ಉಜಿರೆ: ಧರ್ಮಯಾನದಲ್ಲಿ ಸಾವಿರಾರು ಕಲಾವಿದರು, 25 ಸಾವಿರಕ್ಕೂ ಹೆಚ್ಚು ಊರ ಪರವೂರ ಭಕ್ತಾದಿಗಳು ಸೇರಿದ್ದು ಉಜಿರೆಯ ಬ್ರಹ್ಮಕಲಶೋತ್ಸವದ ಐತಿಹಾಸಿಕ ಧರ್ಮಯಾನ ಅತ್ಯಂತ ಯಶಸ್ವಿಯಾಗಿ ಉಜಿರೆಯ ಭಕ್ತರ ಪಾಲಿಗೆ ಅವಿಸ್ಮರಣೀಯ ಅಧ್ಯಾತ್ಮಯಾತ್ರೆಯಾಗಿ, ಧರ್ಮಯಾತ್ರೆ, ಪರಂಪರೆಯ ಪುಣ್ಯಯಾತ್ರೆಯಾಗಿ ಅಚ್ಚುಕಟ್ಟಾಗಿ ಸಾಗಿದೆ.
ಧರ್ಮದೇವತೆಗಳ ಪ್ರತಿನಿಧಿಯಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಉಜಿರೆ ಕ್ಷೇತ್ರಕ್ಕೆ ಆಗಮಿಸಿ,ಧರ್ಮದೇವತೆಗಳೇ ಅವರೊಂದಿಗೆ ಬರುತ್ತಾರೆಂಬ ನಂಬಿಕೆ ನಮ್ಮದಾಗಿದೆ. ಶ್ರೀ ಸೊದೆ ಮಠದ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರು ಮತ್ತು ಶ್ರೀ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಪಾದಂಗಳವರು ಉಜಿರೆಗೆ ಪಾದಸ್ಪರ್ಶ ಮಾಡಿ ದಿವ್ಯತೆಯ ಭವ್ಯಯಾತ್ರೆಯಾಗಿದೆಎಂದು ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಮಾಲಕರು, ಗೋಪುರ ನಿರ್ಮಾಣ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಸಂಚಾಲಕ ಮೋಹನ್ ಕುಮಾರ್ ಅವರು ಹೇಳಿದರು.













