September 6, 2026
ಧಾರ್ಮಿಕ

ಮುಂಡೂರು ಪಾವನನಡೆ ಪ್ರತಿಷ್ಠಾನ ಪಾಪಿನಡೆಗುತ್ತುವಿನಲ್ಲಿ ದೈವಗಳಿಗೆ ಪಂಚಪರ್ವ- ಕೋಟಿ ಚೆನ್ನಯರ ದರುಶನ ಸೇವೆ

ಮುಂಡೂರು: ಮುಂಡೂರು ಗ್ರಾಮದ ಪಾವನನಡೆ ಪ್ರತಿಷ್ಠಾನ ಪಾಪಿನಡೆಗುತ್ತುವಿನಲ್ಲಿ ಫೆ.21ರಂದು ಗಣಪತಿ ಹೋಮ, ದೈವಗಳಿಗೆ ಪಂಚಪರ್ವ, ಶ್ರೀ ಸತ್ಯನಾರಾಯಣ ಪೂಜೆ ಸಂಜೆ ಬ್ರಹ್ಮಬೈದರ್ಲು ಕೋಟಿ ಚೆನ್ನಯರ ದರುಶನ ಸೇವೆ ನೆರವೇರಿತು.

ಫೆ.21 ಶನಿವಾರ ಬೆಳಿಗ್ಗೆ 8 ಕ್ಕೆ ಪಾಪಿನಡೆ ಗುತ್ತಿನ ಕುಟುಂಬಸ್ಥರ ಧರ್ಮ ಚಾವಡಿಯಲ್ಲಿ ಗಣಹೋಮ, ಮೂಲನಾಗ ಬನದಲ್ಲಿ ನಾಗಬ್ರಹ್ಮದೇವರಿಗೆ ತನು ತಂಬಿಲ ಸೇವೆ, ಧರ್ಮ ದೈವಗಳಿಗೆ ಪಂಚಪರ್ವ ಸೇವೆ, ಶ್ರೀ ಸತ್ಯನಾರಾಯಣ ಪೂಜೆ, ಮುಡಿಪು ಶುದ್ಧಿ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಿತು. ಸಂಜೆ ಗಂಟೆ ಪರಮಹಂಸ ಪರಿವ್ರಾಜಕಾಚಾರ್ಯ ಶ್ರೀ ವಿದ್ಯಾಶಂಕರಾನಂದ ಸರಸ್ವತಿ ಸ್ವಾಮೀಜಿ ಕಾಶಿ ಮಠ ವಾರಣಾಸಿ ಇವರ ಕ್ಷೇತ್ರಕ್ಕೆ ಆಗಮಿಸಿದ್ದು, ಅವರನ್ನು ಭವ್ಯವಾದ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು.

ಬಳಿಕ ಬ್ರಹ್ಮಬೈದೆರ್ಲು ಕೋಟಿ ಚೆನ್ನಯರ ದರುಶನ ಸೇವೆ, ಪ್ರಸಾದ ವಿತರಣೆ ರಾತ್ರಿ ಗಂಟೆ 8ಕ್ಕೆ ಅನ್ನಸಂತರ್ಪಣೆ ನಡೆಯಿತು. ಫೆ.22 ಆದಿತ್ಯವಾರ ಬೆಳಿಗ್ಗೆ ಗಂಟೆ 10 ರಿಂದ ದೈವಗಳಿಗೆ ಆಗೇಲು ಸೇವೆ ಸಂಜೆ ಗಂಟೆ 6 ಕ್ಕೆ ಕುಪ್ಪೆಟ್ಟಿ ದೈವಗಳಿಗೆ ಪಂಚಪರ್ವ ಆಗೇಲು ಸೇವೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.


ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಮಂಗಳಗಿರಿಯ ಧರ್ಮದರ್ಶಿ ಹಾಗೂ ಮುಂಡೂರು ಪಾವನನಡೆ ಪ್ರತಿಷ್ಠಾನ ಪಾಪಿನಡೆ ಇದರ ಅಧ್ಯಕ್ಷ ರಾಜೀವ, ಉಪಾಧ್ಯಕ್ಷ ಡಾ.ಚಂದ್ರಾವತಿ ನೂಜೇಲು, ಕಾರ್ಯದರ್ಶಿ ಚೇತನ್ ಗೇರುಕಟ್ಟೆ, ಕೋಶಾಧಿಕಾರಿ ಬ್ರಿಜೇಶ್ ಜೆ. ಕೋಟ್ಯಾನ್, ಜತೆ ಕಾರ್ಯದರ್ಶಿ ಜಗನ್ನಾಥ ಅಂತ್ರಂಗೆ ಗೌರವ ಸಲಹೆಗಾರರಾದ ಆನಂದ ಸುವರ್ಣ ಮಂಗಳೂರು, ಜಗನ್ನಾಥ ಪಾಪಿನಡೆ, ನಿತಿನ್ ಗೇರುಕಟ್ಟೆ, ಜಗನ್ನಾಥ ಪೂಜಾಫಲ, ಶಶಿಧರ ಬೆಳ್ಳಾರಿ, ಶುಭಕರ ಸುಳ್ಳೋಡಿ, ಹೇಮಾವತಿ ಕೊಡಿಬಾಳೆ, ಅರುಣ್

ಕೆಳಗಿನಬೆಟ್ಟು, ಸುಕೇಶ್ ಹಿಬರೋಡಿ, ಸಂತೋಷ್ ಕುಮಾರ್ ಮೇಗಿನ ಕಿನಿಂಜೆ, ಉಮೇಶ್ ನಾವರ, ಹರ್ಷಿತ್ ಕರಂಬಾರು,ನೋಣಯ್ಯ ಹಿಬರೋಡಿ, ಜಯಾನಂದ ಕುಮಟ, ನವೀನ ಹಿಮರಡ್ಡ, ಸುಧಾಕರ ಮಾಡಾವು
ಪುನೀತ್ ಶಿರ್ಲಾಲು, ಜಿನ್ನಪ್ಪ ಪೂಜಾರಿ ಮಾನ್ಯರಬೆಟ್ಟು, ಗಗನ್ ಮಡಿಕೇರಿ, ಕಾರ್ತಿಕ್ ಮಂಗಳೂರು, ಕಶ್ಯಪ್ ಕುದ್ರೋಳಿ, ಸುದೀಪ್ ರಾಜ್ ನೂಜೇಲು, ಶ್ರೀಕಾಂತ್ ಕಡಿಗೇರುಬೆಟ್ಟು, ಚಿದಾನಂದ ಮಾನರೊಟ್ಟು, ಬಾಬು ಪೂಜಾರಿ ಪರನೀರು


, ಸೋಮಪ್ಪ ಪೂಜಾರಿ ಮಾನ್ಯರಬೆಟ್ಟು ಹಾಗೂ ಮುಂಡೂರು, ಮೇಲಂತಬೆಟ್ಟು, ಸವಣಾಲು, ಕರಂಬಾರು ಗುತ್ತಿನ ಮನೆಯವರು ಬರ್ಕೆಯವರು, ಗ್ರಾಮಸ್ಥರು ಹಾಗೂ ಊರ ಪರವೂರ ಭಕ್ತರು ಉಪಸ್ಥಿತರಿದ್ದರು.

Related posts

ಕಕ್ಕಿಂಜೆ: ಮುಹ್ಯುದ್ದೀನ್ ಜುಮಾ ಮಸ್ಜಿದ್ ನಲ್ಲಿ ಬಕ್ರೀದ್ ಆಚರಣೆ

Suddi Udaya

ಕಳಿಯ ಮೂಡಾಯಿಪಲ್ಕೆ ಉದ್ಭವ ಶ್ರೀ ಆದಿಲಿಂಗೇಶ್ವರ ಕ್ಷೇತ್ರದ ವಾರ್ಷಿಕ ಉತ್ಸವದಲ್ಲಿ ನಲಿಕೆ ಸಮುದಾಯದ ನರ್ತಕರು ಹಾಗೂ ಸಮಾಜ ಬಾಂಧವರು ಭಾಗವಹಿಸುವುದಿಲ್ಲ : ನಲಿಕೆ ಸಮಾಜ ಸೇವಾ ಸಂಘ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಎಸ್. ಪ್ರಭಾಕರ್ ಸ್ವಷ್ಟನೆ

Suddi Udaya

ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದಲ್ಲಿ ಸಂಕ್ರಾಂತಿ ಪೂಜೆ: 3 ಸಾವಿರ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆಯ ಅರ್ಜಿ ಫಾರಂ ವಿತರಣೆ

Suddi Udaya

ಶ್ರೀರಾಮಲಲ್ಲಾನ ಪ್ರಾಣ ಪ್ರತಿಷ್ಠೆಯ ಪ್ರಯುಕ್ತ ಬಳಂಜ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ರಾಮ ತಾರಕ ಮಂತ್ರ ಜಪಯಜ್ಞ ಹಾಗೂ ದೀಪೋತ್ಸವ

Suddi Udaya

ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಜಯನಂದ ಪೂಜಾರಿ: ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ನವೀನ್ ಕುಮಾರ್ ಆಯ್ಕೆ

Suddi Udaya

ಸೌತಡ್ಕ: ಶ್ರೀ ಮಹಾಗಣಪತಿ ದೇವಸ್ಥಾನದ ಕಾಣಿಕೆ ಡಬ್ಬಿಯಲ್ಲಿನ ಹಣ ಎಣಿಕೆ ರಾಷ್ಟ್ರೀಕೃತ ಬ್ಯಾಂಕ್‌ ಸಿಬ್ಬಂದಿಗಳಿಂದಲೇ ಗೋಲ್‌ಮಾಲ್

Suddi Udaya
error: Content is protected !!