24.6 C
ಪುತ್ತೂರು, ಬೆಳ್ತಂಗಡಿ
March 6, 2026
ಧಾರ್ಮಿಕಪ್ರಮುಖ ಸುದ್ದಿ

ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂಭ್ರಮ- ಸಾವಿರಾರು ಭಕ್ತರಿಂದ ಹರಿದು ಬಂದ ಹಸಿರುವಾಣಿ ಹೊರೆಕಾಣಿಕೆ,ಭಜನಾ ಕಮ್ಮಟದ ಉದ್ಘಾಟನೆ- ಆಕರ್ಷಕ ಕಲಾತಂಡ,ಭಜನೆ,ವಿವಿಧ ವೇಷ ಭೂಷಣಗಳಿಂದ ಶೋಭಾಯಾತ್ರೆ

ನಾರಾವಿ: ಇತಿಹಾಸ ಪ್ರಸಿದ್ಧ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಹಸಿರುವಾಣಿ ಹೊರೆಕಾಣಿಕೆಯ ಭವ್ಯಶೋಭಾಯಾತ್ರೆಯ ಮೂಲಕ ಮಾ.1ರಂದು ಚಾಲನೆ ನೀಡಲಾಯಿತು.

ಹಸಿರುವಾಣಿ ಹೊರಕಾಣಿಕೆಯ ವೈಭವದ ಶೋಭಾಯಾತ್ರೆಗೆ ಅಳದಂಗಡಿ‌ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲರು ಚಾಲನೆ ನೀಡಿದರು.

ಅರಸಿಕಟ್ಟೆ ಬಳಿಯಿಂದ ಸಾಗಿದ ಮೆರವಣಿಗೆಯಲ್ಲಿ ಸುಮಾರು 90ಕ್ಕೂ ಹೆಚ್ಚು ವಾಹನದಲ್ಲಿ ಹಸಿರುವಾಣಿಯನ್ನು ತರಲಾಗಿತ್ತು. ಆಕರ್ಷಕ ಕಲಾತಂಡ,ಭಜನೆ,ವಿವಿಧ ವೇಷ ಭೂಷಣಗಳಿಂದ ಶೋಭಾಯಾತ್ರೆಯು ವೈಭವದಿಂದ ಸಾಗಿತು.

ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಂ, ಆಡಳಿತ ಮೊಕ್ತೇಸರ ರವೀಂದ್ರ ಪೂಜಾರಿ ಬಾಂದೋಟ್ಟು, ಎಕ್ಸೆಲ್ ಶಿಕ್ದಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಪೆರಾಡಿ ಸಿಎ ಬ್ಯಾಂಕ್ ಅಧ್ಯಕ್ಷ ಸತೀಶ್ ಕೆ ಕಾಶಿಪಟ್ಣ, ನಾರಾವಿ ಸಿಎ ಬ್ಯಾಂಕ್ ಅಧ್ಯಕ್ಷ ಸುಧಾಕರ ಭಂಢಾರಿ, ಉಜಿರೆ ಹಳ್ಳಿಮನೆ ಮಾಲಕ ಪ್ರವೀಣ್ ಫರ್ನಾಂಡೀಸ್, ಪ್ರಧಾನ ಆರ್ಚಕ ಕೃಷ್ಣ ತಂತ್ರಿ ,ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ಮಹಾವೀರ್ ಜೈನ್, ಜಗದೀಶ್ ಅಂಚನ್, ಎನ್.ಶ್ರೀನಿವಾಸ್ ಕಿಣಿ, ಪ್ರಧಾನ ಕಾರ್ಯದರ್ಶಿ ವಿನಯ್ ಹೆಗ್ಡೆ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಜಗದೀಶ್ ಹೆಗ್ಡೆ, ಎನ್ ದಿವಾಕರ ಭಂಢಾರಿ, ಲಕ್ಷ್ಮಣ ಬಂಗೇರ, ಶಂಕರ್, ಯಶೋಧ, ರಶ್ಮಿ ಹಾಗೂ ಸಮಿತಿಯ ಪದಾಧಿಕಾರಿಗಳು,ಸಂಚಾಲಕರು, ಊರವರು,ಭಕ್ತರು ಉಪಸ್ಥಿತರಿದ್ದರು.

Related posts

ಡಿ.14 -20: ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ಜೆಸಿ ಸಪ್ತಾಹ- 2024: ಸಾಧಕರಿಗೆ ಸನ್ಮಾನ, ಸಮಾಜಸೇವಾ ಸಂಘಟನೆಗಳಿಗೆ ಸೇವಾಶ್ರೀ ಪುರಸ್ಕಾರ, ಮನೋರಂಜನಾ ಕಾರ್ಯಕ್ರಮ

Suddi Udaya

ಮಹೇಶ್ ಶೆಟ್ಟಿ ತಿಮರೋಡಿಯ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಸೆ.30 ಕ್ಕೆ ಮುಂದೂಡಿಕೆ

Suddi Udaya

ಬೆಳ್ತಂಗಡಿ ಪೊಲೀಸ್ ಠಾಣೆಯ ಪೊಲೀಸ್‌ ಇನ್ಸೆಕ್ಟ‌ರ್ ಆಗಿ ಬಸಲಿಂಗಯ್ಯ ಜಿ. ಸುಬ್ರಪುರಮಠ್ ನೇಮಕ

Suddi Udaya

ಕು| ಸೌಜನ್ಯ ಕೊಲೆ ಆರೋಪಿಗಳಿಗೆ ಸಹಕಾರ ನೀಡಿದ ವ್ಯಕ್ತಿಗಳು ಹುಚ್ಚರಂತೆ ನಮ್ಮ ಕಣ್ಣ ಮುಂದೆ ತಿರುಗಾಡಲಿದ್ದಾರೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಹಾಗೂ ಖಾವಂದರೆ ಬಗ್ಗೆ ಅಪಪ್ರಚಾರ ಮಾಡುವುದನ್ನು ಹಿಂದೂ ಸಮಾಜ ಸಹಿಸುವುದಿಲ್ಲ ಹಕ್ಕೋತ್ತಾಯ ಜಾಥಾದಲ್ಲಿ ಮನವಿ ಸ್ವೀಕರಿಸಿ ಹರೀಶ್ ಪೂಂಜ ಹೇಳಿಕೆ

Suddi Udaya

ಅಳದಂಗಡಿ: ಸರಕಾರಿ ಸೌಲಭ್ಯ ವಂಚಿತರಾದ ವೃದ್ಧ ಮಹಿಳೆಯ ಶೆಡ್ ಗೆ ಬಂತು ಸೋಲಾರ್ ಲೈಟ್ ಡಿ.ಸಿ. ಕರೆ ಮಾಡಿ ಅಜ್ಜಿಯ ಬಗ್ಗೆ ಮಾಹಿತಿ ಸಂಗ್ರಹ

Suddi Udaya

ನಿಡ್ಲೆ ಗ್ರಾ.ಪಂ. ವ್ಯಾಪ್ತಿಯ ಬಿಜೆಪಿ ಶಕ್ತಿಕೇಂದ್ರದ ಸಭೆ

Suddi Udaya
error: Content is protected !!