March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿವರದಿ

ಫೆ. 26ರಿಂದ ಮಾ.4: ಬೆಳಾಲು ಮಾಯ ಮಹಾದೇವ ದೇವಸ್ಥಾನದ ವಾರ್ಷಿಕ ಜಾತ್ರೆ

ಬೆಳಾಲು: ಮಾಯ ಮಾಯ ಮಹಾದೇವ ದೇವಸ್ಥಾನದ ವಾರ್ಷಿಕ ಜಾತ್ರೆ ಫೆ. 26 ರಿಂದ ಮಾ.4ರ ವರೆಗೆ ಆಲಂಬಾಡಿ ವೇ. ಮೂ. ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಫೆ. 26ರಂದು ಬೆಳಗ್ಗೆ ಮಾಯ ಗುತ್ತಿನ ಮನೆಯಲ್ಲಿ ದೈವಗಳಿಗೆ ಕಲಶ ಪರ್ವ, ಫೆ.27ರಂದು ಗಣಪತಿ ಹೋಮ,ಮಾಯ ಗುತ್ತಿನ ಮನೆಯಲ್ಲಿ ಶಾರಿ ಹಾಕಿ ಗೊನೆ ಕಡಿಯುವುದು, ಬೆಳಾಲು ಗ್ರಾಮಸ್ಥರಿಂದ ಹೊರೆಕಾಣಿಕೆ ಸಮರ್ಪಣೆ, ಸುರುಳಿ ಶ್ರೀ ಸುಬ್ರಹ್ಮಣ್ಯಶ್ವರ ಮಹಿಳಾ ಭಜನಾ ತಂಡದಿಂದ ಭಜನೆ, ಬಾಲೆ ಮೊಟ್ಟಿಕಲ್ಲು ಪಾದಪೂಜೆ, ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಾಯಂಕಾಲ ತಂತ್ರಿವರ್ಯರಿಗೆ ಸ್ವಾಗತ, ಸಂಜೆ ಶ್ರೀ ಮಾಯ ಮಹೇಶ್ವರ ಭಜನಾ ಮಂಡಳಿ ಮತ್ತು ಅನಂತೋಡಿ ಶ್ರೀ ಅನಂತ ಪದ್ಮನಾಭಾ ಮಹಿಳಾ ಕುಣಿತ ಭಜನಾ ತಂಡದವರಿಂದ ಭಜನೆ, ಮಾಯ ಮತ್ತು ನಿಂತಿಕಲ್ಲು ಅಂಗನವಾಡಿ ಮತ್ತು ಹಳೆ ವಿದ್ಯಾರ್ಥಿಗಳಿಂದ ನೃತ್ಯವೈವಿದ್ಯ, ದೇವಸ್ಥಾನದಲ್ಲಿ ತೋರಣ ಮುಹೂರ್ತ , ರಾತ್ರಿ ಧ್ವಜಾರೋಹಣ, ಉಗ್ರಾಣ ತುಂಬುವುದು, ಮಹಾ ಪೂಜೆ, ಬಲಿ ಉತ್ಸವ, ಅರಿಕೋಡಿ ಮೇಲೋಡೀಸ್ ಇವರಿಂದ ಭಕ್ತಿ ರಸಮಂಜರಿ, ರಾತ್ರಿ ಶಿವಪ್ರಸಾದ್ ಮತ್ತು ಬಳಗ ಮಾಯ ಇವರಿಂದ ಕಿರುನಾಟಕ ” ಅಧ್ಯಕ್ಷೆರ್ ಬರೊಂದುಲ್ಲೆರ್ ” ಪ್ರದರ್ಶನಗೊಳ್ಳಲಿದೆ.

ಫೆ. 28ರಂದು ಬೆಳಗ್ಗೆ ಗಣಹೋಮ, ಕಲಶ ಪೂಜೆ ಮಧ್ಯಾಹ್ನ ಮಹಾಪೂಜೆ ಅನ್ನ ಸಂತರ್ಪಣೆ, ಸಾಯಂಕಾಲ, ಮಾಯ ಭಜನಾ ಮಂಡಳಿ ಮಹಿಳಾ ತಂಡದಿಂದ ಮತ್ತು ಅನಂತೋಡಿ ಶ್ರೀ ಅನಂತೇಶ್ವರ ಮಕ್ಕಳ ಭಜನಾ ತಂಡದಿಂದ ಭಜನೆ, ಸಂಜೆ ದುರ್ಗಾ ಪೂಜೆ, ರಾತ್ರಿ ಮಹಾಪೂಜೆ, ಬಲಿ ಉತ್ಸವ, ಕೊಲ್ನಾಡಿ ಮತ್ತು ಬೆಳಾಲು ಅಂಗನವಾಡಿ ಮಕ್ಕಳಿಂದ ನೃತ್ಯ ವೈವಿಧ್ಯ, ಮಂಗಳೂರು ಸುಸ್ವರ ಮ್ಯೂಸಿಕ್ಸ್ ಆರ್ಕೆಸ್ಟ್ರಾ ಮತ್ತು ಇವೆಂಟ್ಸ್ ಇವರಿಂದ ಸಂಗೀತ ರಸಮಂಜರಿ, ರಾತ್ರಿ ಶ್ರೀ ಮಾಯ ಮಹಾದೇವ ಕಲಾ ತಂಡ ಮಾಯ ಇವರಿಂದ ನಾಟಕ “ಆರ್. ಬುಡಯೇರ್” ಪ್ರದರ್ಶನಗೊಳ್ಳಲಿದೆ.

ಮಾ. 1ರಂದು ಬೆಳಗ್ಗೆ ಗಣಹೋಮ, ಸೂಡರ ಬಲಿ ಉತ್ಸವ, ಮಹಾ ಪೂಜೆ, ಅನ್ನಸಂತರ್ಪಣೆ, ಸಂಜೆ ಬೆಳಾಲು ಶ್ರೀ ಸರಸ್ವತಿ ಮಹಿಳಾ ಭಜನಾ ಮಂಡಳಿ ಮತ್ತು ಕೊಲ್ಪಾಡಿ ಶ್ರೀ ಸುಬ್ರಹ್ಮಣ್ಯಶ್ವರ ಭಜನಾ ಮಂಡಳಿಯಿಂದ ಭಜನೆ, ಬೆಳಾಲು ಅಂಗನವಾಡಿ ಶಿಕ್ಷಕರು ಮತ್ತು ಮಾಯ ಮಹಿಳಾ ತಂಡದಿಂದ ನೃತ್ಯ ವೈವಿಧ್ಯ, ರಾತ್ರಿ ಚಂದ್ರಮಂಡಲ ಉತ್ಸವ ಮತ್ತು ವಸಂತ ಕಟ್ಟೆ ಪೂಜೆ, ಪ್ರಸಾದ ವಿತರಣೆ, ಬಳಿಕ ಶ್ರೀ ವಿಷ್ಣು ಕಲಾವಿದೆರ್ ಮದ್ದಡ್ಕ ಇವರಿಂದ ಭಕ್ತಿ ಪ್ರಧಾನ ಹಾಸ್ಯ ತುಳು ನಾಟಕ ” ಕಾಶಿ ತೀರ್ಥ ”

ಮಾ.2ರಂದು ಬೆಳಗ್ಗೆ ಗಣಹೋಮ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಧ್ಯಾಹ್ನ ಪಲ್ಲಪೂಜೆ ನಡೆದ ಬಳಿಕ ಅನ್ನಸಂತರ್ಪಣೆ ನೆರವೇರಲಿದೆ. ಸಾಯಂಕಾಲ ಜನಾರ್ದನ ಪೆಲತ್ತಡಿ ಬಳಗದಿಂದ ಭಕ್ತಿಗಾನ ಸುಧೆ. ಮಾಯ ಗುತ್ತು ಮನೆಯಿಂದ ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳ ಭಂಡಾರ ಆಗಮನ, ರಾತ್ರಿ ರಥೋತ್ಸವ, ಭೂತಬಲಿ ಶಯನೋತ್ಸವ ನಡೆಯಲಿದೆ.

ಮಾ.3ರಂದು ಬೆಳಗ್ಗೆ ಗಣಹೋಮ, ಕವಾಟೋದ್ಘಾಟನೆ, ಮಹಾಪೂಜೆ, ಸಂಜೆ ಅವಕೃತ, ಧ್ವಜಾವರೋಹಣ, ನಿತ್ಯಪೂಜೆ, ರಂಗಪೂಜೆ, ರಾತ್ರಿ ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳಿಗೆ ನೇಮಬಲಿ, ಗುತ್ತಿನ ಮನೆಗೆ ಭಂಡಾರ ನಿರ್ಗಮನ. ಮಾ.4ರಂದು ಬೆಳಗ್ಗೆ ಗಣಹೋಮ, ದೇವಸ್ಥಾನದ ನಾಗಬನದಲ್ಲಿ ನಾಗ ತಂಬಿಲ ಸೇವೆ, ಸಂಪ್ರೋಕ್ಷಣೆ ನಡೆಯಲಿದೆ. ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಚ್‌. ಪದ್ಮ ಗೌಡ ತಿಳಿಸಿದ್ದಾರೆ.

Related posts

ಜೆಸಿಐ ಭಾರತದ ವಲಯ 15ರ ರಾಷ್ಟ್ರೀಯ ಕಾರ್ಯಕ್ರಮ ವಿಭಾಗದ ವಲಯ ನಿರ್ದೇಶಕರಾಗಿ ಜೇಸಿ ಹೆಚ್.ಜಿ.ಎಫ್ ಅಶೋಕ್ ಗುಂಡಿಯಲ್ಕೆ ಆಯ್ಕೆ

Suddi Udaya

ಎಸ್‌ಡಿಪಿಐ ತೆಂಕಕಾರಂದೂರು ವತಿಯಿಂದ ಪೆರಲ್ದಾರಕಟ್ಟೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬಕ್ರೀದ್ ಆಚರಣೆ

Suddi Udaya

ಕೊಕ್ಕಡದ ಕಿಟ್ಟ ಮಲೆಕುಡಿಯರವರಿಗೆ ಕರ್ನಾಟಕ ಜಾನಪದ ಪರಿಷತ್‌ ಪ್ರಶಸ್ತಿ ಪ್ರದಾನ

Suddi Udaya

ಸುಭಾಷ್ ಚಂದ್ರ ಬೋಸ್ ಐಕಾನ್ ಅವಾರ್ಡ್ 2025ರ ಪ್ರಶಸ್ತಿಗೆ ಭಾಜನರಾದ ರಾಜಕೇಸರಿ ಸಂಘಟನೆ ಸಂಸ್ಥಾಪಕ ದೀಪಕ್ ಜಿ ಬೆಳ್ತಂಗಡಿ

Suddi Udaya

ಗುರುವಾಯನಕೆರೆ ವಿದ್ವತ್ ಪಿ.ಯು. ಕಾಲೇಜು ವತಿಯಿಂದ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ ಚಿನ್ಮಯ್ ಜಿ.ಕೆ ರವರಿಗೆ ಸನ್ಮಾನ

Suddi Udaya
error: Content is protected !!