33.4 C
ಪುತ್ತೂರು, ಬೆಳ್ತಂಗಡಿ
March 18, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಮಾ.19: ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ರಾಮಾಯಣ ತರಗತಿ ಆರಂಭ

ನಾವೂರು: ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ನಾವೂರು ಇದರ ಆಶ್ರಯದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಮಾ.19ರಂದು “ಚಾಂದ್ರಮಾನ ಯುಗಾದಿ” ಪರಾಭವ ನಾಮ ಸಂವತ್ಸರಾರಂಭದ ಅಂಗವಾಗಿ ಬೆಳಿಗ್ಗೆ ೮ರಿಂದ ದೀಪ ಪ್ರಜ್ವಲನ, ಸಾಮೂಹಿಕ ವಿಷ್ಣುಸಹಸ್ರನಾಮ ಪಠಣ ವಿಶೇಷ ಪೂಜೆ, ಪಂಚಾಂಗ ಶ್ರವಣ, ಬೇವು ಬೆಲ್ಲ ವಿತರಣೆ ಹಾಗೂ ಗೀತಾ ಗ್ರಾಮ ಅನುಷ್ಠಾನದ ಪ್ರಯುಕ್ತ ರಾಮಾಯಣ ತರಗತಿ ಆರಂಭವಾಗುವುದು ಎಂದು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ದೀಪ ಪ್ರಜ್ವಲನೆಯನ್ನು ಲ್ಯಾಲ ಪ್ರಸನ್ನ ಎಜ್ಯುಕೇಶನಲ್ ಟ್ರಸ್ಟ್ ಅಧ್ಯಕ್ಷರಾದ ಪ್ರಸನ್ನ ಗಂಗಾಧರ ಗೌಡ ಮತ್ತು ಗಂಗಾಧರ ಗೌಡ ದಂಪತಿಗಳು ನೆರವೇರಿಸಲಿರುವರು. ನಿವೃತ್ತ ಪ್ರಾಚಾರ್ಯ ಗಣಪತಿ ಭಟ್ ಕುಳಮರ್ವ ಗೌರವ ಉಪಸ್ಥಿತಿ ವಹಿಸಲಿರುವರು.

ಪ್ರತಿ ಶನಿವಾರ ಸಂಜೆ ಗಂಟೆ 7.00 ರಿಂದ ಭಜನೆ, ರಾತ್ರಿ ಗಂಟೆ 8.00ರಿಂದ ವಿಷ್ಣುಸಹಸ್ರನಾಮ ತರಗತಿ ನಡೆಯಲಿರುವುದು ಹಾಗೂ ಮುಂದಿನ ದಿನಗಳಲ್ಲಿ ರಾಮಾಯಣ ತರಗತಿ ನಡೆಯಲಿದೆ. ಊರ ಪರವೂರ ಎಲ್ಲಾ ಭಗವದ್ಭಕ್ತರು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಪ್ರಕಟನೆಯಲ್ಲಿ ತಿಳಿಸಿದೆ.

Related posts

ಕಾಪಿನಡ್ಕ: ರಸ್ತೆ ಅಪಘಾತದಲ್ಲಿ ದೊಡ್ಡ ದುರಂತವನ್ನು ತಪ್ಪಿಸಿದ ಟಿಪ್ಪರ್ ಚಾಲಕ,

Suddi Udaya

ಬೆಳ್ತಂಗಡಿ ವಿಮೆನ್ ಇಂಡಿಯಾ ಮೂವ್ಮೆಂಟ್ ಘಟಕ ವತಿಯಿಂದ ದಯಾ ಶಾಲೆಯ ವಿಶೇಷ ಚೇತನ ಮಕ್ಕಳೊಂದಿಗೆ ಮಕ್ಕಳ ದಿನಾಚರಣೆ

Suddi Udaya

ಕಾಶಿಬೆಟ್ಟು ಸ್ವಾಮಿ ಪ್ರಸಾದ್ ಅಸೋಸಿಯೇಟ್ಸ್ ನಲ್ಲಿ ಆಯುಧ ಪೂಜೆ

Suddi Udaya

ಬೆಳ್ತಂಗಡಿ ಧರ್ಮ ಪ್ರಾಂತ್ಯ ರಜತ ಸಂಭ್ರಮ: ವಿಧಾನ ಸಭಾ ಅಧ್ಯಕ್ಷ ಯು ಟಿ ಖಾದರ್ ಗೆ ಆಮಂತ್ರಣ

Suddi Udaya

ನಾಲ್ಕೂರು: ಯುವಶಕ್ತಿ ಫ್ರೆಂಡ್ಸ್ ವತಿಯಿಂದ ವಾಹನ ಪೂಜೆ

Suddi Udaya

ಉಜಿರೆ ಅರಳಿ ಮಿತ್ರ ಯುವಕ ಮಂಡಲ ಹಾಗೂ ಮಹಿಳಾ ಮಂಡಲದ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!