March 12, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿ

ಬೆಳ್ತಂಗಡಿ: ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಬೆಳ್ತಂಗಡಿ: ದಿನಾಂಕ 24.03.2022 ರಂದು ರಾತ್ರಿ, ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆಗಳ್ಳತನ ಪ್ರಕರಣದಲ್ಲಿ (ಅ ಕ್ರ ಸಂಖ್ಯೆ: 22/2022 ಕಲಂ 457, 380 ಐಪಿಸಿ) ಆರೋಪಿಯಾಗಿ, ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಬೆಳ್ತಂಗಡಿ ನೆರಿಯ ನಿವಾಸಿ ಶರತ್ ಎಸ್ (24) ಎಂಬಾತನನ್ನು ಬೆಳ್ಳಾರೆ ಠಾಣಾ ಪಿ.ಎಸ್.ಐ ರವರು ಹಾಗೂ ಸಿಬ್ಬಂದಿಗಳು ಬಂಧಿಸಿದ್ದಾರೆ.

ನ್ಯಾಯಾಲಯದ ನ್ಯಾಯಾದೀಶ ಶಿವಣ್ಣ ಹೆಚ್ ಆರ್ ರವರು ಪ್ರಕರಣದಲ್ಲಿ ಆರೋಪಿಗೆ ಕಲಂ 457 ಐಪಿಸಿ ರಲ್ಲಿ 6 ತಿಂಗಳ ಸಾದಾರಣ ಸಜೆ ಹಾಗೂ 500 ದಂಡ, ಕಲಂ 380 ಐಪಿಸಿ ಯಲ್ಲಿ 10 ತಿಂಗಳ ಸಾದಾರಣ ಸಜೆ ಹಾಗೂ 500 ದಂಡವನ್ನು ವಿಧಿಸಿದ್ದು, ದಂಡ ಪಾವತಿಸದಿದ್ದರೆ 10 ದಿನಗಳ ಸಜೆಯನ್ನು ನೀಡಿ ಆದೇಶಿಸಿರುತ್ತಾರೆ.ಪ್ರಕರಣದ ತನಿಖಾಧಿಕಾರಿಗಳಾಗಿ ಸಂತೋಷ ಬಿ ಪಿ, ಪಿ ಎಸ್ ಐ ರವರು ಅಗತ್ಯ ಸಾಕ್ಷಿಗಳನ್ನು ಕಲೆಹಾಕಿ ಮಾನ್ಯ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದು, ಸಹಾಯಕ ಸರ್ಕಾರಿ ಅಭಿಯೋಜಕರಾಗಿ ಪ್ರೀತಿ ಎಂ ಸಿ ರವರು ಸಮರ್ಥ ವಾದ ಮಂಡನೆ ನಡೆಸಿರುತ್ತಾರೆ.

ಸದ್ರಿ ಆರೋಪಿತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಲಂ 269 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದಲ್ಲಿ ಮಾನ್ಯ ನ್ಯಾಯಾದೀಶರಾದ ರೂ 1000 ದಂಡ ಅಥವಾ 10 ದಿನಗಳ ಕಾರಾಗೃಹ ವಾಸ ವಿಧಿಸಿ ಆದೇಶಿಸಿರುತ್ತದೆ.

Related posts

ಅರಿಕೆಗುಡ್ಡೆ ವನದುರ್ಗ ದೇವಳದ ಆವರಣದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಗಿಡ ನಾಟಿ ಕಾರ್ಯಕ್ರಮ

Suddi Udaya

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಜೇನು ಕೃಷಿ ತರಬೇತಿಯ ಸಮಾರೋಪ ಸಮಾರಂಭ

Suddi Udaya

ಕಲ್ಲಾಜೆ-ಇಂದಬೆಟ್ಟು ನವ ಭಾರತ್ ಗೆಳೆಯರ ಬಳಗದ ವತಿಯಿಂದ ಆಟಿಡೊಂಜಿ ದಿನ ಹಾಗೂ ವಿದ್ಯಾನಿಧಿ ವಿತರಣಾ ಸಮಾರಂಭ

Suddi Udaya

ಕಳೆಂಜದಲ್ಲಿ ರಾಜೇಶ್ ಎಂ.ಕೆ ಯವರ ಮೇಲೆ ನಡೆದ‌ ಹಲ್ಲೆ ಪ್ರಕರಣ: ಆಸ್ಪತ್ರೆಗೆ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಭೇಟಿ: ಆರೋಗ್ಯ ವಿಚಾರಣೆ

Suddi Udaya

ಸಾವ್ಯ ಶುಭೋದಯ ಹಿಂದೂ ಸೇವಾ ಟ್ರಸ್ಟ್ ಹಾಗೂ ಜೆ ಜೆ ಫ್ರೆಂಡ್ಸ್ ವತಿಯಿಂದ ವಾಲಿಬಾಲ್ ಪಂದ್ಯಾಟ

Suddi Udaya

ಉಜಿರೆ ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿನ ವತಿಯಿಂದ ಎನ್ ಎಸ್ ಎಸ್ ಮತ್ತು ಯುವ ರೆಡ್ ಕ್ರಾಸ್ ಸಹಭಾಗಿತ್ವದಲ್ಲಿ ಯಶೋವನ ಭೇಟಿ ಕಾರ್ಯಕ್ರಮ

Suddi Udaya
error: Content is protected !!