September 6, 2026
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿ

ಕಾರು-ಬೈಕ್ ಡಿಕ್ಕಿ: ಬೈಕ್‌ ಸವಾರನಿಗೆ ಗಂಭೀರ ಗಾಯ

ಕೊಕ್ಕಡ ಕಡೆಯಿಂದ ಧರ್ಮಸ್ಥಳ ಕಡೆಗೆ ಬರುತ್ತಿದ್ದ ಕಾರು ಹಾಗೂ ಧರ್ಮಸ್ಥಳದಿಂದ ಶಿಬರಾಜೆ ಕಡೆಗೆ ಹೋಗುತ್ತಿದ್ದ ಬೈಕ್ ನಡುವೆ ಅಪಘಾತ ಸಂಭವಿಸಿದ ಘಟನೆ ಮಾ.7ರಂದು ಧಮ೯ಸ್ಥಳ ಸಮೀಪದ ಬೊಳಿಯಾರ್ ಎಂಬಲ್ಲಿ ನಡೆದಿದೆ.

ಶಿಬರಾಜೆ ನಿವಾಸಿ, ನೀರಚಿಲುಮೆ ನರ್ಸರಿಯಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಅವರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರುಚಾಲಕನ ಅಜಾಗರೂಕತೆ ಪರಿಣಾಮ ಅಪಘಾತ ಸಂಭವಿಸಿದ್ದು, ಡಿಕ್ಕಿಯ ತೀವ್ರತೆಗೆ ಕಾರು ಬೈಕ್ ನ ಮುಂಭಾಗಕ್ಕೆ ಹೊಡೆದು ಸಂಪೂರ್ಣ ಜಖಂಗೊಂಡಿದೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts

ನಾರಾವಿ ಅಂತರ್ ಕಾಲೇಜು ವಾಣಿಜ್ಯ ಮತ್ತು ಸಾಂಸ್ಕೃತಿಕ ಸ್ಪರ್ಧೆ :ಪ್ರಸನ್ನ ಪಿಯು ಕಾಲೇಜಿಗೆ ಸಮಗ್ರ ಪ್ರಶಸ್ತಿ

Suddi Udaya

ಬೆಳ್ತಂಗಡಿಯಲ್ಲಿ ಸರಣಿ ಅಪಘಾತ: ಎರಡು ಬಸ್ಸು ಸೇರಿದಂತೆ 7 ವಾಹನಗಳಿಗೆ ಡಿಕ್ಕಿ ಹೊಡೆದ ಲಾರಿ: ಯುವತಿ ಗಂಭೀರ

Suddi Udaya

ರಾಯಲ್ ಪೈಂಟ್ ಹಾಗೂ ಬಿಲ್ಡ್ ಟೆಕ್ ಕನ್ಟ್ರಕ್ಷನ್ ಸೊಲ್ಯೂಸನ್ ಸಂಸ್ಥೆಗೆ ಥಾಯ್ಲೆಂಡ್ ನಲ್ಲಿ ಪ್ರಶಸ್ತಿ

Suddi Udaya

ಕಳೆಂಜ: ಜಾಗದ ವಿಚಾರವಾಗಿ ಹಲ್ಲೆ, ಬೆದರಿಕೆ: ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಕಳಸ ನದಿಯಲ್ಲಿ ಮುಳುಗಿದ ಯುವಕನ ದೇಹ ಪತ್ತೆ; ತುರ್ತು ಕರೆಗೆ ಸ್ಪಂದಿಸಿದ ಉಜಿರೆ-ಬೆಳಾಲು ಶೌರ್ಯ ಘಟಕದ ಸ್ವಯಂಸೇವಕರು

Suddi Udaya

ನಾಪತ್ತೆಯಾಗಿದ್ದ ತೋಟತ್ತಾಡಿ ಯುವಕನ ಮೃತದೇಹ ಅಣಿಯೂರು ನದಿಯಲ್ಲಿ ಪತ್ತೆ

Suddi Udaya
error: Content is protected !!