37.8 C
ಪುತ್ತೂರು, ಬೆಳ್ತಂಗಡಿ
March 8, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಶುಭ ವಿವಾಹಶುಭಾರಂಭ

ಪುಂಜಾಲಕಟ್ಟೆಯಲ್ಲಿ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ನಿಂದ ಅದ್ದೂರಿಯ ಸಾಮೂಹಿಕ ವಿವಾಹ- ಸುಮಾರು 500ಕ್ಕೂ ಹೆಚ್ಚು ನವಜೋಡಿಗಳಿಗೆ ಕ್ಲಬ್ ನಿಂದ ಸರಳ ವಿವಾಹ-ವಿವಿಧ ಕ್ಷೇತ್ರದ ಸಾಧಕರಿಗೆ ಸ್ವಸ್ತಿಸಿರಿ ರಾಜ್ಯ ಪ್ರಶಸ್ತಿ ಪ್ರದಾನ

ಬೆಳ್ತಂಗಡಿ: ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ ವತಿಯಿಂದ, ತುಂಗಪ್ಪ ಬಂಗೇರ ಅವರ ನೇತೃತ್ವದಲ್ಲಿ 18ನೇ ವರ್ಷದ ಸಾಮೂಹಿಕ ವಿವಾಹ ಸಮಾರಂಭ ಹಾಗೂ 42ನೇ ವರ್ಷದ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವು ಮಾ 8ರಂದು ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ಧಾರ್ಮಿಕ ಪರಿಷತ್ ನ ರವಿಶಂಕರ ಶೆಟ್ಟಿ ಬಡಾಜೆಗುತ್ತು ನೇರವೇರಿಸಿ ಶುಭ ಕೋರಿದರು. ಸಮಾರಂಭದ ಅಧ್ಯಕ್ಷತೆಯನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಧಾರ್ಮಿಕ ಮುಖಂಡ ಕಿರಣ್ ಚಂದ್ರ ಡಿ ಪುಷ್ಪಗಿರಿ, ಡೈಜಿ ವರ್ಲ್ಡ್ ನ ವಾಲ್ಟರ್ ನಂದಳಿಕೆ, ಉದ್ಯಮಿ ಹರೀಂದ್ರ ಟಿ.ಪೈ, ಮಾಲಾಡಿ ಗ್ರಾ.ಪಂ ಮಾಜಿ‌ ಅಧ್ಯಕ್ಷ ಪುನೀತ್ ಕುಮಾರ್, ಪಿಲಾತಬೆಟ್ಟು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಮಾಜಿ ಅಧ್ಯಕ್ಷ ಯು.ಎಸ್ ಚಂದ್ರಶೇಖರ ಭಟ್ ಹಾಗೂ ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದರು.

ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಪ್ರದಾನ:
ಪ್ರತಿ ವರ್ಷ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವತಿಯಿಂದ ನೀಡುತ್ತಿರುವ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿಯನ್ನು ಧಾರ್ಮಿಕ ಕ್ಷೇತ್ರದಲ್ಲಿ ರವಿಶಂಕರ ಶೆಟ್ಟಿ ಬಡಾಜೆಗುತ್ತು,ಯಕ್ಷಗಾನ ಕ್ಷೇತ್ರ ದಿವಾಕರ ದಾಸ್, ಶಿಕ್ಷಣ ಕ್ಷೇತ್ರದಲ್ಲಿ ಸಂತೋಷ್ ಎಸ್ ಸನಿಲ್, ಉದ್ಯಮ ಕ್ಷೇತ್ರದಲ್ಲಿ ಮೊಹಮ್ಮದ್ ರಫೀಕ್, ಸಮಾಜಸೇವೆ ಮತ್ತು ಸಂಘಟನೆಗೆ ಸುಧೀರ್ ಪೂಜಾರಿ ದ.ಕ ಗ್ಯಾರೇಜ್ ಮಾಲಕರ ಸಂಘ ಬಂಟ್ವಾಳ‌ ಇವರಿಗೆ ಪ್ರದಾನ ಮಾಡಲಾಯಿತು.

ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಸ್ಥಾಪಕಾಧ್ಯಕ್ಷ ತುಂಗಪ್ಪ ಬಂಗೇರ ಸ್ವಾಗತಿಸಿದರು. ಗೌರವಾಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಅಧ್ಯಕ್ಷ ಅಬ್ದುಲ್ ಹಮೀದ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಪಿ. ಪೂಂಜಾಲಕಟ್ಟೆ ಹಾಗೂ ಸದಸ್ಯರು ಸಹಕರಿಸಿದರು.

Related posts

ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯಿಂದ ಇಲOತಿಲ ಕಾರ್ಯಕ್ಷೇತ್ರದ ಜ್ಞಾನವಿಕಾಸ ಕೇಂದ್ರದ ಸಭೆ

Suddi Udaya

ಉಜಿರೆಯ ರಕ್ಷಿತ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶ್ರೀರಸ್ತು ಶುಭಮಸ್ತು ಧಾರವಾಹಿಯ ನಟಿ ದೀಪಾ ಕಟ್ಟೆ

Suddi Udaya

ನಾರಾವಿ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ರಾಜವರ್ಮ ಜೈನ್, ಉಪಾಧ್ಯಕ್ಷರಾಗಿ ಸುಮಿತ್ರಾ ಅವಿರೋಧವಾಗಿ ಆಯ್ಕೆ

Suddi Udaya

ಮೇ.13: ಸುರತ್ಕಲ್ ಎನ್‌ಐಟಿಕೆಯಲ್ಲಿ ಬೆಳ್ತಂಗಡಿ ಸೇರಿದಂತೆ ದ.ಕ ಜಿಲ್ಲೆಯ ಎಂಟು ವಿಧಾನ ಸಭಾ ಕ್ಷೇತ್ರಗಳ ಮತ ಎಣಿಕೆ: ಸ್ಟ್ರಾಂಗ್ ರೂಮ್‌ಗೆ ಕೇಂದ್ರೀಯ ಅರೆಸೇನಾ ಪಡೆಯಿಂದ ಬಿಗು ಭದ್ರತೆ

Suddi Udaya

ಎಕ್ಸೆಲ್ ಗುರುವಾಯನಕೆರೆ: ಸಿ.ಇ.ಟಿ.ಯಲ್ಲಿ ಎಂದಿನಂತೆ ರ‍್ಯಾಂಕ್ ಗಳ ಸುರಿಮಳೆ : ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್

Suddi Udaya

ಬದುಕು ಕಟ್ಟೋಣ ಬನ್ನಿ ತಂಡಕ್ಕೆ ಡಾ|| ಹೆಗ್ಗಡೆಯವರು ಪ್ರೇರಣೆ: ಮೋಹನ್ ಕುಮಾರ್

Suddi Udaya
error: Content is protected !!