37.9 C
ಪುತ್ತೂರು, ಬೆಳ್ತಂಗಡಿ
March 6, 2026
Uncategorized

ಶಿಬಾಜೆ ಶ್ರೀ ಮೊಂಟೆತ್ತಡ್ಕ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನ

ಶಿಬಾಜೆ: ಫೆ.26ರಿಂದ 28ರವರೆಗೆ ಶ್ರೀ ಮೊಂಟೆತ್ತಡ್ಕ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವೈದಿಕ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.

ಫೆ.26ರಂದು ಸಂಜೆ ತೋರಣ ಮುಹೂರ್ತ, ರಾತ್ರಿ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ಪದರಾಸಾದ ಶುಧ್ಧಿ, ರಾಕ್ಷೋಘ್ನ ಹೋಮ, ವಾಸ್ತು ಪೂಜಾ ಬಲಿ ನಡೆಯಿತು.

ಫೆ.27ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಸ್ವಸ್ತಿ ಪುಣ್ಯಾಹ ವಾಚನ, ಬಿಂಬ ಶುದ್ಧಿ, ಕಲಶ ಪೂಜೆ, ಚಂಡಿಕಾ ಹೋಮ ಪ್ರಾರಂಭ, ಹೊರೆಕಾಣಿಕೆ ಸಮರ್ಪಣೆ, ಚಂಡಿಕಾ ಹೋಮ ಪೂರ್ಣಾಹುತಿ, ಸುವಾಸಿನಿ ಪೂಜೆ. ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ. ಸಂಜೆ ಅಂಗನವಾಡಿ, ಶಿಬಾಜೆ ಶಾಲಾ ವಿದ್ಯಾರ್ಥಿಗಳಿಂದ, ಸ್ಥಳೀಯ ಮಕ್ಕಳಿಂದ “ಸಾಂಸ್ಕೃತಿಕ ಕಾರ್ಯಕ್ರಮ”, ರಾತ್ರಿ ಶ್ರೀಪ್ರದಾ ಮತ್ತು ಶ್ರೀರಕ್ಷಾ ಬಟ್ಟಾಜೆ ನಾಟ್ಯಧಾರಾ ಮತ್ತು ತಂಡದಿಂದ “ಭರತನಟ್ಯಾ ಕಾರ್ಯಕ್ರಮ”, ಮಹಾಪೂಜೆ, ಶ್ರೀ ದೇವರ ಬಲಿ ಹೊರಟು ಪಲ್ಲಕ್ಕಿ ಉತ್ಸವ, ಕಟ್ಟೆ ಪೂಜೆಗಳು, ಅಷ್ಠ ಸೇವೆ, ಅಶ್ವತ್ಥ ಕಟ್ಟೆ ಉತ್ಸವ, ಶ್ರೀ ದುರ್ಗಾಪಮೇಶ್ವರೀ ಭಜನಾ ಮಂಡಳಿ ಶಿಬಾಜೆ ಇದರ ಮಹಿಳಾ ಸದಸ್ಯೆಯರಿಂದ ವಿ.ಎನ್ ಕುಲಾಲ್ ವೇಣೂರು ವಿರಚಿತ ತ್ಯಾಂಪಣ್ಣ ಶೆಟ್ಟಿಗಾರ್ ಪೆರ್ಲ ಇವರ ನಿರ್ದೇಶನದಲ್ಲಿ ತುಳು ಸಾಂಸಾರಿಕ “ನಾಟಕ ದೇವೆರ್ ಕೈ ಬುಡ್ವೇರಾ?…….” ನಡೆಯಿತು.

ಫೆ.28ರಂದು ಬೆಳಿಗ್ಗೆ ಕಲಶ ಪೂಜೆ, ದೇವರ ಬಲಿ ಹೊರಟು ಉತ್ಸವ, ಪಲ್ಲಕ್ಕಿ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಮಧ್ಯಾಹ್ನ ದೇವರಿಗೆ ಕಲಶಾಭಿಷೇಕ, ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಅರ್ಚನ ಮತ್ತು ತಂಡದವರಿಂದ “ನೃತ್ಯ ಪ್ರದರ್ಶನ” ರಾತ್ರಿ ರಂಗಪೂಜೆ, ದೀಪ್ತಿ ಇವರಿಂದ “ಭರತನಾಟ್ಯ ಕಾರ್ಯಕ್ರಮ”, ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಭಂಡಿಹೊಳೆ ಇವರಿಂದ “ಕಂಸವಧೆ – ಪಂಚಜನ ಮೋಕ್ಷ” ಯಕ್ಷಗಾನ ನಡೆಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ. ಶ್ರೀಧರ್ ರಾವ್ ಅಜಿರಡ್ಕ ಮತ್ತು ಸದಸ್ಯರು, ಸಿಬ್ಬಂದಿ ವರ್ಗ, ಊರ-ಪರವೂರ ಭಕ್ತಾಧಿಗಳು ಉಪಸ್ಥಿತರಿದ್ದರು.

Related posts

ಸಂಡೂರು ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರ

Suddi Udaya

ಮಾ.15ರಂದು ಸೌತಡ್ಕದಲ್ಲಿ, ವಿಶ್ವ ಮಹಿಳಾ ದಿನಾಚರಣೆ, ಸಂಜೀವಿನಿ ಸಂತೆ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಆಟೋಟ ಸ್ಪರ್ಧೆ

Suddi Udaya

ಬಿಸಿಲಿನ ಬೇಗೆಗೆ ತಂಪೆರೆದ ವರುಣ

Suddi Udaya

ಮಡಂತ್ಯಾರು : ಕುಂಜತ್ತೂಡಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಬಿಡುಗಡೆ ಕಾರ್ಯಕ್ರಮ

Suddi Udaya

ಅಳದಂಗಡಿ ಆಮಂತ್ರಣ ಪ್ರತಿಷ್ಠಾನ ವತಿಯಿಂದ ಅರುವ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ರಕ್ಷಾಬಂಧನ

Suddi Udaya

ಅಧಿಕಾರಿಗಳಿಂದ ನಮಗೆ ಮಾನಸಿಕ ಹಿಂಸೆ : ಗಿರಿಯಪ್ಪ ಗೌಡ ನಾಗನಡ್ಕ ಆರೋಪ

Suddi Udaya
error: Content is protected !!