ಅರಸಿನಮಕ್ಕಿ: ಜಿಲ್ಲಾ ಕೃಷಿ ತರಬೇತಿ ಕೇಂದ್ರ ಬೆಳ್ತಂಗಡಿ ಗ್ರಾಮ ಪಂಚಾಯತ್ ಅರಸಿನಮಕ್ಕಿ ಶಿವಾನಿ ಸಂಜೀವಿನಿ ಮಹಿಳಾ ಒಕ್ಕೂಟ ಅರಸಿನಮಕ್ಕಿ ಇದರ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ನಾಟಿ ಕೋಳಿ ಮೊಟ್ಟೆ ಸಾಕಾಣಿಕೆ ತರಬೇತಿಯನ್ನು ಮಾ.೧೦ರಂದು ಸಿಎ ಬ್ಯಾಂಕ್ ಸಭಾಂಗಣದಲ್ಲಿ ಒಕ್ಕೂಟದ ಅಧ್ಯಕ್ಷೆ ಬಿಂದು ಇವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಜಿಲ್ಲಾ ತರಬೇತಿ ಕೇಂದ್ರದ ಕೃಷಿ ಅಧಿಕಾರಿ ಗಣೇಶ್ ಅಡಿಗ ಮಾತನಾಡಿ ನಾಟಿ ಕೋಳಿ ಮೊಟ್ಟೆ ತರಬೇತಿಯ ಬಗ್ಗೆ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಪ್ರಸ್ತಾವಿಸಿದರು.
ಹತ್ಯಡ್ಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯ್ಕ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಕೊಕ್ಕಡ ವಲಯ ಮೇಲ್ವಿಚಾರಕಿ ವೀಣಾಶ್ರೀ ಸ್ವ-ಉದ್ಯೋಗ ಮಾಡಲು ಸಿಐಎಫ್ ಲೋನ್, ಬ್ಯಾಂಕ್ ಲೋನ್ ಸಂಜೀವಿನಿ ಮುಖಾಂತರ ಕೇಂದ್ರ ಸರಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ನಾಟಿ ಕೋಳಿ ಮೊಟ್ಟೆ ತರಬೇತಿಯನ್ನು ಸದುಪಯೋಗ ಪಡೆದುಕೊಳ್ಳಿ ಎಂಬುದಾಗಿ ಹೇಳಿದರು.
ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುಧೀರ್ ಎಂ.ಎಸ್. ಮಾತನಾಡಿ ಸಂಜೀವಿನಿ ಸದಸ್ಯರಿಗೆ ಕೇಂದ್ರ ಸರಕಾರದಿಂದ ವಿವಿಧ ಯೋಜನೆಗಳು, ವಿವಿಧ ತರಬೇತಿಗಳಲ್ಲಿ ಮಹಿಳೆಯರು ಸ್ವಾವಲಂಬಿ ಆಗಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ನೆರಿಯ ಪಶು ವ್ಯೆದ್ಯಾಧಿಕಾರಿ ಡಾ| ಯತೀಶ್ ನಾಟಿ ಕೋಳಿ ಮೊಟ್ಟೆ ಸಾಕಾಣಿಕೆ ಬಗ್ಗೆ ತರಬೇತಿ ನೀಡಿದರು.
ಎಲ್‌ಸಿಆರ್‌ಪಿ ಅಮಿತ, ಬಿಸಿ ಸಖಿ ರೇವತಿ, ಕೃಷಿ ಸಖಿ ಹರಿಣಾಕ್ಷಿ, ಒಕ್ಕೂಟದ ಕಾರ್ಯದರ್ಶಿ, ಉಪಾಧ್ಯಕ್ಷರು, ಸದಸ್ಯರು, ಅಂಗನವಾಡಿ ಕಾರ್ಯಕರ್ತೆ, ಶಿಶಿಲದ ಎಲ್‌ಸಿಆರ್‌ಪಿ, ಕೃಷಿ ಸಖಿ, ಶಿಶಿಲದ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.
ಮೋಹಿನಿ ಪ್ರಾರ್ಥನೆ ಹಾಡಿದರು. ಹೇಮಲತಾ ನಿರೂಪಿಸಿ, ನೀತಾ ಸ್ವಾಗತಿಸಿ, ಪಶು ಸಖಿ ವೇದಾವತಿ ವಂದಿಸಿದರು.













