ಉಜಿರೆ: ಶ್ರೀ ಧರ್ಮಸ್ಠಳ ಮಂಜುನಾಥೇಶ್ವರ ಡಿ.ಎಡ್. ಹಾಗೂ ಬಿ.ಎಡ್. ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು.
ಪಡ್ಲಾಡಿ ಲಾಯಿಲ ಸ. ಹಿ. ಪ್ರಾ. ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಬಿ. ಎಸ್. ರಾಜೇಶ್ವರಿ ಮಾತನಾಡಿ ಜಗತ್ತಿನಾದ್ಯಂತ ಮಾ.8 ರಂದು ಮಹಿಳಾ ದಿನವನ್ನು ಆಚರಿಸಲಾಗುತ್ತಿದೆ. ಮಹಿಳೆ ಇಳೆಗೆ ಸಮಾನ. ಹೆಣ್ಣು ಜಗದ ಕಣ್ಣು. ಒಲಿದರೆ ನಾರೀ ಮುನಿದರೆ ಮಾರಿ ಎನ್ನುವ ಮಾತಿನಂತೆ ದಿನಾಲೂ ತನ್ನ ಕಾಯಕದ ಜವಬ್ದಾರಿಯನ್ನು ನಿಷ್ಠೆಯಿಂದ ಮಾಡುವ ಕರುಣಾಮಯಿ. ವಾಸ್ತವದಲ್ಲಿ ಎಲ್ಲಾ ಕ್ಷೇತ್ರದಲ್ಲೂ ತನ್ನನ್ನು ತೊಡಗಿಸಿಕೊಂಡು ಉನ್ನತ ಹುದ್ದೆಯನ್ನು ಅಲಂಕರಿಸಿರುವುದು ಹೆಣ್ಣಿನ ವಿಶೇಷತೆ. ಸ್ತ್ರೀಯರನ್ನು ಗೌರವಿಸುವಲ್ಲಿ ದೇವರು ನೆಲೆಸಿರುತ್ತಾರೆ ಎಂಬುದು ನಂಬಿಕೆ. ಕುಟುಂಬದಲ್ಲಿ ಎಲ್ಲರ ಸ್ಥಾನವನ್ನು ತುಂಬಲು ಅರ್ಹತೆಯಿರುವ ಶ್ರೇಷ್ಠ ವ್ಯಕ್ತಿತ್ವವುಳ್ಳವಳು. ಬದುಕಿನ ಪಾತ್ರ ಹಲವಾದರೂ ಹೆಸರು ಒಂದೇ ಅದುವೆ ಹೆಣ್ಣು. ಬದುಕಿಗೆ ದಾರಿಯಾಗಿ ಕುಟುಂಬದ ಶಕ್ತಿಯಾಗಿ ನೋವನುಂಗಿ ನಗುವ ಚೆಲ್ಲುವÀ ಸ್ತಿçÃಯಾಗಿ ಜನ್ಮ ಪಡೆದದ್ದು ನನ್ನ ಭಾಗ್ಯ ಎಂದು ಹೇಳುತ್ತಾ ತಮ್ಮ ಶಿಕ್ಷಕ ವೃತ್ತಿಯ ಜೀವನದ ಅನುಭವಗಳನ್ನು ತಿಳಿಸಿ ಶಿಕ್ಷಕರಾದವರು ಸಮಾಜದಲ್ಲಿ ಹೇಗಿರಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಸಂತೋಷ್ ಸಲ್ಡಾನರವರು ಮಾತನಾಡಿ ಒಂದು ಕಾಲದಲ್ಲಿ ಮನೆಯ ನಾಲ್ಕು ಗೋಡೆಗಳಿಗೆ ಸೀಮಿತವಾಗಿದ್ದ ಹೆಣ್ಣು ಇಂದು ಬಾಹ್ಯಾಕಾಶವನ್ನೇ ಮುಟ್ಟಿದ್ದಾಳೆ. ಕ್ರೀಡೆ, ವಿಜ್ಞಾನ, ರಕ್ಷಣೆ, ಉದ್ಯಮ, ರಾಜಕೀಯ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತನ್ನ ಅಸ್ಮಿತೆಯನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾಳೆ. ಕುಟುಂಬದ ನಿರ್ವಹಣೆಯಲ್ಲಿ ಸ್ತ್ರೀಯ ಪಾತ್ರ ಅಪ್ರತಿಮವಾದದ್ದು. ಅವಳು ತಾಯಿಯಾಗಿ, ಮಗಳಾಗಿ, ಪತ್ನಿಯಾಗಿ ಮತ್ತು ಸಹೋದರಿಯಾಗಿ ನೀಡುವ ತ್ಯಾಗಕ್ಕೆ ಬೆಲೆ ಕಟ್ಟಲಾಗದು. ಮಹಿಳೆಯರ ಹಕ್ಕುಗಳ ರಕ್ಷಣೆ, ನ್ಯಾಯ ಒದಗಿಸುವುದು ಮತ್ತು ಕಾರ್ಯಪ್ರವೃತ್ತರಾಗುವುದನ್ನು ಈ ವರ್ಷದ ಆಶಯ ಒತ್ತಿ ಹೇಳುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ವಿದ್ಯಾರ್ಥಿ ನಾಯಕಿಯರಾದ ಸಾಯಿಧೃತಿ ಶೆಟ್ಟಿ ಮತ್ತು ರಂಝಿಯಾ ಬಾನು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಸಹ ಪ್ರಾಧ್ಯಾಪಕರು, ಸಿಬ್ಬಂದಿ ವರ್ಗದವರು ಮತ್ತು ಬಿ.ಎಡ್. ಮತ್ತು ಡಿ.ಎಡ್. ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ದ್ವಿತೀಯ ಬಿ.ಇಡಿ. ಪ್ರಶಿಕ್ಷಣಾರ್ಥಿ ಸಾಯಿಧೃತಿ ಮತ್ತು ಬಳಗದವರು ಪ್ರಾರ್ಥಿಸಿ, ಡಿ.ಎಡ್. ಪ್ರಶಿಕ್ಷಣಾರ್ಥಿಗಳಾದ ಆಯಿಶಾತ್ ನಾಫಿಯಾ ಸ್ವಾಗತಿಸಿ, ಅನ್ವಿತಾ ಕೆ ವಂದಿಸಿ, ಶ್ವೇತಾ ಕಾರ್ಯಕ್ರಮ ನಿರೂಪಿಸಿದರು.













