ಉಜಿರೆ: ಉಜಿರೆ ಗ್ರಾಮದ ಕಕ್ಕರೆಬೆಟ್ಟು ನಿವಾಸಿ ರಾಜೀವಿ ಎಂಬವರು ಉಜಿರೆ ಗ್ರಾಮದ ಕಕ್ಕರೆಬೆಟ್ಟು ಎಂಬಲ್ಲಿ ಅವರ ಸ್ವಾಧೀನದಲ್ಲಿರುವ ಸರ್ವೆ ನಂ: 406/1 ರಲ್ಲಿ ಮನೆ ನಿರ್ಮಿಸುತ್ತಿದ್ದು ಫೆ.27 ರಂದು 11 ಗಂಟೆಗೆ ರಾಜೀವಿ ಹಾಗೂ ಅವರ ಗಂಡ ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಆರೋಪಿ ರಫೀಕ್ ಎಂಬಾತ ಮನೆಗೆ ಅಕ್ರಮ ಪ್ರವೇಶ ಮಾಡಿ ಮನೆ ಹಾಗೂ ಮನೆಯಲ್ಲಿದ್ದ ಟಿ, ಪಿ, ಪ್ರಿಡ್ಜ್, ಗ್ಯಾಸ್ ಸಿಲಿಂಡರ್, ಪಿಠೋಪಕರಣಗಳನ್ನು, ಮತ್ತು ಬಟ್ಟೆ ಬರೆ, ದಿನಸಿ ಸಾಮಾನು ಇತ್ಯಾದಿ ವಸ್ತುಗಳನ್ನು ಬೀಸಾಡಿದ್ದು ಈ ಕೃತ್ಯದ ವಿಡಿಯೋ ಮಾಡುತ್ತಿದ್ದ ಪಿರ್ಯಾದಿದಾರರ ಮಗಳಿಗೆ ” ನೀನು ಏನಾದರೂ ದೂರನ್ನು ನೀಡಿದರೆ ನಿನ್ನನ್ನು ಹಾಗೂ ನಿನ್ನ ಮನೆಯವರನ್ನು ಜೀವಸಹಿತ ಬೀಡುವುದಿಲ್ಲ,” ಎಂದು ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ.ಈ ಕೃತ್ಯದಿಂದ ರಾಜೀವಿ ಅವರಿಗೆ ಸುಮಾರು ರೂ.10,00,000 ದಷ್ಟು ನಷ್ಟವುಂಟಾಗಿದೆ ಎಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಆರೋಪಿಯ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ 329(4), 324(5), 351(2), 352 ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.











