35.1 C
ಪುತ್ತೂರು, ಬೆಳ್ತಂಗಡಿ
March 9, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಹೊಸ್ಮಾರು ಕುಲಾಲ ಸಮುದಾಯ ಭವನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ 2 ಲಕ್ಷದ ಮಂಜೂರಾತಿ ಪತ್ರ ಹಸ್ತಾಂತರ

ನಾರಾವಿ: ಹೊಸ್ಮಾರು ಕುಲಾಲ ಸಂಘಕ್ಕೆ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿಗಳು ಭೇಟಿ ನೀಡಿದರು.

ಕುಲಾಲ ಸಮಾಜ ಕಲ್ಯಾಣ ಸಂಘ ಹೊಸ್ಮಾರು ಇದರ ಸಮುದಾಯ ಭವನದ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ|| ಡಿ ವೀರೇಂದ್ರ ಹೆಗ್ಗಡೆಯವರು ಸಮುದಾಯ ಭವನದ ಅಭಿವೃದ್ಧಿಗೆ ಸಮುದಾಯ ಭವನ ಯೋಜನಾ ಅಡಿಯಲ್ಲಿ ಹೊಸ್ಮಾರು ಕುಲಾಲ ಸಂಘದ ಸಮುದಾಯ ಭವನಕ್ಕೆ ರೂ 2 ಲಕ್ಷ ಮೊತ್ತದ ಮಂಜೂರಾತಿ ಪತ್ರವನ್ನು ಕ್ಷೇತ್ರದ ವತಿಯಿಂದ ನೀಡಿದರು .

ಮಂಜೂರಾತಿ ಪತ್ರವನ್ನು ಕುಲಾಲ ಸಂಘದ ಅಧ್ಯಕ್ಷ ಪ್ರಮೋದ್ ಕುಲಾಲ್ ಇವರಿಗೆ ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಅಧ್ಯಕ್ಷ ನೋನು, ವಲಯ ಮೇಲ್ವಿಚಾರಕ ಗಿರೀಶ್ ಕೆ ಎಲ್ ಹಾಗೂ ಸೇವಾ ಪ್ರತಿನಿಧಿ ಮಲ್ಲಿಕಾ ಮತ್ತು ಒಕ್ಕೂಟದ ಅಧ್ಯಕ್ಷೆ ವಿನುತಾ ಆಚಾರ್ಯ ಹಾಗೂ ಯೋಜನೆಯ ಒಕ್ಕೂಟದ ಮಾಜಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಕುಲಾಲ ಸಂಘದ ಕಟ್ಟಡ ಸಮಿತಿಯ ಅಧ್ಯಕ್ಷರು ಮತ್ತು ಸಂಘದ ಗೌರವ ಅಧ್ಯಕ್ಷರು ಮಹಿಳಾ ಘಟಕದ ಸದಸ್ಯರು ಪದಾಧಿಕಾರಿಗಳು ಸದಸ್ಯರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಗಿರೀಶ್ ಕೆಎಲ್ ಸ್ವಾಗತಿಸಿದರು. ಮಲ್ಲಿಕಾ ವಂದಿಸಿದರು.

Related posts

ಸುಲ್ಕೇರಿಮೊಗ್ರು: ಕಲ್ಯಾಣಬೆಟ್ಟು ನಿವಾಸಿ ಸುಂದರಿ ನಿಧನ

Suddi Udaya

ಒಕ್ಕಲೆಬ್ಬಿಸಿದ ಕ್ರಮಕ್ಕೆ ಬೆಳ್ತಂಗಡಿಯ ಕರ್ನಾಟಕ ಸೀರೋ ಮಲಬಾರ್ ಕೆಥೋಲಿಕ್ ಅಸೋಸಿಯೇಷನ್ ನಿಂದ ಖಂಡನೆ

Suddi Udaya

ಮುಗುಳಿ ಅಂಗನವಾಡಿ ಕೇಂದ್ರದಲ್ಲಿ ಎಲ್.ಕೆ.ಜಿ ಮತ್ತು ಯುಕೆಜಿ ತರಗತಿಗಳ ಉದ್ಘಾಟನೆ

Suddi Udaya

ವಾಣಿ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ

Suddi Udaya

ಕೊಕ್ಕಡದಿಂದ ಮುಂಡೂರುಪಳಿಕೆವರೆಗೆ 3 ಫೇಸ್ ವಿದ್ಯುತ್ತನ್ನು ನೀಡುವಂತೆ ಆಗ್ರಹಿಸಿ ಬೆಳ್ತಂಗಡಿ ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರ ಮೂಲಕ ಮಂಗಳೂರು ಮೆಸ್ಕಾಂ ವ್ಯವಸ್ಥಾಪಕರಿಗೆ ಮನವಿ

Suddi Udaya

ಬೆಳ್ತಂಗಡಿ ನ್ಯಾಯಾಲಯ ಸಂಕೀರ್ಣದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ

Suddi Udaya
error: Content is protected !!