ಬೆಳ್ತಂಗಡಿ : ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ ಯ ವಿಧ್ಯಾರ್ಥಿಗಳಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಬೆಂಗಳೂರು ಇವರಿಂದ ನಡೆಸಲ್ಪಟ್ಟ ಬುಲ್ ಬುಲ್ ವಿದ್ಯಾರ್ಥಿಗಳ ಹೀರಕ್ ಗರಿ ಕಬ್ ವಿದ್ಯಾರ್ಥಿಗಳ ಚತುರ್ಥ ಚರಣ ರಾಜ್ಯ ಪುರಸ್ಕಾರ ಪರೀಕ್ಷೆಯಲ್ಲಿ ಬುಲ್ ಬುಲ್ ವಿದ್ಯಾರ್ಥಿಗಳಾದ ಮೇಧಸ್ವಿ ಹರೀಶ್ ಶೆಟ್ಟಿ, ತನಿಯಾ ಜೈನ್, ಶ್ರೀಜಾ ಎಮ್ , ಆರಾಧ್ಯ ಕಬ್ ವಿದ್ಯಾರ್ಥಿಗಳಾದ ಮೊಹಮ್ಮದ್ ಯಾಹ್ಯ ತೆರ್ಗಡೆಗೊಂಡಿರುತ್ತಾರೆ.
ಇವರಿಗೆ ಮುಖ್ಯ ಶಿಕ್ಷಕಿಯವರ ಮಾರ್ಗದರ್ಶನದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ದೆಯ ಕಾರ್ಯದರ್ಶಿ , ಎಸ್‌ಡಿಎಂ ಆಂ. ಮಾ ಶಾಲೆಯ ಶಿಕ್ಷಕಿ ಪ್ರಮೀಳಾ ಪೂಜಾರಿ ತರಬೇತಿಯನ್ನು ನೀಡುತ್ತಿದ್ದಾರೆ.











