ಬೆಳ್ತಂಗಡಿ: ಇಲ್ಲಿಯ ಸವಣಾಲು ಬೊಲ್ಲೊಟ್ಟುಗುತ್ತು ನಿವಾಸಿ, ಬೆಳ್ತಂಗಡಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಲ| ಬಿ. ರಘುರಾಮ ಗಾಂಭೀರ(85 ವರ್ಷ) ರವರು ಅಲ್ಪಕಾಲದ ಅ ಸೌಖ್ಯದಿಂದ ಮಾ. 5ರಂದು ನಿಧನರಾದರು.

ಇವರು ಲಯನ್ಸ್ ಕ್ಲಬ್ ನಲ್ಲಿ 46 ವರ್ಷಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವೆ ಪುತ್ರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.











