September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಶಾಸಕ ಹರೀಶ್ ಪೂಂಜರ ಅನುದಾನ:ಕಾಶಿಪಟ್ಣ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ರಸ್ತೆ ಡಾಂಬರೀಕರಣಕ್ಕೆ ಚಾಲನೆ

ಕಾಶಿಪಟ್ಣ: ಕಾಶಿಪಟ್ಣ ಗ್ರಾಮದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ಕುಜಂಬೆ ರಸ್ತೆಯವರೆಗೆ ಡಾಂಬರೀಕರಣಗೊಳಿಸಲು ಶಾಸಕ ಹರೀಶ್ ಪೂಂಜರವರು ಅನುದಾನ ಒದಗಿಸಿದ್ದಾರೆ. ಈ ರಸ್ತೆಯ ಅಭಿವೃದ್ಧಿಯು ಸ್ಥಳೀಯರ ಮತ್ತು ಭಕ್ತಾದಿಗಳ ಬಹುಕಾಲದ ಬೇಡಿಕೆಯಾಗಿತ್ತು.

ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಈ ರಸ್ತೆ ಕಾಮಗಾರಿಯ ಶಿಲಾನ್ಯಾಸ ನೆರವೇರಿಸಲಾಯಿತು. ಈ ಅಭಿವೃದ್ಧಿ ಕಾರ್ಯಕ್ಕೆ ಶಾಸಕ ಹರೀಶ್ ಪೂಂಜ ಅವರು ಅನುದಾನ ಬಿಡುಗಡೆ ಮಾಡಿರುವುದಕ್ಕೆ ಸ್ಥಳೀಯರು ಮತ್ತು ಬಿಜೆಪಿ ಶಕ್ತಿಕೇಂದ್ರ ಕಾಶಿಪಟ್ಣದ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.

ಈ ಸಂದರ್ಭದಲ್ಲಿ ಶಿಲಾನ್ಯಾಸ ನೆರವೇರಿಸಿದ ಮರೋಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ರತ್ನಾಕರ್ ಬನ್ನನ್ ಹಾಗೂ ಕಾಮಗಾರಿಗೆ ಸಹಕರಿಸಿದ ಕಾಶಿಪಟ್ಣ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಅಶೋಕ್ ಕುಮಾರ್ ಜೈನ್, ರವೀಂದ್ರ ಪಿ., ಸವಿತಾ ನಡ್ಡ ಇವರೆಲ್ಲರಿಗೂ ಗ್ರಾಮಸ್ಥರು ಕೃತಜ್ಞತೆಗಳನ್ನು ಅರ್ಪಿಸಿದ್ದಾರೆ. ಗ್ರಾಮೀಣ ಭಾಗದ ರಸ್ತೆ ಸಂಪರ್ಕ ಸುಧಾರಣೆಯತ್ತ ಶಾಸಕರು ತೋರುತ್ತಿರುವ ಈ ಆಸಕ್ತಿಯು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

Related posts

ನಾರಾವಿ ಸೊಸೈಟಿಯ ಆರ್ಥಿಕ ಸಹಕಾರದಿಂದ ರಿಕ್ಷಾ ನಿಲ್ದಾಣ ನಿರ್ಮಾಣ: ಅಧ್ಯಕ್ಷ ಸುಧಾಕರ ಭಂಡಾರಿಯವರಿಂದ ಉದ್ಘಾಟನೆ, ಸಂಭ್ರಮದ ವಾಹನ ಪೂಜೆ

Suddi Udaya

ಬೆಳಾಲು: ಕೃಷಿ ತೋಟಕ್ಕೆ ನುಗ್ಗಿದ ಕಾಡಾನೆ

Suddi Udaya

ವೇಣೂರು ಭಗವಾನ್ ಬಾಹುಬಲಿ ಸ್ವಾಮಿ ಮಸ್ತಕಾಭಿಷೇಕ ಪ್ರಯುಕ್ತ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

Suddi Udaya

ಪುದುವೆಟ್ಟು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಮಾಸಿಕ ಸಭೆ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Suddi Udaya

ಪೆರ್ಲ -ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಪುನರ್ ಪ್ರತಿಷ್ಟಾಬಂಧ ಬ್ರಹ್ಮಕಲಶೋತ್ಸವಕ್ಕೆ ಮಾಜಿ ಶಾಸಕರಾದ ಪ್ರಭಾಕರ ಬಂಗೇರ ಭೇಟಿ

Suddi Udaya
error: Content is protected !!