹರೀಶ್ ಕುಮಾರ್, ಸುಜಿತ ವಿ. ಬಂಗೇರ ಹಾಗೂ ನೂತನ ರಿಲಿಜಿಯಸ್ ಟ್ರಸ್ಟ್ ಗೆ 21 ಮಂದಿ ನೇಮಕ

ಧರ್ಮಸ್ಥಳ : ದೇವರ ಗುಡ್ಡೆ ಶ್ರೀ ಗುರುದೇವ ಮಠ ಟ್ರಸ್ಟ್ ಗೆ ತೆರವಾದ ಟ್ರಸ್ಟಿಗಳ ಸ್ಥಾನಕ್ಕೆ ತಾಲೂಕಿನ ಇಬ್ಬರು ಸೇರಿ 5 ಮಂದಿ ಸದಸ್ಯರನ್ನು ಟ್ರಸ್ಟಿಗಳಾಗಿ ಹಾಗೂ ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನಮ್ ನಿತ್ಯಾನಂದ ನಗರ ಇದರ ನೂತನ ರಿಲಿಜಿಯಸ್ ಟ್ರಸ್ಟ್ ಗೆ ತಾಲೂಕಿನ 4 ಮಂದಿ ಸೇರಿ ಒಟ್ಟು 21 ಮಂದಿಯನ್ನು ಟ್ರಸ್ಟಿಗಳಾಗಿ ಶ್ರೀ ರಾಮ ಕ್ಷೇತ್ರದ ಮಠಾಧೀಶ 1008 ಮಹಾ ಮಂಡಲೇಶ್ವರ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ನೇಮಕ ಮಾಡಿದ್ದಾರೆ ಎಂದು ಟ್ರಸ್ಟ್ ಕಾರ್ಯದರ್ಶಿ ತುಕಾರಾಮ ಸಾಲಿಯಾನ್ ಆರ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರೀ ಗುರುದೇವ ಮಠ ಟ್ರಸ್ಟ್ ಗೆ ಮೆಸ್ಕಾಂ ಅಧ್ಯಕ್ಷ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಹರೀಶ್ ಕುಮಾರ್, ಮಾಜಿ ಶಾಸಕ ದಿ. ವಸಂತ ಬಂಗೇರರ ಪತ್ನಿ ಬೆಳ್ತಂಗಡಿ ಬಿಲ್ಲವ ಮಹಿಳಾ ವೇದಿಕೆಯ ಸ್ಥಾಪಕ ಅಧ್ಯಕ್ಷ ಸುಜಿತಾ ವಿ. ಬಂಗೇರ, ಸಿರ್ಸಿ ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ್, ಸಾಗರ ಹೋಟೆಲ್ ಉದ್ಯಮಿ ಚಂದ್ರ ಪೂಜಾರಿ, ಕುಮುಟಾ ಗುತ್ತಿಗೆಗಾರ ಹೆಚ್. ಆರ್. ನಾಯ್ಕ ಇವರನ್ನು ನೇಮಕ ಮಾಡಲಾಗಿದೆ.

ರಿಲೀಜಿಯಸ್‌ ಟ್ರಸ್ಟಿಗಳಾದ ನಿವೃತ್ತ ಪೊಲೀಸ್ ವರಿಷ್ಟಾಧಿಕಾರಿ ಪೀತಾಂಬರ ಹೇರಾಜೆ ಬೆಳ್ತಂಗಡಿ, ನೋಟರಿ ವಕೀಲರು ಬೆಳ್ತಂಗಡಿ ಶ್ರೀ ಗುರುದೇವ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಭಗೀರಥ ಜಿ., ಉದ್ಯಮಿ ಕನ್ಯಾಡಿ ಶ್ರೀ ಗಣೇಶ್ ಪೇಂಟಿಂಗ್ ಮತ್ತು ಫ್ಲೋರಿಂಗ್ ಮಾಲಕ ರವೀಂದ್ರ ಪೂಜಾರಿ ಆರ್ಲ, ದ. ಕ. ಜಿಲ್ಲಾ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರು ಡಾ. ಸದಾನಂದ ಪೂಜಾರಿ, ವಕೀಲರು ಕುದ್ರೋಳಿ ಶ್ರೀ ಗೋಕರ್ಣನಾಥ್ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ಅಖಿಲ ಭಾರತ ಬಿಲ್ಲವ ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಗುತ್ತಿಗೆದಾರ ದಯಾನಂದ ಬೋಂಟ್ರ ಬಿ. ಬರೋಡ ಗುಜರಾತ್, ಉದ್ಯಮಿ ಗಂಗಾಧರ ಆಮೀನ್ ನಾಸಿಕ್, ಡಾ. ಜೀವರಾಜ್ ಸೊರಕೆ ಎಸ್ ಸಿ ಎಸ್ ಆಸ್ಪತ್ರೆ ಮಂಗಳೂರು, ಉರ್ಮಿಳಾ ರಮೇಶ್ ಮಂಗಳೂರು, ಶೇಖರ್ ಬಂಗೇರ ವಿಧ್ಯಾಮ್ ಗ್ರೂಪ್ ಆಫ್ ಹೋಟೆಲ್ ನವದೆಹಲಿ, ಕೃತೀನಾ ಅಮೀನ್ ಜೆ.ವಿ.ಸನ್ಸ್ ಮಂಗಳೂರು, ಉದ್ಯಮಿ ಸಂತೋಷ್ ಕುಮಾರ್ ಜನಾರ್ದನ ದೆಹಲಿ, ಸಮಾಜ ಸೇವಕ ಕೃಷ್ಣ ಆರ್. ನಾಯ್ಕ ಭಟ್ಕಳ, ಉದ್ಯಮಿ ವಿಜಯ ಕುಮಾರ್ ಸೊರಕೆ ಪುತ್ತೂರು, ಉದ್ಯಮಿ ರಘುನಾಥ ಮಾಬನ್ ಉಡುಪಿ, ಹರೀಶ್ ಸಾಲಿಯಾನ್ ಅಧ್ಯಕ್ಷರು ಬಿಲ್ಲವ ಸಂಘ ಬಹೇರಿನ್, ಭುವನೇಶ್ ಅಧ್ಯಕ್ಷರು ಶ್ರೀ ಗುರುನಾರಾಯಣ ಸ್ವಾಮಿ ಸಂಘ ಬಂಟ್ವಾಳ, ಡಾ ಪುರುಷೋತ್ತಮ ರಾಮಯ್ಯ ಎ. ಜೆ.ಆಸ್ಪತ್ರೆ ಮಂಗಳೂರು, ಉದ್ಯಮಿ ಲೋಕನಾಥ್ ಕೆ. ಮಂಗಳೂರು, ಉದ್ಯಮಿ ರವಿದಾಸ್ ಕೆ. ವಿ. ಬೆಂಗಳೂರು.

Related posts

ಬೆಳ್ತಂಗಡಿ ಪ್ರತಿಷ್ಠಿತ ಬಿಲ್ಲವ ಗುತ್ತು ಮನೆಯಲ್ಲಿ ಶ್ರೀ ಕ್ಷೇತ್ರ ಗೆಜ್ಜೆ ಗಿರಿಯ ವಾರ್ಷಿಕ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ವಾಣಿ ಶಿಕ್ಷಣ ಸಂಸ್ಥೆಯಲ್ಲಿ ಶಾರದಾ ಮಾತೆಯ ವಿಗ್ರಹ ಪಿಠಾರ್ಪಣೆ

Suddi Udaya

ಬೆಳ್ತಂಗಡಿ ತಾಲೂಕಿನ 11 ಸರ್ಕಾರಿ ಶಾಲೆಗಳಗೆ ಕೆ.ಪಿ.ಎಸ್ ಸ್ಥಾನಮಾನ; ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ

Suddi Udaya

ಬೆಳ್ತಂಗಡಿ ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ: ನೂತನ ನಿರ್ದೇಶಕರ ಪದಗ್ರಹಣ ಮತ್ತು 2025ರ ಸಾಧಕರ ಪ್ರತಿಭಾ ಪುರಸ್ಕಾರ

Suddi Udaya

ಹೊಂಬೆಳಕು ಕಾರ್ಯಕ್ರಮದಲ್ಲಿ ಉಜಿರೆ ಪಂ.ಅ.ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ರವರಿಗೆ ಸನ್ಮಾನ

Suddi Udaya

ನಡ ಪ್ರೌಢಶಾಲೆಯಲ್ಲಿ ಮಕ್ಕಳ ಹಕ್ಕುಗಳ ಸಂಘ ಉದ್ಘಾಟನೆ

Suddi Udaya
error: Content is protected !!