35.1 C
ಪುತ್ತೂರು, ಬೆಳ್ತಂಗಡಿ
March 9, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ರೋಟರಿ ಕ್ಲಬ್ ಹಾಗೂ ಕಾನ್ ಫಿನ್ ಹೋಮ್ಸ್ ಸಹಕಾರದಲ್ಲಿ ಸಿಯೋನ್ ಆಶ್ರಮದ ನಿವಾಸಿಗಳಿಗೆ 135 ಮಂಚಗಳು ಹಾಗೂ ಹಾಸಿಗೆ ಸಾಮಗ್ರಿಗಳ ಕೊಡುಗೆ

ಬೆಳ್ತಂಗಡಿ: ಸಿಯೋನ್ ಆಶ್ರಮದ ನಿವಾಸಿಗಳ ಸುಖಕರ ವಾಸ್ತವ್ಯಕ್ಕಾಗಿ ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು ರೋಟರಿ ಕ್ಲಬ್ ಇಂದಿರಾನಗರ (ಬೆಂಗಳೂರು) ಅವರ ಮುಂದಾಳತ್ವದಲ್ಲಿ ಕಾನ್ ಫಿನ್ ಹೋಮ್ಸ್ ಲಿಮಿಟೆಡ್ ವತಿಯಿಂದ ಒಟ್ಟು 135 ಮಂಚಗಳು, ಹಾಸಿಗೆಗಳು, ಬೆಡ್‌ಶೀಟ್‌ಗಳು ಮತ್ತು ತಲೆದಿಂಬುಗಳು ಕೊಡುಗೆಯಾಗಿ ಮಾ.6ರಂದು ನೀಡಲಾಯಿತು.

ಕಾರ್ಯಕ್ರಮವನ್ನು ಕಾನ್ ಫಿನ್ ಹೋಮ್ಸ್ ಲಿಮಿಟೆಡ್ ಸಂಸ್ಥೆಯ ಡೆಪ್ಯೂಟಿ ಜನರಲ್ ಮ್ಯಾನೇಜರ್ ಪ್ರಶಾಂತ್ ಜೋಯಿಷಿ ಉದ್ಘಾಟಿಸಿ, ಅಶಕ್ತರು, ಅನಾಥರು ಹಾಗೂ ನಿರಾಶ್ರಿತರಿಗೆ ಆಶ್ರಯ ಮತ್ತು ಆರೈಕೆ ನೀಡುತ್ತಿರುವ ಸಿಯೋನ್ ಆಶ್ರಮದ ಮಹತ್ತರ ಸೇವೆಯನ್ನು ಶ್ಲಾಘಿಸಿದರು. ಜೊತೆಗೆ ಸಂಸ್ಥೆಯ ಮುಂದಿನ ಅಭಿವೃದ್ಧಿ ಹಾಗೂ ಸೇವಾ ಕಾರ್ಯಗಳಿಗೆ ಶುಭಾಶಯಗಳನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಿಯೋನ್ ಆಶ್ರಮದ ಮ್ಯಾನೇಜಿಂಗ್ ಟ್ರಸ್ಟಿ ಡಾ. ಯು.ಸಿ. ಪೌಲೋಸ್, ರೋಟರಿ ಕ್ಲಬ್ ಅಧ್ಯಕ್ಷ ಶ್ರೀ ಪ್ರಕಾಶ್ ಪ್ರಭು, ಹಿಂದಿನ ಅಧ್ಯಕ್ಷ ಶ್ರೀ ಅನಂತ ಭಟ್ ಮಚ್ಚಿಮಲೆ, ರೋಟರಿ ಪ್ರಾಜೆಕ್ಟ್ ಚೇರ್ಮನ್ ಶ್ರೀ ಅಬುಬಕ್ಕರ್, ಸಂಸ್ಥೆಯ ಟ್ರಸ್ಟಿ ಸದಸ್ಯೆ ಶ್ರೀಮತಿ ಮೇರಿ ಯು.ಪಿ., ಆಡಳಿತಾಧಿಕಾರಿ ಶೋಭಾ ಯು.ಪಿ., ಲೆಕ್ಕಾಧಿಕಾರಿ ಸೌಮ್ಯ ಯು.ಪಿ., ಸಂಸ್ಥೆಯ ಆಡಳಿತ ವರ್ಗದವರು, ಸಿಬ್ಬಂದಿ ವರ್ಗ ಹಾಗೂ ಆಶ್ರಮದ ನಿವಾಸಿಗಳು ಉಪಸ್ಥಿತರಿದ್ದರು.

Related posts

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಬೆಳ್ತಂಗಡಿ ವಲಯದಿಂದ ದಿ| ನಂದಕುಮಾರ್ ಉಜಿರೆ ರವರಿಗೆ ಶ್ರದ್ಧಾಂಜಲಿ

Suddi Udaya

ಮೇಲಂತಬೆಟ್ಟು ಶ್ರೀ ನಾಗಬ್ರಹ್ಮ ದೇವಸ್ಥಾನದ ಒಳಗೆ ನುಗ್ಗಿದ ಪ್ರವಾಹ: ಕಂಪೌಂಡ್ ಕುಸಿತ

Suddi Udaya

ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಇಂದಬೆಟ್ಟು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಪ್ರತಿಭಟನೆ

Suddi Udaya

ಸಂವಿಧಾನ ದಿನಾಚರಣೆ ಪ್ರಯುಕ್ತ ನಡೆದ ಸ್ಪರ್ಧೆಯಲ್ಲಿ ಹೊಸಂಗಡಿ ಇಂದಿರಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ

Suddi Udaya

ಮೊಗ್ರು: ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ ಮತ್ತು ಶ್ರೀ ರಾಮ ಶಿಶು ಮಂದಿರ ಅಲೆಕ್ಕಿ- ಮುಗೇರಡ್ಕ ಆಶ್ರಯದಲ್ಲಿ ಶ್ರೀ ಕೃಷ್ಣಜನ್ಮಾಷ್ಠಮಿ ಪ್ರಯುಕ್ತ ಶ್ರೀ ಬಾಲಕೃಷ್ಣ ತೊಟ್ಟಿಲ ಸಂಭ್ರಮ

Suddi Udaya

ಬೆಳಾಲು: ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

Suddi Udaya
error: Content is protected !!