March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಧರ್ಮಸ್ಥಳದಿಂದ ಬಳಂಜ ಶಾಲಾ ಕ್ರೀಡಾಂಗಣ ಅಭಿವೃದ್ದಿಗೆ ನೆರವು, ಮಂಜೂರಾತಿ ಪತ್ರ ಹಸ್ತಾಂತರ

ಬೆಳ್ತಂಗಡಿ: ಬಳಂಜ ಶಿಕ್ಷಣ ಟ್ರಸ್ಟ್ ರಿ ಬಳಂಜ ಇದರ ನೇತೃತ್ವದಲ್ಲಿ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ, ಪ್ರೌಢಶಾಲಾ ಕ್ರೀಡಾಂಗಣ ಅಬಿವ್ರುದ್ದಿ ಕಾಮಗಾರಿ ನಡೆಯುತ್ತಿದ್ದು ಇದಕ್ಕೆ ಟ್ರಸ್ಟ್ ವತಿಯಿಂದ ಶ್ರಿಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಗೆ ಮನವಿ ಸಲ್ಲಿಸಲಾಗಿತ್ತು.

ಮನವಿಗೆ ಸ್ಪಂದಿಸಿದ ಡಾ| ಹೆಗ್ಗಡೆಯವರು ಶ್ರಿಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಪರಿಶೀಲಿಸುವಂತೆ ಸೂಚಿಸಿದ್ದು ಇವರ ಸೂಚನೆಯಂತೆ ಯೋಜನೆಯ ಅಧಿಕಾರಿಗಳು ಕ್ರೀಡಾಂಗಣ ಕಾಮಗಾರಿ ಪರಿಶೀಲಿಸಿದ್ದರು. ಇದರಂತೆ ಫೆ.20 ರಂದು ಮೂರು ಲಕ್ಷ ರೂ ಅನುದಾನದ ಮಂಜೂರಾತಿ ಪತ್ರವನ್ನು ಬಳಂಜ ಶಿಕ್ಷಣ ಟ್ರಸ್ಟ್ ರಿ ಬಳಂಜ ಇದರ ಅಧ್ಯಕ್ಷ ಮನೋಹರ್ ಬಳಂಜರಿಗೆ ಯೋಜನೆಯ ನಿರ್ದೇಶಕ ದಿನೇಶ್ ಪೂಜಾರಿ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಬಳಂಜ ಶಿಕ್ಷಣ ಟ್ರಸ್ಟ್ ನ ಟ್ರಷ್ಟಿಗಳು ಪ್ರಮೋದ್ ಜೈನ್, ಯೋಜನಾಧಿಕಾರಿ ಅಶೋಕ್ ಬಿ, ಮೇಲ್ವಿಚಾರಕಿ ಪದ್ಮಾವತಿ, ಕಾರ್ಯನಿರತರಾದ ಉಮಾ, ಪೂರ್ಣಿಮ, ಶಾಲಾ ಪ್ರಭಾರ ಮುಖ್ಯೋಪಾಧ್ಯಾಯ ಮಲ್ಲಿಕಾರ್ಜುನ , ಶಿಕ್ಷಕಿ ಶೈನಿ ರೀಮಾ ಕ್ರಾಸ್ತಾ ಉಪಸ್ಥಿತರಿದ್ದರು. ಟ್ರಸ್ಟ್ ನೇತ್ರತ್ವದಲ್ಲಿ ಚಿಣ್ಣರ ಅಂಗಣ , ರಂಗಮಂದಿರ ನಿರ್ಮಾಣ, ಕಂಪ್ಯೂಟರ್ ಕೊಠಡಿ ನಿರ್ಮಾಣಕ್ಕೆ ಯೋಜನೆ ರೂಪಿಸಿ ಶಿಲಾನ್ಯಾಸ ನೆರವೇರಿಸಲಾಗಿದೆ. ಟ್ರಸ್ಟ್ ವತಿಯಿಂದ ಈಗಾಗಲೆ ನಾಲ್ಕು ಗೌರವ‌ ಶಿಕ್ಷಕಿಯರಿಗೆ ಗೌರವಧನ, ಒರ್ವ ಸಹಾಯಕಿಗೆ ಗೌರವಧನ ನೀಡಲಾಗುತ್ತಿದೆ. ಉಚಿತ ಎಲ್ ಕೆ ಜಿ ,ಯು ಕೆ ಜಿ ಶಿಕ್ಷಣ ನೀಡಲಾಗುತ್ತಿದೆ.

Related posts

ವಾಲಿಬಾಲ್ ಪಂದ್ಯಾಟ: ಮುಂಡಾಜೆ ವಿವೇಕಾನಂದ ಶಿಕ್ಷಣ ಸಂಸ್ಥೆಯ ಬಾಲಕಿಯರ ತಂಡ ಪ್ರಥಮ ಸ್ಥಾನ

Suddi Udaya

ಬಂದಾರು: ಬಿಜೆಪಿ ಕಾರ್ಯಕರ್ತರಿಂದ ಬಿರುಸಿನ ಮತಪ್ರಚಾರ

Suddi Udaya

ಓಡಿಲ್ನಾಳ: ಕೋರ್ಯಾರು ರಸ್ತೆಯಲ್ಲಿ ವಿದ್ಯುತ್ ಲೈನ್ ಗೆ ಬಿದ್ದ ಮರ

Suddi Udaya

ಆ.14: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಡಾ. ಬಿ. ಯಶೋವರ್ಮ ಅವರ ಸ್ಮರಣಾರ್ಥ ಅರಿವಿನ ದೀವಿಗೆ ಉಪನ್ಯಾಸ

Suddi Udaya

ಚಾರ್ಮಾಡಿಯಲ್ಲಿ ವಿದ್ಯಾರ್ಥಿಗಳು ಹಾಗೂ ಕೆಲವು ಸಾರ್ವಜನಿಕರಿನಿಂದ ಬಸ್ ತಡೆಹಿಡಿದು ಗಲಾಟೆ

Suddi Udaya

ಪುದುವೆಟ್ಟು: ಮಿಯಾರು ನಿವಾಸಿ ಶೇಖರ್ ಗೌಡ ವಿಷ ಸೇವಿಸಿ ಆತ್ಮಹತ್ಯೆ

Suddi Udaya
error: Content is protected !!