ಬೆಳ್ತಂಗಡಿ: ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಕಾಶಿಬೆಟ್ಟು ಎಂಬಲ್ಲಿ ಮಹೀಂದ್ರಾ ಥಾರ್ ವಾಹನ ನಿಯಂತ್ರಣ ಕಳೆದುಕೊಂಡು ಡಿವೈಡರ್ ಮೇಲೆ ಹತ್ತಿದ ಪರಿಣಾಮ ಚಾಲಕ ಗಾಯಗೊಂಡ ಘಟನೆ ಮಾ.11ರಂದು ನಡೆದಿದೆ.
ನೇರವಾಗಿ ಡಿವೈಡರ್ ಮೇಲೆ ಏರಿದ ಪರಿಣಾಮ ವಾಹನದ ಕೆಳಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಹಾನಿ ಉಂಟಾಗಿದ್ದು ತಕ್ಷಣವೇ ಎರ್‌ಬ್ಯಾಗ್ ತೆರೆದುಕೊಂಡು ಚಾಲಕ ಹಾಗೂ ಸಹಪ್ರಯಾಣಿಕ ಪ್ರಾಣಪಾಯದಿಂದ ಪಾರಗಿದ್ದು ಚಾಲಕನಿಗೆ ಗಾಯಗಳಾಗಿದ್ದು ಸ್ಥಳೀಯರು ತಕ್ಷಣವೇ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಾಹನ ಬೆಳ್ತಂಗಡಿ ಕಡೆಯಿಂದ ಉಜಿರೆಗೆ ಸಂಚರಿಸುತ್ತಿತ್ತು ಎಂದು ತಿಳಿದು ಬಂದಿದೆ.













