ಕಡಿರುದ್ಯಾವರ: ಕಡಿರುದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಎರ್ಮಾಲ್ ಪಲ್ಕೆ ಎಂಬಲ್ಲಿ ಕಳೆದ ಹಲವಾರು ದಿನಗಳಿಂದ ಏರ್ಟೆಲ್ ನೆಟ್ವರ್ಕ್ ಇಲ್ಲದೆ ವ್ಯವಹಾರ, ಫೋನ್ ಕರೆಗಳಿಗಾಗಿ ಜನ ಸಾಮಾನ್ಯರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಈಗಿನ ಕಾಲದಲ್ಲಿ ಮೊಬೈಲ್ ಇಲ್ಲದಿದ್ದರೆ ಯಾವ ಕೆಲಸವು ನಡೆಯುವುದಿಲ್ಲ. ವರ್ಕ್ ಫ್ರಮ್ ಹೋಮ್ ನ ಎಷ್ಟೋ ಉದ್ಯೋಗಿ ಗಳಿದ್ದಾರೆ. ಆದರೆ ಟವರ್ ಸರಿ ಇಲ್ಲದ ಕಾರಣ ಸಿಗ್ನಲ್ ಸಿಗುವ ಪ್ರದೇಶವನ್ನು ಹುಡುಕುವಂತ ಪ್ರಮೇಯ ಬಂದಿದೆ.
ಈ ಪ್ರದೇಶದ ಜನರು ಹೆಚ್ಚಾಗಿ ಏರ್ಟೆಲ್ ಕಂಪನಿಯ ಸಿಮ್ ಕಾರ್ಡ್ ಗಳನ್ನು ಬಳಕೆ ಮಾಡುತ್ತಿದ್ದು, ಪ್ರಸ್ತುತ ಸಂದರ್ಭದಲ್ಲಿ ಯಾವಾಗ ನೋಡಿದರೂ ನೆಟವರ್ಕ್ ಇಲ್ಲದೆ ಇರುವುದರಿಂದ ಎರ್ಮಾಲ್ ಪಲ್ಕೆಯ ಜನತೆ ಬಹಳ ಸಂಕಷ್ಟ ಅನುಭವಿಸುತ್ತಿದ್ದಾರೆ. ಹಲವಾರು ದಾಖಲೆಗಳಿಗೆ ಏರ್ಟೆಲ್ ಸಿಮ್ ಕಾರ್ಡ್ ನ ನಂಬರ್ ನೀಡಿದ್ದು ಇದೀಗ ಓಟಿಪಿಗೂ ಕಷ್ಟ ಪಡುವಂತಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.











