24.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪೊಲೀಸ್ಬೆಳ್ತಂಗಡಿ

ಸ್ಫೋಟ ಪ್ರಕರಣ: ಧರ್ಮಸ್ಥಳ ಪೊಲೀಸರು ಮತ್ತು ಸೋಕೋ ತಂಡದಿಂದ ಸ್ಥಳ ಮಹಜರು

ಬೆಳ್ತಂಗಡಿ : ಅಂಗಳಕ್ಕೆ ನಾಯಿ ತಂದು ಹಾಕಿದ ಚೆಂಡಿನಂಥ ಸ್ಫೋಟಕ ವಸ್ತುವನ್ನು ಬಾಲ್ ಎಂದು ಭ್ರಮಿಸಿ ಮಕ್ಕಳು ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ವೇಳೆ ಭಯಂಕರ ಸದ್ದಿನಲ್ಲಿ ಸ್ಫೋಟಗೊಂಡು ಬಾಲಕ ಗಾಯಗೊಂಡು ಪವಾಡ ಸದೃಶ ಪ್ರಾಣಾಪಾಯದಿಂದ ಪಾರಾದ ಮನೆಗೆ ಫೆ.19 ರಂದು ಸಂಜೆ ಧರ್ಮಸ್ಥಳ ಪೊಲೀಸರು ಮತ್ತು ಸೋಕೋ ತಂಡ ಭೇಟಿ ನೀಡಿ ಘಟನಾ ಸ್ಥಳದಲ್ಲಿ ಪರಿಶೀಲಿಸಿ ಮಹಜರು ನಡೆಸಿದ್ದಾರೆ.

ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಬಲಿಪೆ ನಿವಾಸಿ ಮುಕುಂದ ಮತ್ತು ಜಯಶ್ರೀ ದಂಪತಿಯ ಪುತ್ರ ಅಭೀಶ್ (11) ಎಂಬಾತ ಮನೆಯಂಗಳದಲ್ಲಿ ಫೆ.18ರಂದು ಸಂಜೆ ಸಂಭವಿಸಿದ ಅವಘಡದಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಪವಾಡ ಸದೃಶವಾಗಿ ಪಾರಾಗಿದ್ದರು. ಚೆಂಡಿನಂಥ ವಸ್ತುವೊಂದನ್ನು ಮನೆಯ ನಾಯಿ ಎಲ್ಲಿಂದಲೋ ಕಚ್ಚಿಕೊಂಡು ಬಂದು ಅಂಗಳದ ಬದಿಯಲ್ಲಿ ಹಾಕಿದ್ದು ಇದು ಏನೆಂದು ತಿಳಿಯದ ಮುಗ್ಧ ಮಕ್ಕಳು ಬಾಲ್ ಎಂದು ಕ್ರಿಕೆಟ್ ಆಡುತ್ತಿದ್ದಾಗ ಆ ವಸ್ತು ಸ್ಫೋಟಗೊಂಡಿದ್ದು ಸ್ಫೋಟದ ತೀವ್ರತೆಗೆ ಬಾಲಕ ಅಭೀಶ್ ಎಂಬಾತ ಗಾಯಗೊಂಡಿದ್ದ. ಗಾಯಗೊಂಡ ಬಾಲಕನನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಸ್ಫೋಟಗೊಂಡ ಮನೆಗೆ ಧರ್ಮಸ್ಥಳ ಎಸ್ ಐ ಸಮರ್ಥ್ ಗಾಣಿಗೇರ್, ಸೋಕೋ ವಿಭಾಗದ ಸುಮಂತ್, ಆಶಿಫ್ ಅವರುಗಳನ್ನೊಳಗೊಂಡ ಪೊಲೀಸರ ತಂಡ ಗುರುವಾರ ಸಂಜೆ ಭೇಟಿ ನೀಡಿ ಮನೆಯವರಿಂದ ಘಟನೆಯ ಮಾಹಿತಿ ಪಡೆದಿದ್ದಾರೆ.


ಈ ಸಂದರ್ಭ ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿ ಸ್ಫೋಟಕದ ಅವಶೇಷ ಮಾದರಿಗಳನ್ನು ಸಂಗ್ರಹಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಧರ್ಮಸ್ಥಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನಾ ಸ್ಥಳದಲ್ಲಿ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ದಿನೇಶ್ ಖಂಡಿಗ, ಸ್ಥಳೀಯರಾದ ಸಂತೋಷ್ ಬಲಿಪೆ ಇದ್ದರು.

Related posts

ಸೋಮಂತಡ್ಕದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಜಾರಿದ ಕಾರು

Suddi Udaya

ಡಿಕ್ಕಿ ಹೊಡೆದು ವಾಹನ ಸಹಿತ ಚಾಲಕ ಪರಾರಿ: ಸ್ಕೂಟರ್ ಸವಾರನಿಗೆ ಗಂಭೀರ ಗಾಯ

Suddi Udaya

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘಕ್ಕೆ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ ಪ್ರದಾನ

Suddi Udaya

ಕುವೆಟ್ಟು: ಸ.ಉ.ಹಿ.ಪ್ರಾ.ಶಾಲೆಯಲ್ಲಿ ಕನಕದಾಸ ಜಯಂತಿ

Suddi Udaya

ಬೆಳಾಲು ಶ್ರೀ ಧ.ಮಂ.ಪ್ರೌ. ಶಾಲೆಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಕಥೆಗಳಲ್ಲಿ ಜೀವನ ಮೌಲ್ಯ ಉಪನ್ಯಾಸ ಕಾರ್ಯಕ್ರಮ

Suddi Udaya

ಕನ್ಯಾಡಿ II, ದ. ಕ. ಜಿ. ಪ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಕರ ಸಭೆ

Suddi Udaya
error: Content is protected !!