25.6 C
ಪುತ್ತೂರು, ಬೆಳ್ತಂಗಡಿ
March 9, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಎಕ್ಸೆಲ್ ನಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ನಾಳೆಯಿಂದ ಉಚಿತ ಎಕ್ಸೆಲ್ ಕನೆಕ್ಟ್ ಕ್ಲಾಸ್

ಗುರುವಾಯನಕೆರೆ:ಈ ಬಾರಿಯ ಹತ್ತನೇ ತರಗತಿ ವಾರ್ಷಿಕ ಪರೀಕ್ಷೆ ಬರೆದು ಮುಗಿಸಿದ ವಿದ್ಯಾರ್ಥಿಗಳಿಗೆ ಗುರುವಾಯನಕೆರೆಯ ಎಕ್ಸೆಲ್ ಪದವಿ ಪೂರ್ವ ಕಾಲೇಜು ಅಪೂರ್ವ ಅವಕಾಶವೊಂದನ್ನು ಕಲ್ಪಿಸುತ್ತಿದೆ.
ಪಿಯುಸಿಯಲ್ಲಿ ವಿಜ್ಞಾನ ವಿಭಾಗ ಸೇರಿ ಮುಂದೆ ವೈದ್ಯಕೀಯ, ಎಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್ ಗಳನ್ನು ಮಾಡಬೇಕೆಂದು ಬಯಸುವ ವಿದ್ಯಾರ್ಥಿಗಳಿಗೆ ಉಚಿತ ಫೌಂಡೇಶನ್ ಕೋರ್ಸ್ ನಡೆಸಲಿದೆ.

ನೀಟ್, ಜೆಇಇ ಮೈನ್ಸ್ ಮತ್ತು ಅಡ್ವಾನ್ಸ್, ಸಿಇಟಿ, ನಾಟಾ ಎನ್ ಡಿ ಎ, ಬಿಎಸ್ಸಿ ಅಗ್ರಿ ,ಫಾರೆನ್ಸಿಕ್ ಸೈನ್ಸ್ ಸೇರಿ ವಿಜ್ಞಾನ ವಿಭಾಗದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮಾರ್ಚ್ 10 ರಿಂದ ಪ್ರತಿ ನಿತ್ಯ ಉಚಿತ ಫೌಂಡೇಶನ್ ತರಗತಿಗಳು ನಡೆಯಲಿವೆ. ಸಿಬಿಎಸ್ ಇ ಹಾಗೂ ಐಸಿಎಸ್ ಇ ತರಗತಿಗಳಿಗೆ ಈಗಾಗಲೇ ವಾರ್ಷಿಕ ಪರೀಕ್ಷೆ ಮುಗಿದಿರುವುದರಿಂದ ಮೊದಲ ಹಂತದಲ್ಲಿ ಸಿಬಿಎಸ್ ಇ ಹಾಗೂ ಐಸಿಎಸ್ ಈ ವಿದ್ಯಾರ್ಥಿಗಳಿಗೆ ತರಗತಿ ನಡೆಸಲಾಗುತ್ತದೆ.

ಎಸ್ ಎಸ್ ಎಲ್ ಸಿ ಪರೀಕ್ಷೆ ಮುಗಿದ ಬಳಿಕ ಸ್ಟೇಟ್ ಬೋರ್ಡ್ ಸಿಲೆಬಸ್ ನ ವಿದ್ಯಾರ್ಥಿಗಳಿಗೆ ಕೂಡಾ ಉಚಿತ ಎಕ್ಸೆಲ್ ಕನೆಕ್ಟ್ ತರಗತಿ ಗಳನ್ನು ನಡೆಸಲಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ವಿಶೇಷ ಜ್ಞಾನ ಹಾಗೂ ಪ್ರಾವೀಣ್ಯತೆಯಿರುವ, ಹಿರಿಯ ಪ್ರಾಧ್ಯಾಪಕರು ತರಗತಿ ನಡೆಸುವುದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ.

ಪ್ರತಿ ನಿತ್ಯ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ1 ಗಂಟೆಯವರೆಗೆ ತರಗತಿ ನಡೆಯಲಿದೆ. ಮಧ್ಯಾಹ್ನ ಕಾಲೇಜು ಆವರಣದಲ್ಲಿ ಎಕ್ಸೆಲ್ ಕನೆಕ್ಟ್ ತರಗತಿಗೆ ಬರುವ ವಿದ್ಯಾರ್ಥಿಗಳಿಗೆ ಉಚಿತ ಊಟೋಪಚಾರ ವ್ಯವಸ್ಥೆ ಕಲ್ಪಿಸಲಾಗಿದೆ. ತಾಲೂಕಿನ ಎಲ್ಲಾ ಭಾಗದಿಂದಲೂ ಈ ವಿದ್ಯಾರ್ಥಿಗಳಿಗಾಗಿ ಉಚಿತ ಬಸ್ ವ್ಯವಸ್ಥೆಯನ್ನು ಕೂಡಾ ಮಾಡಲಾಗಿದೆ. ಹೆಚ್ಚಿನ ವಿವರಗಳಿಗೆ ಕಾಲೇಜು ಕಛೇರಿ 8867242769/ 9880899769 ಸಂಪರ್ಕಿಸಬಹುದು.

Related posts

ಮುಡಾ ಹಗರಣ: ಹೈಕೋರ್ಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಅರ್ಜಿ ವಜಾ

Suddi Udaya

ಬೆಳ್ತಂಗಡಿ: ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ, ಹೊಗೆ ರಹಿತ ವಾಹನ ನಿರ್ಮಲ ಪರಿಸರದ ಜೀವನ ಬಗ್ಗೆ ಕಾರ್ಯಕ್ರಮ

Suddi Udaya

ಬಳಂಜ: ಉದ್ಯಮಿ ಯಶೋಧರ ಜೈನ್ ನಿಧನ

Suddi Udaya

ನಾರಾವಿ ಉ.ಹಿ.ಪ್ರಾ. ಶಾಲೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ

Suddi Udaya

ಬದ್ಯಾರುನಲ್ಲಿ ಕಾರುಗಳ ನಡುವೆ ಅಪಘಾತ

Suddi Udaya

ಕುತ್ಲೂರು ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಧನಲಕ್ಷ್ಮೀ ಪೂಜೆ, ಗೋ ಪೂಜೆ, ವಾಹನ ಪೂಜೆ ,ಆಯುಧ ಪೂಜೆ ಹಾಗೂ ಹೆಣ್ಣು ಕರು ದಾನ ಕಾರ್ಯಕ್ರಮ

Suddi Udaya
error: Content is protected !!