33.6 C
ಪುತ್ತೂರು, ಬೆಳ್ತಂಗಡಿ
March 15, 2026
ಕರಾವಳಿ

ಬಂಗಾಡಿ ಕೊಲ್ಲಿ ಸೂರ್ಯಚಂದ್ರ ಕಂಬಳ

ಬೆಳ್ತಂಗಡಿ: ಕಂಬಳ ಕ್ರೀಡೆ ಎಂದರೆ ಅದು ತುಳುನಾಡಿನ ಜಾನಪದ ಕ್ರೀಡೆಯ ಜೊತೆಗೆ ಈ ತುಳುನಾಡಿನ ಸಂಸ್ಕೃತಿ, ಆಚಾರ, ವಿಚಾರ, ಸೌಹಾರ್ದತೆ ಯನ್ನು ಸಂತೋಷದಿಂದ ಆಚರಿಸಿಕೊಂಡು ಅದನ್ನು ಯುವಜನತೆಗೆ, ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಮುಂದೆ ಹುಟ್ಟುವ ಪೀಳಿಗೆಗೆ ವರ್ಗಾಯಿಸುವ ಕೆಲಸ ಎಂದು ವಿಧಾನ ಸಭೆಯ ಸಭಾಪತಿ ಯು.ಟಿ ಖಾದರ್ ಹೇಳಿದರು.

ಬಂಗಾಡಿ ಕೊಲ್ಲಿ ಸೂರ್ಯಚಂದ್ರ ಜೋಡುಕರೆ ಕಂಬಳ ಸಮಿತಿ ವತಿಯಿಂದ ನಡೆದ ಕಂಬಳ ಕೂಟದಲ್ಲಿ ಭಾಗವಹಿಸಿದ ಅವರು ಶುಭ ಕೋರಿದರು.

ಈ‌ ರೀತಿಯ ಕ್ರೀಡೆಯ ಮೂಲಕ ಹಿರಿಯರು ಕೊಡುಗೆ ನೀಡಿದ್ದಾರೆ. ಅದರ ಕಾರಣದಿಂದ ಪಾಶ್ಚಾತ್ಯ ಸಂಸ್ಕೃತಿ ಎಷ್ಟೇ ಪ್ರಭಾವ ನೀಡಿದರೂ ನಮ್ಮ ತುಳುನಾಡ ಸಂಸ್ಕೃತಿಯನ್ನು ಮೆಟ್ಟಿನಿಲ್ಲಲು ಯಾರಿಂದಲೂ ಸಾಧ್ಯವಾಗಿಲ್ಲ ಎಂಬುದು ಕಠಿಣ ಸತ್ಯ ಎಂದವರು‌ ಹೇಳಿದರು.

ವರ್ಷದಲ್ಲಿ ಕಂಬಳ ನಡೆಯುವ ದಿವಸಗಳು 25 ರಿಂದ 26.
ಆ ಸಮಯದಲ್ಲಿ ಕೋಣಗಳನ್ನು ಪರಿಪಾಲಿಸಲು ಯಜಮಾನರು, ಪರಿಚಾರಕರು ಪ್ರೀತಿಯಿಂದ ಸ್ವಲ್ಪ ಅದಕ್ಕೆ ಹೊಡೆತ‌ ನೀಡಿದರೂ‌ ಕೂಡ ವರ್ಷದ ಬಾಕಿ 340 ದಿನಗಳಲ್ಲಿ ಯಜಮಾನನಿಗೆ ಹಿರಿಯ ಮಗ ಯಾರೆಂದು ಕೇಳಿದರೆ ಆತ ಪ್ರೀತಿಯಿಂದ ಸಾಕುವ ಕೋಣಗಳೇ. ಆ ರೀತಿ ಅದನ್ನು ಸಾಕಿರುತ್ತಾರೆ ಎಂಬುದನ್ನು ನಾವು ಮನರಿಕೆ ಮಾಡಬೇಕಾದುದು ನಮ್ಮ ಜವಾಬ್ದಾರಿ ಎಂದು ಅವರು ಸೂಚ್ಯವಾಗಿ ತಿಳಿಸಿದರು

ಈ ಸಂದರ್ಭದಲ್ಲಿ
ಯುವ ಕಾಂಗ್ರೆಸ್ ಜಿಲ್ಲಾ ಮುಖಂಡರಾದ ಅಭಿನಂದನ್ ಹರೀಶ್‌ ಕುಮಾರ್, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ ಹಾಗೂ ಇತರರು ಉಪಸ್ಥಿತರಿದ್ದರು.
ಕಂಬಳ ಸಮಿತಿ ಅಧ್ಯಕ್ಷ ರಂಜನ್ ಜಿ ಗೌಡ ಸ್ವಾಗತಿಸಿದರು.
ಕಾರ್ಯಾಧ್ಯಕ್ಷ ಪುಷ್ಪರಾಜ ಶೆಟ್ಟಿ ಸಹಿತ ಎಲ್ಲಾ ಪದಾಧಿಕಾರಿಗಳು ಸಭಾಪತಿಗಳನ್ನು ಗೌರವಿಸಿದರು.

Related posts

ಸುಜಾತಾ ಭಟ್ ನೀಡಿದ ನಾಪತ್ತೆ ಪ್ರಕರಣ: ಎಸ್ಐಟಿ ಕಚೇರಿಗೆ ಹಾಜರಾದ ವಸಂತಿ ಸಹೋದರ ವಿಜಯ್

Suddi Udaya

ಬಂಟ್ವಾಳ ಅಬ್ದುಲ್ ರಹಿಮಾನ್‌ ಕೊಲೆ ಪ್ರಕರಣ: ಆರೋಪಿಗಳಿಬ್ಬರನ್ನು ಬೆಳ್ತಂಗಡಿಗೆ ಕರೆತಂದು ಮಹಜರು

Suddi Udaya

ಉಜಿರೆ: ಬೆನಕ ಆಸ್ಪತ್ರೆಯಲ್ಲಿ ನೂತನ “ವೆಂಟಿಲೇಟರ್” ಉದ್ಘಾಟನೆ

Suddi Udaya

ಬಾವಿ ಒಳಗೆ ನೀಲಿ ಬಣ್ಣ ನೀರು ಸುತ್ತಮುತ್ತ ಕೆಂಪು ನೀರು

Suddi Udaya

ಬಿಜೆಪಿ ಕಾರ್ಯಕರ್ತರ ಮೇಲಿನ ದಬ್ಬಾಳಿಕೆ ಸಹಿಸುವುದಿಲ್ಲ; ಶಾಸಕ ಹರೀಶ್ ಪೂಂಜರ ಬಂಧನ ದುಸ್ಸಾಹಸಕ್ಕೆ ಕೈಹಾಕಿದರೆ ಮುಂದೆ ಆಗುವ ವಿಚಾರಗಳಿಗೆ ಪೊಲೀಸ್ ಇಲಾಖೆ ಹಾಗೂ ಸರಕಾರ ನೇರ ಹೊಣೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರತಿಕ್ರಿಯೆ

Suddi Udaya

ಉಜಿರೆ ಪರಿಸರದ ಕೆಲ ಲಾಡ್ಜಗಳಿಗೆ
ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿ, ನೇತೃತ್ವದಲ್ಲಿ ದಾಳಿ: ಕಾನೂನು ಬಾಹಿರ ಚಟುವಟಿಕೆ ನಡೆಸದಂತೆ ಸೂಚನೆ

Suddi Udaya
error: Content is protected !!