September 25, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆಯ ಬೆನಕ ಹೆಲ್ತ್ ಸೆಂಟರ್ ನಲ್ಲಿ ನವೀಕೃತಗೊಂಡ ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದ ಉದ್ಘಾಟನೆ

ಉಜಿರೆ: NABH ಪುರಸ್ಕ್ರತ ಬೆನಕ ಹೆಲ್ತ್ ಸೆಂಟರ್‌ನಲ್ಲಿ ನವೀಕೃತ ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದ ಉದ್ಘಾಟನೆಯನ್ನು ಬೆಳ್ತಂಗಡಿಯ ರಾಘವೇಂದ್ರ ನರ್ಸಿಂಗ್ ಹೋಮ್‌ನ ಹಿರಿಯ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞೆ ಡಾ. ರೂಪಲತಾ ಎಂ. ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಮಹಿಳೆಯ ಆರೋಗ್ಯವೇ ಆರೋಗ್ಯವಂತ ಕುಟುಂಬದ ಅಡಿಪಾಯ. ಮಹಿಳೆಯರಿಗೆ ಸಕಾಲದಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ ದೊರೆಯುವುದು ಅತ್ಯಂತ ಮುಖ್ಯ” ಎಂದರು. ಸ್ತ್ರೀರೋಗ ಮತ್ತು ಪ್ರಸೂತಿ ಚಿಕಿತ್ಸೆಯಲ್ಲಿ ತಾಯಿ ಮತ್ತು ಮಗುವಿನ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕೆಂದು ತಿಳಿಸಿದ ಅವರು, ಗ್ರಾಮೀಣ ಭಾಗದ ಮಹಿಳೆಯರಿಗೆ ತಜ್ಞ ವೈದ್ಯಕೀಯ ಸೇವೆಗಳು ಸುಲಭವಾಗಿ ದೊರೆಯುವಂತೆ ಬೆನಕ ಹೆಲ್ತ್ ಸೆಂಟರ್ ಕೈಗೊಂಡಿರುವ ಕ್ರಮವನ್ನು ಶ್ಲಾಘಿಸಿದರು.

ಪ್ರಾರಂಭದಲ್ಲಿ ಡಾ. ಅಂಕಿತಾ ಜಿ. ಭಟ್ ಅವರು ಡಾ. ರೂಪಲತಾ ಎಂ. ಅವರನ್ನು ಪರಿಚಯಿಸಿದರು. ಸ್ತ್ರೀರೋಗ ಮತ್ತು ಪ್ರಸೂತಿ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿರುವ ಡಾ. ರೂಪಲತಾ ಅವರು ಹಲವಾರು ಕ್ಲಿಷ್ಟಕರ ಹೆರಿಗೆಗಳನ್ನುಅತ್ಯಂತ ಯಶಸ್ವಿಯಾಗಿ ನಿರ್ವಹಿಸಿ, ತಾಯಿ ಮತ್ತು ಮಗುವಿನ ಸುರಕ್ಷತೆಗೆ ಆದ್ಯತೆ ನೀಡುತ್ತಾ ಸೇವೆ ಸಲ್ಲಿಸುತ್ತಿದ್ದಾರೆ ಎಂದು, ಅವರು ಕಲಿತ ಶಿಕ್ಷಣದಿಂದ ಇದುವರೆಗೂ ನಡೆದುಬಂದ ಹಾದಿಯನ್ನು ವಿವರಿಸಿದರು.

ಇದೇ ಸಂದರ್ಭದಲ್ಲಿ ಡಾ ಗೋಪಾಲಕೃಷ್ಣ ಮತ್ತು ಡಾ ಭಾರತಿ ದಂಪತಿಗಳು ಡಾ ರೂಪಲತಾ ಅವರನ್ನು ಶಾಲು ಹೊದಿಸಿ ಮಾಲಾರ್ಪಣೆ ಮತ್ತು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.

ಅಧ್ಯಕ್ಷೀಯ ಮಾತುಗಳನ್ನಾಡಿದ ಬೆನಕ ಹೆಲ್ತ್ ಸೆಂಟರ್‌ನ ನಿರ್ದೇಶಕರಾದ ಡಾ. ಗೋಪಾಲಕೃಷ್ಣ ಅವರು, ಉಜಿರೆ ಹಾಗೂ ಸುತ್ತಮುತ್ತಲಿನ ಜನರಿಗೆ ಗುಣಮಟ್ಟದ ಮತ್ತು ವಿಶ್ವಾಸಾರ್ಹ ಆರೋಗ್ಯ ಸೇವೆಯನ್ನು ಒದಗಿಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ ಎಂದರು. ನವೀಕೃತ ಸ್ತ್ರೀರೋಗ ಮತ್ತು ಪ್ರಸೂತಿ ವಿಭಾಗದ ಮೂಲಕ ಮಹಿಳೆಯರಿಗೆ ಇನ್ನಷ್ಟು ಸುಸಜ್ಜಿತ ಹಾಗೂ ಸಮಗ್ರ ವೈದ್ಯಕೀಯ ಸೇವೆಯನ್ನು ಒದಗಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದ ಬೆನಕ ಹೆಲ್ತ್ ಸೆಂಟರ್‌ನ ಸಹ ನಿರ್ದೇಶಕರಾದ ಡಾ. ಭಾರತಿ ಜಿ.ಕೆ. ಅವರು ವಂದಿಸಿದರು. ಈ ಸಂದರ್ಭದಲ್ಲಿ  ಡಾ.ಆದಿತ್ಯ ರಾವ್ , ಡಾ.ಡೆಂಜಿಲ್ ನರೊನ್ಹ , ಡಾ.ಗೋವಿಂದ್ ಕಿಶೋರ್ , ಡಾ.ವಿನಯ ಕಿಶೋರ್, ಡಾ.ರೋಹಿತ್ ಜಿ ಭಟ್, ಡಾ.ನವ್ಯಾ ಭಟ್, ಡಾ.ಶ್ರೇಯಸ್ , ಡಾ.ದೀಪಾಲಿ ಡೋಂಗ್ರೆ, ಸಾರ್ವಜನಿಕರು ಮತ್ತು ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು.

Related posts

ಕೊಯ್ಯೂರು ಗ್ರಾ.ಪಂ. ನ ಗ್ರಾಮ ಸಭೆ

Suddi Udaya

ಡಿ.30 ಬೆಳ್ತಂಗಡಿ ಶ್ರೀ ರತ್ನತ್ರಯ ಜೈನ ತೀರ್ಥಕ್ಷೇತ್ರಕ್ಕೆ ಯುಗಲಮುನಿವರ್ಯರಾದ ಪರಮಪೂಜ್ಯ108 ಶ್ರೀ ಅಮೋಘಕೀರ್ತಿ ಮುನಿ ಮಹಾರಾಜರು ಹಾಗೂ ಪರಮಪೂಜ್ಯ 108 ಶ್ರೀ ಅಮರಕೀರ್ತಿ ಮುನಿ ಮಹಾರಾಜ ಪುರಪ್ರವೇಶ

Suddi Udaya

ಉಜಿರೆ ಲಕ್ಷ್ಮಿ ಗ್ರೂಪ್ ಮಾಲಕ ಮೋಹನ್ ಕುಮಾರ್ ರವರಿಂದ ಯೋಗಾಸನ ಸ್ಪರ್ಧೆಗೆ ವಿದ್ಯಾರ್ಥಿಗಳಿಗೆ ಯೂನಿಪಾರ್ಮ್ ವಿತರಣೆ

Suddi Udaya

ಉಡುಪಿ ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕ್ ಆಡಳಿತ ಮಂಡಳಿಯ ನಿರ್ದೇಶಕರಾಗಿ ಧರಣೇಂದ್ರ ಕೆ. ಜೈನ್ ಆಯ್ಕೆ

Suddi Udaya

ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆಯ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಬೆಂಗಾವಲಾದ ಹಿರಿಯ ವಿದ್ಯಾರ್ಥಿಗಳು

Suddi Udaya

ಉಜಿರೆಯ ಎಸ್ ಎಲ್ ವಿ ಕನ್ಸ್ಟ್ರಕ್ಷನ್ ನ ಸಿವಿಲ್ ಇಂಜಿನಿಯರ್ ಸಂಪತ್ ರತ್ನ ರಾವ್ ಎಮಿನೆಂಟ್ ಇಂಜಿನಿಯರ್ ಪ್ರಶಸ್ತಿಗೆ ಆಯ್ಕೆ

Suddi Udaya
error: Content is protected !!