37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ: ಹೆದ್ದಾರಿಯ ಅಗಲೀಕರಣ ಪರಿಹಾರಧನ ಪಡೆದಮನೆ, ಕಟ್ಟಡಗಳ ತೆರಿಗೆ ರದ್ದು ಪಡಿಸಲು ಸೂಚನೆ

ಬೆಳ್ತಂಗಡಿ: ರಾಷ್ಟ್ರೀಯ, ರಾಜ್ಯ ಹೆದ್ದಾರಿಯ ಅಗಲೀಕರಣದ ಸಂದರ್ಭದಲ್ಲಿ ರಸ್ತೆ ಅಗಲೀಕರಣಕ್ಕಾಗಿ ಪರಿಹಾರಧನ ಪಡೆದುಕೊಂಡ ಮನೆ,ಕಟ್ಟಡಗಳ ಮಾಲೀಕರ, ಅನುಭೋಗದಾರರ ಮನೆ,ಕಟ್ಟಡಗಳ ಆಸ್ತಿ ಹಾಗೂ ಆಸ್ತಿಗಳ ಕದ ನಂಬ್ರ, ಕಟ್ಟಡ ತೆರಿಗೆ ಹಾಗೂ ಆಸ್ತಿ ಸಂಖ್ಯೆಯನ್ನು ರದ್ದುಪಡಿಸಲು ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯತೆಯಿಂದ ನಿಯಮಾವಳಿಯಂತೆ ಕ್ರಮ ವಹಿಸಲು ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಪಂಚಾಯತುಗಳ ಅಭಿವೃದ್ಧಿಗಳಿಗೆ ತಾ.ಪಂ ಕಾರ್ಯನಿರ್ವಹಣಾಧಿಕಾರಿಗಳು ಆದೇಶ ಮಾಡಿದ್ದಾರೆ.

ಪೂಂಜಾಲಕಟ್ಟೆಯಿಂದ ಚಾರ್ಮಾಡಿಯವರೆಗೆ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಅಗಲೀಕರಣ ಕಾಮಗಾರಿ ಕೆಲಸಗಳು ನಡೆಯುತ್ತಿದ್ದು, ಸದರಿ ಕಾಮಗಾರಿ ಮಾಡಲು ವಾಸ್ತವ್ಯ ಮತ್ತು ವಾಣಿಜ್ಯ ಸೇರಿದಂತೆ ಹಲವು ಕಟ್ಟಡಗಳನ್ನು ತೆರವು ಮಾಡಲು ಪರಿಹಾರ ಧನ ಪಡೆದುಕೊಂಡ ಬಹುತೇಕ ವಾಣಿಜ್ಯ ಕಟ್ಟಡ, ಮನೆಗಳ ಮಾಲೀಕರು ಕಾನೂನು ಬಾಹಿರವಾಗಿ ಸ್ಥಳೀಯ ಗ್ರಾಮ ಪಂಚಾಯತಿನಿಂದ ಮನೆ, ಕಟ್ಟಡ ರಚನೆ, ದುರಸ್ಥಿ, ಸೇರ್ಪಡೆ, ನವೀಕರಣ, ವಿಸ್ತರಣೆ ಮಾಡುವ ಬಗ್ಗೆ ಅರ್ಜಿ ಸಲ್ಲಿಸಿ ಅನುಮತಿ ಪಡೆದುಕೊಂಡು ಕಾಮಗಾರಿ ಕೆಲಸ ಮಾಡುತ್ತಿದ್ದಾರೆ. ಆದರೆ ಕಾನೂನು ಕ್ರಮವಾಗಿ ರಾಷ್ಟ್ರೀಯ ಹೆದ್ದಾರಿಯ ಪ್ರಾಧಿಕಾರದಿಂದ ಪರಿಹಾರದ ಹಣ ಪಡೆದುಕೊಂಡ ಮಾಲೀಕರಿಗೆ ಅನುಮೋದನೆ ನೀಡಬಾರದು ಹಾಗೂ ಮನೆ, ವಾಣಿಜ್ಯ ಕಟ್ಟಡಗಳ ಕದ ನಂಬರ್, ಕಟ್ಟಡ ತೆರಿಗೆ, ಆಸ್ತಿ ಸಂಖ್ಯೆಯನ್ನು ರದ್ದುಪಡಿಸಿ ಅಕ್ರಮ ಕಟ್ಟಡಗಳ ಕಾಮಗಾರಿಗಳನ್ನು ಕೂಡಲೇ ಸ್ಥಗಿತಗೊಳಿಸಬೇಕಾಗಿ ಪ್ರತೀಕ್ ಅಂಕಾಜೆ ಇವರು ಮನವಿ ಮಾಡಿದ್ದು, ಇದರ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಉಜಿರೆ, ಕುವೆಟ್ಟು, ಮಡಂತ್ಯಾರು, ಧರ್ಮಸ್ಥಳ, ಚಾರ್ಮಾಡಿ, ನಿಡ್ಲೆ, ಕೊಕ್ಕಡ, ಬಳಂಜ, ಅಳದಂಗಡಿ, ಸುಲ್ಕೇರಿ ಮತ್ತು ನಾರಾವಿಎ ಪಂಚಾಯತುಗಳಿಗೆ ಕಳುಹಿಸಿದ ಆದೇಶದಲ್ಲಿ ಸೂಚಿಸಲಾಗಿದೆ.

Related posts

ಬಂದಾರು : ಪೆರ್ಲ-ಬೈಪಾಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನೂತನ ಸಭಾಭವನಕ್ಕೆ ಭೂಮಿ ಪೂಜೆ

Suddi Udaya

ನಾವೂರು ಸೋಷಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಕೆಸರುಗದ್ದೆ ಕ್ರೀಡಾಕೂಟ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ “ಗಣಿತ ದಿನಾಚರಣೆ

Suddi Udaya

ಶಿಬಾಜೆ ದಲಿತ ಯುವಕ ಶ್ರೀಧರನ ಹತ್ಯೆ ಪ್ರಕರಣ: ಸಮಗ್ರ ತನಿಖೆಗೆ ಒತ್ತಾಯಿಸಿ ದಲಿತ ಸಂಘಟನೆಗಳ ನಿರಂತರ ಹೋರಾಟ: ಸಿ.ಐ.ಡಿ ತನಿಖೆಗೆ ಒಪ್ಪಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಆದೇಶ: ಡಿಎಸ್‌ಎಸ್ ಸಮನ್ವಯ ಸಮಿತಿ ಪ್ರಧಾನ ಕಾರ್ಯದರ್ಶಿ ಅಶೋಕ್ ಕೊಂಚಾಡಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಣೆ

Suddi Udaya

ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇಂಬರ್ ಹಾಗೂ ವಿವಿಧ ಸಂಘಗಳ ಆಶ್ರಯದಲ್ಲಿ ಉಚಿತ ದಂತ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ

Suddi Udaya

ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್, ಶ್ರೀ.ಧ.ಮಂ. ಶಿಕ್ಷಣ ಸಂಸ್ಥೆಗಳು ಹಾಗೂ ಇತರ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಉಜಿರೆಯಲ್ಲಿ ಬೃಹತ್ ರಕ್ತದಾನ ಶಿಬಿರ

Suddi Udaya
error: Content is protected !!