September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಸಂಘ-ಸಂಸ್ಥೆಗಳು

ಶಿಬಾಜೆ : ಹಾವುಗಳ ಗುರುತಿಸುವಿಕೆ ಮುನ್ನೆಚ್ಚರಿಕೆ ಮತ್ತು ಪ್ರಥಮ ಚಿಕಿತ್ಸೆ ಮಾಹಿತಿ ಕಾರ್ಯಕ್ರಮ

ಶಿಬಾಜೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಶಿಬಾಜೆ ಕಾರ್ಯಕ್ಷೇತ್ರದ ತ್ರೈಮಾಸಿಕ ಒಕ್ಕೂಟ ಸಭೆಯಲ್ಲಿ ಹಾವುಗಳನ್ನು ಗುರುತಿಸುವಿಕೆ ಮನ್ನೆಚ್ಚರಿಕೆ ಹಾಗೂ ಪ್ರಥಮ ಚಿಕಿತ್ಸಾ ಮಾಹಿತಿ ಕಾರ್ಯಕ್ರಮ ನಡೆಯಿತು.

ಧರ್ಮಸ್ಥಳ ಶ್ರೀ ಶೌರ್ಯ ವಿಪತ್ತು ನಿರ್ವಹಣಾ ಘಟಕ ಶಿಶಿಲ ಅರಸಿನಮಕ್ಕಿ ಇದರ ಸದಸ್ಯ ರಮೇಶ ಬೈರಕಟ್ಟರವರು ಅರಣ್ಯ ಇಲಾಖೆಯಿಂದ ಗುರುತಿಸಲ್ಪಟ್ಟ ಉರಗ ರಕ್ಷಕ ಸುರೇಶ್ ಶಿಬಾಜೆ ಇವರ ಮಾರ್ಗದರ್ಶನದಲ್ಲಿ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ಶಿಬಾಜೆ ಒಕ್ಕೂಟದ ಅಧ್ಯಕ್ಷ ಪ್ರಭಾಕರ ಟಿ.ಆರ್., ಜನಜಾಗೃತಿ ವೇದಿಕೆಯ ತಾಲೂಕು ಸಮಿತಿ ಸದಸ್ಯ ಎಚ್.ಎಸ್. ಚೆನ್ನಪ್ಪಗೌಡ ,ವಲಯಾಧ್ಕಕ್ಷ ಗಣೇಶ್ ಗೌಡ, ವಲಯ ಮೇಲ್ವಿಚಾರಕಿ ಶಶಿಕಲಾ, ಬೆಳ್ತಂಗಡಿ ತಾಲೂಕು ಶೌರ್ಯ ಮಾಸ್ಟರ್ ಅವಿನಾಶ್ ಭಿಡೆ, ಶಿಶಿಲ ಆರಸಿನಮಕ್ಕಿ ಶೌರ್ಯ ಸಂಯೋಜಕಿ ರಶ್ಮಿತಾ ಟಿ.ಬಿ., ಶಿಬಾಜೆ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಯೋಗೀಶ್ ಗ್ರಾಹಕ ಸೇವಾಕೇಂದ್ರದ ದಿವ್ಯಾ ಹಾಗೂ ಒಕ್ಕೂಟ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಉದ್ದೇಶ ಹಾಗೂ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲಾಯಿತು.ವಿಷರಹಿತ ಹಾಗೂ ವಿಷಪೂರಿತ ಹಾವುಗಳ ಗುರುತಿಸುವಿಕೆ ಕುರಿತು ಸಚಿತ್ರ ವಿವರಣೆ ನೀಡಲಾಯಿತು.
ಹಾವುಗಳು ಮನೆಯೊಳಗೆ ಬರದಂತೆ ಮುನ್ನೆಚ್ಚರಿಕಾ ಕ್ರಮಗಳು ಹಾಗೂ ಪ್ರಥಮ ಚಿಕಿತ್ಸಾ ಮಾಹಿತಿಯನ್ನು ನೀಡಲಾಯಿತು.

Related posts

ನಾವೂರು ಪ್ರೌಢಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ಡಿ.12: ಹಳೆ ಕಟ್ಟಡ ಕಲ್ಲೇರಿಯಲ್ಲಿ “ಕಲ್ಲೇರಿ ವೆಲ್‌ನೆಸ್ ಸೆಂಟರ್‌”ನ ಶುಭಾರಂಭ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ-ದುರ್ಗಾದೇವಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಉಜ್ವಲ ಮತ್ತು ಭವಿಷ್ಯ ಮಕ್ಕಳ ಸಮಿತಿ ರಚನೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀ ವತಿಯಿಂದ ಶಿಕ್ಷಣ ಕ್ಷೇತ್ರದ ಅಪೂರ್ವ ಸಾಧಕ: ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರಿಗೆ ಅತ್ಯುತ್ತಮ ಯುವ ಸಾಧಕ ಪ್ರಶಸ್ತಿ ಪ್ರದಾನ

Suddi Udaya

ನಾವೂರು ಮೂಲ್ಯರ ಯಾನೆ ಕುಲಾಲರ ಸಂಘ ಮತ್ತು ಕುಲಾಲರ ಕ್ರೀಡಾ ಕೂಟ ಸಮಿತಿ ಆಶ್ರಯದಲ್ಲಿ ವಲಯ ಮಟ್ಟದ ಸ್ವಜಾತಿ ಬಾಂಧವರ ಕ್ರೀಡಾಕೂಟ

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫೋನಿಕ್ ಸೌಂಡ್ ಗಳ ಉಚ್ಚಾರಣೆ ಮತ್ತು ಬಳಕೆ ಬಗ್ಗೆ ಕಾರ್ಯಾಗಾರ

Suddi Udaya
error: Content is protected !!