24.6 C
ಪುತ್ತೂರು, ಬೆಳ್ತಂಗಡಿ
March 6, 2026
Uncategorized

ಸರ್ವಿಸ್ ರಸ್ತೆಯ ಬದಲಿಗೆ ಡ್ಯೂಯೆಲ್ ಕಾರೇಜ್ ನೊಂದಿಗೆ ರಸ್ತೆಯನ್ನು ಅಗಲಗೊಳಿಸಿ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರಿಗೆ ಬೆಳ್ತಂಗಡಿ ವರ್ತಕರ ಸಂಘದಿಂದ ಮನವಿ

ಬೆಳ್ತಂಗಡಿ: ಬೆಳ್ತಂಗಡಿಯ ವರ್ತಕರು ಒಟ್ಟು ಸೇರಿ ಸಂತೆಕಟ್ಟೆಯ ಅಯ್ಯಪ್ಪ ದೇವಸ್ಥಾನದ ಎದುರುಗಡೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿ ಪಟ್ಟಣದಲ್ಲಿ ಹಾದು ಹೋಗುವ ಸರ್ವಿಸ್ ರಸ್ತೆಯಿಂದಾಗುವ ತೊಂದರೆಗಳನ್ನು ವ್ಯಕ್ತಪಡಿಸಿದರು.

ಬೆಳ್ತಂಗಡಿ ಪಟ್ಟಣ ವ್ಯಾಪ್ತಿಯಲ್ಲಿ ಸರ್ವಿಸ್ ರಸ್ತೆ ನಿರ್ಮಾಣದಿಂದ ಹಾಗೂ ಒಳ ಚರಂಡಿಯ ಅವೈಜ್ಞಾನಿಕ ನಿರ್ಮಾಣವು ವಾಹನಗಳ ಓವರ್ ಟೇಕಿಂಗ್ ಮತ್ತು ವೇಗದಿಂದ ಹಲವಾರು ರಸ್ತೆ ಆಪಘಾತಗಳು ಸಂಭವಿಸುತ್ತವೆ ಹಾಗೂ ಪಟ್ಟಣದ ೧೦೦ಕ್ಕೂ ಅಧಿಕ ವ್ಯಾಪಾರಿ ಸಮುದಾಯಕ್ಕೆ ಬಹಳಷ್ಟು ಕಷ್ಟ ನಷ್ಟವನ್ನು ಉಂಟಾಗುವ ಪರಿಸ್ಥಿತಿಯನ್ನು ಬೆಳ್ತಂಗಡಿ ವರ್ತಕರ ಸಂಘದ ಅಧ್ಯಕ್ಷ ರೊನಾಲ್ಡ್ ಲೋಬೋ ಉಸ್ತುವಾರಿ ಸಚಿವರಿಗೆ ತಿಳಿಸಿದರು.

ಈ ಮೊದಲೇ ಇಲ್ಲಿನ ರಸ್ತೆಯ ಬಗ್ಗೆ ಮನವಿಯನ್ನು ಕೊಟ್ಟಿದ್ದೇವೆ. ಆದರೂ ರಸ್ತೆ ಹಾಗೂ ರಸ್ತೆಯ ಮದ್ಯದಲ್ಲಿ ಚರಂಡಿ ಕೆಲಸ ನಡೆಯುತ್ತಾ ಇದೆ. ರಸ್ತೆ ಹಾಗೂ ಚರಂಡಿ ಕೆಲಸ ಸಂಪೂರ್ಣಗೊಂಡ ಸ್ಥಳದಲ್ಲಿ ಹಲವಾರು ಅಪಘಾತಗಳು ಹಾಗೂ ಟ್ರಾಫಿಕ್ ಜಾಮ್ ಶಾಲೆ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ರಸ್ತೆ ದಾಟಲು ಸಮಸ್ಯೆ ಆಗುತ್ತದೆ. ಈಗಾಗಲೇ ಹಲವಾರು ಅಂಗಡಿಗಳು ಮುಚ್ಚಲಾಗಿವೆ. ಆದ್ದರಿಂದ ತಾವು ದಯವಿಟ್ಟು ಸಂಬAಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಸರ್ವಿಸ್ ರಸ್ತೆಯನ್ನು ರದ್ದು ಮಾಡಿ ಇದ್ದ ಏಕ ರಸ್ತೆಯ ಬದಲಿಗೆ ಡ್ಯೂಯೆಲ್ ಕಾರೇಜ್‌ನೊಂದಿಗೆ ರಸ್ತೆಯನ್ನು ಅಗಲಗೊಳಿಸಿ ಮದ್ಯದಲ್ಲಿ ವಿಭಜಕವನ್ನು ಅಳವಡಿಸಿ ರಸ್ತೆಯ ಎರಡು ಬದಿಯಲ್ಲಿ ಒಳಚರಂಡಿಯನ್ನು ನಿರ್ಮಾಣ ಮಾಡುವಂತೆ ಸಚಿವರಲ್ಲಿ ವಿನಂತಿಸಿದರು.

ಈ ಸಂದರ್ಭದಲ್ಲಿ ವರ್ತಕ ಸಂಘದ ಅಧ್ಯಕ್ಷ ರೋನಾಲ್ಡ್ ಲೋಬೊ, ಉಪಾಧ್ಯಕ್ಷ ಶಶಿಧರ್ ಪೈ, ಕಾರ್ಯದರ್ಶಿ ಲಾನ್ಸಿ ಪಿರೇರ, ಉಪ ಕಾರ್ಯದರ್ಶಿ ಯಶವಂತ್ ಪಟವರ್ಧನ್, ಖಜಾಂಚಿ ಸುನೀಲ್ ಶೆನೋಯ್, ಮಾಜಿ ಅಧ್ಯಕ್ಷರಾದ ಪುಷ್ಪರಾಜ್ ಶೆಟ್ಟಿ, ಸಮಿತಿ ಸದಸ್ಯರಾದ ಜೂಡ್ ಲೋಬೊ, ವಿನ್ಸೆಂಟ್ ಡಿಸೋಜ, ಶೀತಲ್ ಜೈನ್, ಅರಿಹಂತ್ ಜೈನ್, ವಿಲ್ಸನ್ ಗೊನ್ಸಾಲ್ವಿಸ್, ಸೀತಾರಾಮ ಶೆಟ್ಟಿ, ಜೈಸನ್ ಡಿಸೋಜಾ ಹಾಗೂ ವರ್ತಕರು ಉಪಸ್ಥಿತರಿದ್ದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಹಳ್ಳಿಮನೆ ಪ್ರವೀಣ್ ಫೆರ್ನಾಂಡಿಸ್ ಜೊತೆಗಿದ್ದರು.

Related posts

ಕುಮಟಾದಲ್ಲಿ ಶ್ರೀ ಮಹಾಮಂಡಲೇಶ್ವರ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವ್ರತಾಚರಣೆ:ಶಾಸಕ ಹರೀಶ್ ಪೂಂಜ ಸಹಿತ ಬೆಳ್ತಂಗಡಿಯಿಂದ ಹಲವು ಗಣ್ಯರು ಭಾಗಿ

Suddi Udaya

ಪಕ್ಷೇತರ ಅಭ್ಯರ್ಥಿಯಾಗಿ ಸುಬ್ರಹ್ಮಣ್ಯ ಭಟ್ ನಾಮಪತ್ರ ಸಲ್ಲಿಕೆ

Suddi Udaya

ಜೆಸಿಐ ಕೊಕ್ಕಡ ಕಪಿಲಾ ಸದಸ್ಯರಿಗೆ ಎಲ್.ಎ.ವಿ ತರಬೇತಿ ಕಾರ್ಯಕ್ರಮ

Suddi Udaya

ವೃತ್ತಿ ಕೀಳರಿಮೆ ಬೇಡ, ಗೌರವವನ್ನು ಬೆಳೆಸಿಕೊಳ್ಳಿ : ಡಿ ಹರ್ಷೇಂದ್ರ ಕುಮಾರ್

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಉಡುಪಿ ಬಿಜೆಪಿ ಅಭ್ಯರ್ಥಿ ಯಶ್ ಪಾಲ್ ಸುವರ್ಣ ಭೇಟಿ

Suddi Udaya

ಜೆಸಿಐ ಮಡಂತ್ಯಾರು ಇದರ 2025ನೆ ಸಾಲಿನ ಅಧ್ಯಕ್ಷರಾಗಿ ಅಮಿತಾ ಅಶೋಕ್

Suddi Udaya
error: Content is protected !!