ಬೆಳ್ತಂಗಡಿ: ಗೌರವಾನ್ವಿತ ಸದಾಶಿವ ಶೆಟ್ಟಿ ಕನ್ಯಾನ ಅವರು, ಅವರ ದಾನ ಕಾರ್ಯಕ್ರಮಗಳಿಗೆ ಹಿತಿಶ್ರೀ ಎಂಬ ತೀರ್ಮಾನದಿಂದ ಹಿಂದೆ ಸರಿದು, ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಭಿನ್ನಾಭಿಪ್ರಾಯಗಳು ಸುಖಾಂತ್ಯ ಕಂಡಿದ್ದು, ಈಯೊಂದು ಬೆಳವಣಿಗೆ ನಮಗೆಲ್ಲರಿಗೂ ಸಂತಸ ತಂದಿದೆ ಎಂದು ಸದಾಶಿವ ಶೆಟ್ಟಿ ಅಭಿಮಾನಿ ಸಂಘ ಬೆಳ್ತಂಗಡಿ ಇದರ ಸಂಘಟಕರಾದ ಸಂದೀಪ್ ಶೆಟ್ಟಿ ಮಂದರ್ಸ ತಾಳಿಪಾಡಿಗುತ್ತು ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ನಮ್ಮ ಮಾರ್ಗದರ್ಶಕರು, ಹಿರಿಯರಾದ ಸದಾಶಿವ ಶೆಟ್ಟಿ ಅವರಿಗೆ ಮುಂದೆಯೂ ಗೌರವ ಸಿಗುವಂತಾಗಲಿ ಮತ್ತು ಅವರ ಈಯೊಂದು ತೀರ್ಮಾನ ಹರ್ಷವನ್ನು ತಂದಿದೆ. ಬಡವರಿಗೆ ಮತ್ತು ಧೀನ ದಲಿತರಿಗೆ, ಸಂಘ ಸಂಸ್ಥೆಗಳಿಗೆ ಇನ್ನಷ್ಟು ಅವರ ಸೇವೆ, ಸಹಕಾರ ಸಿಗುವಂತಾಗಲಿ ಎಂದು ತಿಳಿಸಿರುತ್ತಾರೆ.











