ಮಡoತ್ಯಾರು: ಪಾರೆoಕಿ ಗ್ರಾಮದ ಹಾರಬೆ ಶ್ರೀ ದುಗಲಾಯ ಮತ್ತು ಗುಳಿಗ ದೈವಗಳ ನೇಮೋತ್ಸವ ಸಮಿತಿ ಶ್ರೀ ರಾಮ ನಗರ ಹಾರಬೆ ಮಡಂತ್ಯಾರು ವಾರ್ಷಿಕ ನೇಮೋತ್ಸವದ ಪ್ರಯುಕ್ತ ಗಣ ಹೋಮ ನಾಗದೇವರಿಗೆ ತಂಬಿಲ ಸೇವೆ ಮಾ 14 ರoದು ಮoಜುನಾಥ ಭಟ್ ಅಸ್ರಣ್ಣರು ಅoತರ ಮಾಲಾಡಿ ಅವರ ಉಪಸ್ಥಿತಿಯಲ್ಲಿ ಜರಗಿತು.

ಈ ಸಂದರ್ಭದಲ್ಲಿ ನೇಮೋತ್ಸವ ಸಮಿತಿಯ ಗೌರವಾಧ್ಯಕ್ಷ ವಿಶ್ವನಾಥ ಪೂಜಾರಿ, ಅಧ್ಯಕ್ಷ ಸುಧೀರ್ ಪಿ ಪೂಜಾರಿ ಹಾರಬೆ, ಕಾರ್ಯದರ್ಶಿ ಮಹೇಶ್ ಕುಲಾಲ್, ಕೋಶಾಧಿಕಾರಿ ಪ್ರಮೀಳಾ ಉಮೇಶ್, ಸಮೀತಿಯ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು ಭಕ್ತಾದಿಗಳು ಉಪಸ್ಥಿತರಿದ್ದರು.
ಸಾಯಂಕಾಲ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ವಿಧ್ಯಾಸರಸ್ವತಿ ಭಜನಾ ಮಂಡಳಿ ಪಾರೆoಕಿ ಇವರಿoದ ವಿಶೇಷ ಕುಣಿತ ಭಜನಾ ಕಾರ್ಯಕ್ರಮ ಪ್ರಸಾರ ವಿತರಣೆ ಸಾರ್ವಜನಿಕ ಅನ್ನಸಂತರ್ಪಣೆ ರಾತ್ರಿ ದುಗಲಾಯ ಮತ್ತು ಗುಳಿಗ ದೈವಗಳ ನೇಮೋತ್ಸವ ನಡೆಯಲಿದೆ.












