37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಅನುಗ್ರಹ ಆಂ.ಮಾ. ಶಾಲೆಯಲ್ಲಿ ದೀಪ ಪ್ರದಾನ ಕಾರ್ಯಕ್ರಮ

ಉಜಿರೆ: ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆಯ ಅಂಗವಾಗಿ ದೀಪ ಪ್ರದಾನ ಕಾರ್ಯಕ್ರಮವು ಶಾಲಾ ಸಭಾಭವನದಲ್ಲಿ ಮಾ.4ರಂದು ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಫಾ. ಅಬೆಲ್ ಲೋಬೊ ವಹಿಸಿ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಜೀವನಕ್ಕೆ ಶುಭ ಹಾರೈಸಿದರು.

ಪ್ರಾಂಶುಪಾಲ ಫಾ. ವಿಜಯ್ ಲೋಬೊ ಮಾತನಾಡಿ ಕುಟುಂಬದೊAದಿಗೆ ಒಗ್ಗಟ್ಟಾಗಿ ಬದುಕಬೇಕು; ಆದರೆ ಸಂಕಷ್ಟಗಳು ಬಂದಾಗ ಧೈರ್ಯದಿಂದ ಒಬ್ಬಂಟಿಯಾಗಿ ಎದುರಿಸುವ ಮನೋಬಲ ಹೊಂದಿರಬೇಕು ಎಂಬ ಸಂದೇಶವನ್ನು ನೀಡಿದರು. ವಿದ್ಯಾರ್ಥಿಗಳು ಜಗತ್ತಿನ ಬೆಳಕಾಗುವಂತೆ ದೀಪ ಪ್ರಧಾನ ಮಾಡಲಾಯಿತು.

ವಿದ್ಯಾರ್ಥಿನಿ ಜಾಹ್ನವಿ ಎಲ್ಲಾ ಕಿರಿಯ ವಿದ್ಯಾರ್ಥಿಗಳ ಪರವಾಗಿ ಶುಭ ಹಾರೈಸಿದರು. ಕಿರಿಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮನೋರಂಜನಾ ಕ್ರೀಡೆಗಳನ್ನು ನಡೆಸಿಕೊಟ್ಟರು. ವಿಜೇತರಾದ ಎಲ್ಲಾ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸಂಸ್ಥೆಗೆ 10ನೇ ತರಗತಿಯ ವಿದ್ಯಾರ್ಥಿಗಳು ಲ್ಯಾಪ್‌ಟಾಪ್ ಅನ್ನು ಕಾಣಿಕೆಯಾಗಿ ನೀಡಿದರು.ಸ್ನೇಹಲ್ ಅಡ್ಲಿನ್ ಡಿ’ಸೋಜ ನಿರೂಪಿಸಿದರು. ಗಗನ್ ಡಿ ಸ್ವಾಗತಿಸಿ, ಪಂಚಮ್ ವಂದಿಸಿದರು. ಸಹಶಿಕ್ಷಕ ಗಣೇಶ್ ಹಾಗೂ ಸಹಶಿಕ್ಷಕಿ ಮೇರಿ ಟಿ.ಎಂ ಮಾರ್ಗದರ್ಶನ ನೀಡಿದರು.

Related posts

ನ.7: ಕಲ್ಲೇರಿ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya

ಮೂಡುಕೋಡಿಯಲ್ಲಿ ಕಾರು ಮತ್ತು ಪಿಕಪ್ ನಡುವೆ ಡಿಕ್ಕಿ, ಗಾಯ

Suddi Udaya

ಕರ್ನಾಟಕ ಸರಕಾರವು ಬಜೆಟ್ ನಲ್ಲಿ ಅಲ್ಪಸಂಖ್ಯಾತರಿಗೆ 4500 ಕೋಟಿ ರೂ. ಅನುದಾನ ಬಿಡುಗಡೆ ಮತ್ತು ಸರಕಾರಿ ಗುತ್ತಿಗೆಯಲ್ಲಿ 4% ಮೀಸಲಾತಿ ನೀಡಿದ್ದನ್ನು ರದ್ದು ಮಾಡುವ ಕುರಿತು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಉಪ ತಹಸೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ

Suddi Udaya

ಮದ್ದಡ್ಕ ಕಿನ್ನಿಗೋಳಿ ಬಳಿ ನೇಣು ಬಿಗಿದ ಸ್ಥಿತಿಯಲ್ಲಿಮಹಿಳೆ ಶವಪತ್ತೆ

Suddi Udaya

ಬೆಳ್ತಂಗಡಿ : ಲಾರಿ- ಬೈಕ್ ಅಪಘಾತದಲ್ಲಿ ಇಬ್ಬರು ಸಾವು ಪ್ರಕರಣ: ಬೆಳ್ತಂಗಡಿ ನ್ಯಾಯಾಲಯದಿಂದ ಲಾರಿ ಚಾಲಕನಿಗೆ ದಂಡ ಹಾಗೂ ಜೈಲು ಶಿಕ್ಷೆ ಪ್ರಕಟ

Suddi Udaya

ಪ್ರಸನ್ನ ಫಾರ್ಮಸಿ ಕಾಲೇಜಿನಲ್ಲಿ ಅಂಗದಾನ ಜಾಗೃತಿ ಕಾರ್ಯಕ್ರಮ ‘ಧಾತ್ರು’ ಆಯೋಜನೆ

Suddi Udaya
error: Content is protected !!